
ಆಧಾರ್ ಕಾರ್ಡ್ ಎನ್ನುವುದು ಭಾರತೀಯ ಪ್ರತಿಯೊಬ್ಬ ವ್ಯಕ್ತಿಗೂ ಬಹು ಮುಖ್ಯವಾದ ದಾಖಲೆ ಎಂದೆನಿಸಿದೆ. ಹಾಗಾಗಿ ಆಧಾರ್ ಮಾಹಿತಿ ಆಪ್ ಡೇಟ್ ಮಾಡುವುದು ಸಹ ಅಷ್ಟೆ ಮುಖ್ಯ. ಇಂದು ಸರಕಾರಿ ಯೋಜನೆಯ ಯಾವುದೇ ಸೌಲಭ್ಯ ಪಡೆಯುದಾದ್ರೂ ಪ್ರತಿಯೊಂದು ಇಲಾಖೆಗಳಲ್ಲೂ ಆಧಾರ್ ಕಾರ್ಡ್ ಸಲ್ಲಿಕೆ ಕಡ್ಡಾಯ ಮಾಡಲಾಗುತ್ತಿದೆ. ಹಾಗೇ ಸಮಯಕ್ಕೆ ಸರಿಯಾಗಿ ನಾವು ಆಧಾರ್ ಮಾಹಿತಿ ಕೂಡ ಆಪ್ಡೇಟ್ ಮಾಡಬೇಕಾಗುತ್ತದೆ.
ಗುಡ್ ನ್ಯೂಸ್
ನಿಮ್ಮ ಆಧಾರ್ ಕಾರ್ಡ್ ಹತ್ತು ವರ್ಷಕ್ಕಿಂತ ಹಳೆಯದಾಗಿದ್ದರೆ ಅದನ್ನು ಅಪ್ ಡೇಟ್ ಮಾಡಿ ಕೊಳ್ಳಬೇಕು ಎಂದು ಕೇಂದ್ರ ಸರಕಾರ ಸ್ಪಷ್ಟನೆ ಕೂಡ ನೀಡಿದೆ. ನಿಮ್ಮ ಆಧಾರ್ ನಲ್ಲಿ ಹೆಸರು, ವಿಳಾಸ ಫೋಟೋ , ಮೊಬೈಲ್ ನಂ ಇತ್ಯಾದಿ ಬದಲಾಯಿಸಬೇಕಿದ್ರೆ ಉಚಿತವಾಗಿ ನೀವು ಆಪ್ ಡೇಟ್ ಮಾಡುವ ಬಗ್ಗೆ ಸರಕಾರ ಇದೀಗ ಮಾಹಿತಿ ನೀಡಿದೆ.
ಸಮಯ ವಿಸ್ತರಣೆ
ಹೌದು ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕು ಎಂದಿದ್ದವರಿಗೆ ತಿದ್ದುಪಡಿ ಮಾಡಲು ಮಾರ್ಚ್ 14ರ ವರೆಗೆ ಉಚಿತವಾಗಿ ಅಪ್ಡೇಟ್ ಮಾಡಲು ಅವಕಾಶ ನೀಡಿತ್ತು. ಆದರೆ ಈಗ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಿದ್ದು ಜೂನ್ 14ರ ವರೆಗೆ ಅವಕಾಶ ನೀಡಿದೆ.
ಸುಲಭವಾಗಿ ಆಪ್ಡೆಡ್ ಮಾಡಬಹುದು
ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಲು ಸುಲಭ ವಿಧಾನ ಇದ್ದು ಆನ್ಲೈನ್ ಮೂಲಕ ಸುಲಭವಾಗಿ ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಬಹುದು. ಮೊದಲಿಗೆ UIDAI ಲಿಂಕ್‌ನಲ್ಲಿ ಲಾಗ್ ಇನ್ ಮಾಡಿ ಆಧಾರ್ ಅನ್ನು ನವೀಕರಿಸಲು ಮುಂದುವರಿಯಿರಿ’ ಎಂಬ ಆಪ್ಚನ್ ಅನ್ನು ಕ್ಲಿಕ್ ಮಾಡಿ ನಿಮ್ಮಆಧಾರ್ ಸಂಖ್ಯೆಯನ್ನು ನಮೂದಿಸಿ, ನಂತರದಲ್ಲಿ ಬಂದಿರುವ ಭದ್ರತಾ ಕೋಡ್ ಅಥವಾ ಕ್ಯಾಪ್ಚಾ ಕೋಡ್ ಹಾಕಿ, ನಿಮಗೆ ಆ ಸಮಯದಲ್ಲಿ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ನಂತರ OTP ಹಾಕಿ ಬದಲಾವಣೆ ಮಾಡಬೇಕಾದ ಮಾಹಿತಿ ಗಳನ್ನು ಸಲ್ಲಿಸಿ.
