Home ಸರಕಾರಿ ಯೋಜನೆಗಳು ಕೇಂದ್ರ ಸರಕಾರ 17 ನೇ ಕಂತಿನ ಕಿಸಾನ್ ಹಣ ರೈತರ ಖಾತೆಗೆ ಯಾವಾಗ ಜಮೆಯಾಗಲಿದೆ?

17 ನೇ ಕಂತಿನ ಕಿಸಾನ್ ಹಣ ರೈತರ ಖಾತೆಗೆ ಯಾವಾಗ ಜಮೆಯಾಗಲಿದೆ?

0
17 ನೇ ಕಂತಿನ ಕಿಸಾನ್ ಹಣ ರೈತರ ಖಾತೆಗೆ ಯಾವಾಗ ಜಮೆಯಾಗಲಿದೆ?

ಕೇಂದ್ರ ಸರಕಾರವು ರೈತರ ಅಭಿವೃದ್ಧಿ ಗಾಗಿ ಹಲವು ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಯುವಕರನ್ನು ಕೂಡ ಕೃಷಿಯತ್ತ ಆಕರ್ಷಣೆ ಮಾಡಲು ಕೃಷಿ ಚಟುವಟಿಕೆಗಳ ತರಬೇತಿ, ಸಾಲ ಸೌಲಭ್ಯ, ಆರ್ಥಿಕ ಸೌಲಭ್ಯ ಇತ್ಯಾದಿಗಳನ್ನು ಒದಗಿಸುತ್ತಿದೆ. ಇಂದು ರೈತರ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ಹಲವು ರೀತಿಯ ಯೋಜನೆಯನ್ನು ರೂಪಿಸುವಲ್ಲಿ ಸಫಲವಾಗಿದೆ.ಅದೇ ರೀತಿಯಲ್ಲಿ ರೈತರ ಅನುಕೂಲಕ್ಕಾಗಿ ಮಾಡಿದ ಕಿಸಾನ್ ಯೋಜನೆ ರೈತರನ್ನು ಆರ್ಥಿಕವಾಗಿ ಪ್ರೋತ್ಸಾಹಿಸುತ್ತಿದೆ. ಇಲ್ಲಿಯವರೆಗೆ ರೈತರಿಗೆ 16 ನೇ ಕಂತಿನ ವರೆಗೆ ಹಣ ಜಮೆ ಯಾಗಿದ್ದು ಹದಿನೇಳನೇ ಕಂತಿನ ಹಣ ಯಾವಾಗ ಖಾತೆಗೆ ಬರಲಿದೆ ಎಂದು ರೈತರು ಕಾಯುತ್ತಿದ್ದಾರೆ.

ರೈತರ ಖಾತೆಗೆ ಎರಡು ಸಾವಿರ ಜಮೆ
ಈ ಯೋಜನೆ 2018ರ ಡಿ. 1ರಿಂದ ಆರಂಭವಾಗಿದ್ದು, ರೈತರಿಗೆ ಕೃಷಿಗೆ ಬೇಕಾದ ಕಚ್ಚ ವಸ್ತುಗಳನ್ನು ಖರೀದಿ ಮಾಡಲು, ಈ ಹಣ ಸಹಾಯಕವಾಗುತ್ತಿದ್ದು ರೈತರ ಖಾತೆಗೆ ನೇರವಾಗಿ ಕಿಸಾನ್ ಹಣವನ್ನು ಕೇಂದ್ರ ಸರಕಾರ ಜಮೆ ಮಾಡುತ್ತಿದೆ. ಮೂರು ಕಂತುಗಳಲ್ಲಿ ಹಣ ಜಮೆ ಮಾಡುತ್ತಿದ್ದು ತಿಂಗಳಿಗೊಮ್ಮೆ 2 ಸಾವಿರ ಹಣ ‌ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುತ್ತಿದೆ. ಇದರ ಮೂಲಕ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕನಿಷ್ಠ ಆದಾಯ ಬೆಂಬಲವಾಗಿ ವರ್ಷಕ್ಕೆ 6,000 ರೂ. ಖಾತೆಗೆ ಜಮೆಯಾಗುತ್ತಿದೆ.

17 ನೇ ಕಂತಿನ ಹಣ ಯಾವಾಗ ಬರಲಿದೆ?
ಈಗಾಗಲೇ 16 ಕಂತಿನ ಹಣ ರೈತರಿಗೆ ತಲುಪಿದೆ.‌17ನೇ ಕಂತಿನ ಹಣ ಇನ್ನಷ್ಟೆ ಖಾತೆಗೆ ಜಮೆ ಯಾಗಬೇಕಿದೆ. ಇನ್ನೂ 16 ನೇ ಕಂತಿನ ಹಣ ಕೆಲವು ರೈತರಿಗೆ ಫೆಬ್ರವರಿ ತಿಂಗಳಿನಲ್ಲಿ ಜಮೆ ಆಗಿದ್ದು 17ನೇ ಕಂತಿನ ಹಣವು ಮೇ, ಜೂನ್ ಈ ತಿಂಗಳಿನಲ್ಲಿ ಜಮೆ ಯಾಗಬಹುದು.ಆದರೆ ಈ ಯೋಜನೆಯ ಹಣ ಖಾತೆಗೆ ಸರಿಯಾದ ಸಮಯಕ್ಕೆ ಜಮೆ ಯಾಗಬೇಕಿದ್ರೆ ರೈತರು eKYC ಆಪ್ಡೆಡ್ ಮಾಡುವುದು ಕಡ್ಡಾಯವಾಗಿದೆ.

ನೋಂದಣಿ ಮಾಡಿ
ಈ ಯೋಜನೆಗೆ ನೊಂದಣಿ ಮಾಡಬೇಕಿದ್ರೆ pmkisan.gov.in ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿ NEW FARMER REGISTRATION ಎಂಬ ಆಯ್ಕೆಯ ಕ್ಲಿಕ್ ಮಾಡಿ, NEW FARMER REGISTRATION FORM ನಲ್ಲಿ ತಮ್ಮ ಹೆಸರು, ಕೃಷಿ ಜಮೀನು ಮಾಹಿತಿ, ಆಧಾರ್ ಕಾರ್ಡ್ ನಂ‌ ಇತ್ಯಾದಿಯನ್ನು ದಾಖಲಿಸುವ ಮೂಲಕ ನೊಂದಣಿ ಮಾಡಬಹುದು‌.

 

LEAVE A REPLY

Please enter your comment!
Please enter your name here