ದೆಹಲಿ: ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರದ ವತಿಯಿಂದ ರೈತರಿಗೆ ನೀಡಲಾಗುವ 17ನೇ ಕಂತಿನ ಹಣವನ್ನು ಇಂದು ಬಿಡುಗಡೆಗೊಳಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿಯಲ್ಲಿ ಅಧಿಕೃತವಾಗಿ ಇಂದು ಹಣ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 9.3 ಕೋಟಿ ರೈತರ ಖಾತೆಗಳಿಗೆ 20 ಸಾವಿರ ಕೋಟಿ ಹಣ ಜಮೆ ಆಗಲಿದೆ. ಪ್ರತಿಯೊಬ್ಬ ರೈತನ ಖಾತೆಗೂ 2 ಸಾವಿರ ರೂ ಹಣ ಜಮೆ ಆಗಲಿದ್ದು, ಆ ಮೂಲಕ ಆ ರೈತನಿಗೆ ವರ್ಷಕ್ಕೆ ಒಟ್ಟು 6 ಸಾವಿರ ರೂ ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿದೆ. ಈವರೆಗೆ 16 ಕಂತುಗಳ ಹಣ ಬಿಡುಗಡೆಯಾಗಿದ್ದು, ಇಂದು 17ನೇ ಕಂತು ಬಿಡುಗಡೆಯಾಗಲಿದೆ. 2 ಸಾವಿರದಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ ರೈತರ ಖಾತೆಗೆ ಹಣ ಜಮೆ ಮಾಡಲಾಗುತ್ತದೆ.
