Home ರಾಜ್ಯ ಸರಕಾರ ಶಕ್ತಿ ಯೋಜನೆ ದುರುಪಯೋಗದ ಆರೋಪ, ಸಾರಿಗೆ ಇಲಾಖೆಯಿಂದ ಬಂತು ಹೊಸ ರೂಲ್ಸ್

ಶಕ್ತಿ ಯೋಜನೆ ದುರುಪಯೋಗದ ಆರೋಪ, ಸಾರಿಗೆ ಇಲಾಖೆಯಿಂದ ಬಂತು ಹೊಸ ರೂಲ್ಸ್

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಚುನಾವಣೆ ಪೂರ್ವದಲ್ಲಿ ಪಂಚ ಗ್ಯಾರೆಂಟಿ ಈಡೇರಿಸುವ ಬಗ್ಗೆ ಭರವಸೆ ನೀಡಿತ್ತು. ಅದೇ ರೀತಿ ಮಹಿಳೆಯರಿಗೆಲ್ಲ ಉಚಿತವಾಗಿ ಪ್ರಯಾಣ ಮಾಡಲು ಅನುಕೂಲ ಆಗುವಂತೆ ರಾಜ್ಯ ಸರ್ಕಾರವು ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದು ಅನೇಕ ಮಹಿಳೆಯರ ದೈನಿಕ ಕಚೇರಿ ಕೆಲಸಕ್ಕೆ, ಶಾಲೆ , ಕಾಲೇಜು, ದೇವಸ್ಥಾನ, ಪ್ರವಾಸಿ ಸ್ಥಳ, ಕುಟುಂಬದವರ ಮನೆ ಹೀಗೆ ನಾನಾ ಕಾರಣಕ್ಕೆ ಪ್ರಯಾಣ ಮಾಡುವ ಮಹಿಳೆಯರಿಗೆ ಅನುಕೂಲ ಆಗಿದೆ ಎಂದು ಹೇಳಬಹುದು.

ರಾಜ್ಯಾದ್ಯಂತ ಶಕ್ತಿ ಯೋಜನೆ ಅಡಿ ಐಷರಾಮಿ, ಸ್ಲೀಪಿಂಗ್ ಕೋಚ್ ಬಸ್ ನಲ್ಲಿ ಪ್ರಯಾಣ ಮಾಡುವ ಮಹಿಳೆಯರನ್ನು ಹೊರತು ಪಡಿಸಿ ಕೆಎಸ್‌ಆರ್‌ಟಿಸಿ ನಾಲ್ಕು ನಿಗಮದಲ್ಲಿ ಕೂಡ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದ್ದು, ಬಡ ಜನರಿಗೆ ಇದು ಬಹಳ ಅನುಕೂಲ ಕಲ್ಪಿಸಿದೆ. ಪ್ರಯಾಣದ ಸಂದರ್ಭದಲ್ಲಿ ಕಡ್ಡಾಯವಾಗಿ ಆಧಾರ್ ಕಾರ್ಡ್ ಅಥವಾ ವಾಹನ ಪರವಾನಿಗೆ ತೋರಿಸಬೇಕಿದ್ದು, ಟಿಕೇಟ್ ನೀಡುವಾಗ ಶಕ್ತಿ ಯೋಜನೆ ಎಂದು ಶೂನ್ಯ ಬೆಲೆ ಬರಲಿದೆ.

ಆಪಾದನೆ?
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಂತಹ ಶಕ್ತಿ ಯೋಜನೆಯನ್ನು ಸಾರಿಗೆ ಇಲಾಖೆಯ ಸಿಬಂದಿಗಳು ಅಂದರೆ ಬಸ್ ನಿರ್ವಾಹಕರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಆಪಾದನೆ ಕೇಳಿ ಬರುತ್ತಿದೆ. ಬಸ್ ನ ನಿರ್ವಾಹಕರು ಸರ್ಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಇದೆ ಎಂದು ತಿಳಿದಿದ್ದರೂ ಕೂಡ ಹೆಚ್ಚಿನ ಮಹಿಳೆಯರು ಪ್ರಯಾಣ ಮಾಡಿದ್ದಾರೆ ಎಂದು ಬಿಂಬಿಸಿ ಹೆಚ್ಚಿನ ಟಿಕೆಟ್ ಲೆಕ್ಕ ತೋರಿಸುತ್ತಿದ್ದಾರೆ.

ನಮಗೆಲ್ಲ ತಿಳಿದಂತೆ ಬಸ್ ನ ನಿರ್ವಹಣೆಗೆ ಹಾಗೂ ಶಕ್ತಿ ಯೋಜನೆಗೆ ಸರ್ಕಾರ ಅನುದಾನ ಮೀಸಲಿಟ್ಟಿದ್ದು ಈ ಖರ್ಚಿನ ಆಧಾರದ ಮೇಲೆ ಪ್ರತಿ ತಿಂಗಳು ಕೂಡ ಹಣ ಜಮೆ ಮಾಡಲಾಗುವುದು. ಹೆಚ್ಚಿನ ಮೊತ್ತದ ಟಿಕೆಟ್ ನೀಡಿ ಆ ಹಣವನ್ನು ಬಸ್ ನ ಚಾಲಕ ಮತ್ತು ನಿರ್ವಾಹಕರೇ ಲಪಟಾಯಿಸುತ್ತಿದ್ದಾರೆ ಎಂಬ ಮಾಹಿತಿ ಸರ್ಕಾರಕ್ಕೆ ಬಂದಿದ್ದು ಈ ಬಗ್ಗೆ ಸರ್ಕಾರ ಅಂತವರ ವಿರುದ್ಧ ಶೀಘ್ರ ಕ್ರಮ ಜಾರಿಗೆ ತರಲು ಚಿಂತಿಸುತ್ತಿದೆ ಎನ್ನಬಹುದು.

ಸಾರಿಗೆ ಇಲಾಖೆ ಕ್ರಮ
ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿ ಪ್ರಯಾಣ ಮಾಡಿದರೂ ಅಧಿಕ ಲೆಕ್ಕ ತೋರಿಸುವುದು ಕಂಡು‌ಬಂದಿದ್ದು ಬಸ್ ನಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಇಲ್ಲದಿದ್ದರೂ ಟಿಕೆಟ್ ಅಧಿಕ ವಿತರಣೆ ಆಗುತ್ತಿದ್ದ ಹಿನ್ನೆಲೆಯಲ್ಲಿ ಬಸ್ ನಿರ್ವಾಹಕರ ವಿರುದ್ಧ ಸಾರಿಗೆ ಇಲಾಖೆಯ ನಿಯಮ ಉಲ್ಲಂಘನೆ ನಿಯಮ 22ರ ಅನ್ವಯ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರ ಚಿಂತಿಸಿದೆ. ಪ್ರಯಾಣಿಕರಿಂದ ಅಧಿಕ ಹಣ ಸಂಗ್ರಹ, ಟಿಕೆಟ್ ಸೋರಿಕೆ ಮೊತ್ತ, ಟಿಕೆಟ್ ನೀಡದೆ ಇರುವುದು ಮುಂತಾದ ನ್ಯೂನ್ಯತೆಯ ವಿರುದ್ಧ ನಿರ್ವಾಹಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಹೊಸ ರೂಲ್ಸ್ ಅನ್ನು ಸಾರಿಗೆ ಇಲಾಖೆ ಸೂಚಿಸಿದೆ.

 
Previous article18 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ ಸಿಗ್ತಿದೆ ಒಂದು ಲಕ್ಷ ರೂಪಾಯಿ
Next articleಧೂಮಪಾನ ಮಾಡುವುದರಿಂದ ದೃಷ್ಟಿಗೆ ಸಂಬಂಧಿಸಿದ ತೊಂದರೆ ಕೂಡ ಎದುರಾಗುತ್ತದೆ..!