Home ಕೇಂದ್ರ ಸರಕಾರ ಅತೀ ಸಣ್ಣ ರೈತರಿಗೆ ಜೀವನೋಪಾಯ ಪರಿಹಾರ ರೂ.3000 ಜಮೆ

ಅತೀ ಸಣ್ಣ ರೈತರಿಗೆ ಜೀವನೋಪಾಯ ಪರಿಹಾರ ರೂ.3000 ಜಮೆ

ರಾಜ್ಯದಲ್ಲಿ ಬರಗಾಲ ಹಿನ್ನೆಲೆಯಲ್ಲಿ ಒಟ್ಟು 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಗಾಲ ಪ್ರದೇಶ ಎಂದು ಈಗಾಗಲೇ ಘೋಷಣೆ ಮಾಡಿದ್ದು, ಈಗಾಗಲೇ ಮೊದಲ ಕಂತಿನಲ್ಲಿ ಅರ್ಹ ರೈತರಿಗೆ ಗರಿಷ್ಠ ರೂ. 2,000 ವರೆಗೆ ಬೆಳೆಹಾನಿ ಪರಿಹಾರ ಮೊತ್ತವನ್ನು ನೀಡಲಾಗುತ್ತಿದೆ. ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು ಶೀಘ್ರದಲ್ಲೇ ಸರ್ಕಾರ ಬಿಡುಗಡೆ ಮಾಡಲಿದೆ

ಕೇಂದ್ರ ಸರ್ಕಾರದಿಂದ ಜಮೆ
ಕೇಂದ್ರ ಸರ್ಕಾರದಿಂದ ಬಿಡುಗಡೆಗೊಂಡ ಅನುದಾನದಲ್ಲಿ 2,451 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರವು ರಾಜ್ಯದ ಸುಮಾರು 27 ಲಕ್ಷಕ್ಕೂ ಅಧಿಕ ರೈತರ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡಿತ್ತು. ಇದೀಗ ಕೇಂದ್ರ ಸರ್ಕಾರದಿಂದ ಬಂದ ಅನುದಾನದಲ್ಲಿ ಬಾಕಿ ಉಳಿದಿರುವ 1,000 ಕೋಟಿ ಜೊತೆಗೆ ರಾಜ್ಯ ಸರ್ಕಾರವು ಸೇರಿಸಿ ಅತೀ ಸಣ್ಣ ರೈತರಿಗೆ‌ ನೆರವು ನೀಡಲಿದೆ.

ಎಷ್ಟು ಜಮೆ?
ಕೇಂದ್ರ ಸರ್ಕಾರವು ಬರ ಉಂಟಾದ ರೈತರಿಗೆ 3,454 ಕೋಟಿ ರೂ ವನ್ನು ಬೆಳೆ ನಷ್ಟ ಪರಿಹಾರವನ್ನಾಗಿ ಕರ್ನಾಟಕಕ್ಕೆ ಈಗಾಗಲೇ ನೀಡಿದೆ. ಇದರಲ್ಲಿ ನೀರಾವರಿ ಬೆಳೆಗಳಿಗೆ 17,000 ರೂ, ಬಹುವಾರ್ಷಿಕ ಬೆಳೆಗೆ ‌ 22,000 ರೂ,ಮಳೆ ಆಶ್ರಿತ ಬೆಳೆಗಳು 8,500 ರೂ ನೀಡಲಿದೆ.

ಬ್ಯಾಂಕುಗಳು ವಸೂಲಿ ಮಾಡುವಂತಿಲ್ಲ
ಸರ್ಕಾರದಿಂದ ಬಿಡುಗಡೆ ಮಾಡಿರುವ ಬರ ಪರಿಹಾರದ ಹಣವು ಬ್ಯಾಂಕಿನಲ್ಲಿ ಸಾಲದ ಖಾತೆಗೆ ಜಮಾ ಆಗಿತ್ತಿರುವ ಕುರಿತು ದೂರುಗಳು ಬಂದಿದ್ದು, ಸರ್ಕಾರದಿಂದ ಬಿಡುಗಡೆಯಾದ ಯಾವುದೇ ತರಹದ ಪ್ರೋತ್ಸಾಹ ಧನವನ್ನು ಸಾಲದ ಖಾತೆಗೆ ಹೊಂದಾಣಿಕೆ ಮಾಡುವಂತಿಲ್ಲ‌ ಎಂದು ಮುಖ್ಯ ಮಂತ್ರಿ ಸ್ಪಷ್ಟನೆ ನೀಡಿದ್ದಾರೆ..

ಪರಿಹಾರ ನೀಡಲಿದೆ
ಈಗಾಗಲೇ ಒಂದು ವಾರದೊಳಗೆ ರೈತರಿಗೆ ಪರಿಹಾರ ನೀಡಲು ಸೂಚನೆ ನೀಡಲಾಗಿದ್ದು 40-41 ಲಕ್ಷ ರೈತರಿಗೆ ಪರಿಹಾರ ಪಾವತಿ ವಿತರಣೆ ಮಾಡಲಾಗುತ್ತೆ. 17 ಲಕ್ಷದ 9 ಸಾವಿರ ರೈತ ಕುಟುಂಬಕ್ಕೆ ಜೀವನೋಪಾಯ ಪರಿಹಾರ ನೀಡಲಿದ್ದೇವೆ ಎಂದು ‌ಸಚಿವರು ತಿಳಿಸಿದ್ದಾರೆ. ರಾಜ್ಯದ 17.09 ಲಕ್ಷ ಸಣ್ಣ ಹಾಗೂ ಅತಿ ಸಣ್ಣ ರೈತ ಕುಟುಂಬಗಳಿಗೆ ಜೀವನೋಪಾಯ ನಷ್ಟ ಪರಿಹಾರವಾಗಿ ತಲಾ 3,000 ರೂ ನೀಡಲಿದ್ದು ಈ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.

 
Previous articleಲೇಬರ್ ಕಾರ್ಡ್ ಯಾರು ಮಾಡಿಸಬಹುದು? ಇದರ ಸೌಲಭ್ಯ ಪಡೆಯಲು ಅರ್ಹತೆ ಏನು?
Next articleಕಡಲ್ಕೊರೆತ ತಡೆಗೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ತಲಾ 5 ಕೋಟಿ ರೂ. ಅನುದಾನ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌