
ರೈತ ದೇಶದ ಪ್ರಮುಖ ವ್ಯಕ್ತಿ. ಇಂದು ರೈತರ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಹಲವು ರೀತಿಯ ಪ್ರಯತ್ನವನ್ನು ಮಾಡುತ್ತಲೆ ಬಂದಿದೆ. ರೈತರ ಕೃಷಿ ಚಟುವಟಿಕೆಗಳ ಅಭಿವೃದ್ಧಿಗೆ ನೆರವು ನೀಡುತ್ತಿದ್ದು ಅನೇಕ ಯೋಜನೆಯನ್ನು ಈಗಾಗಲೇ ರೈತರಿಗೆ ನೀಡಿದೆ. ಅದೇ ರೀತಿ ರೈತರಿಗೆ ಕೃಷಿ ಚಟುವಟಿಕೆಗಳಿಗೆ ನೀರು ಬಹಳ ಮುಖ್ಯ. ಕೃಷಿ ಪಂಪ್ ಸೇಟ್ ಗಳಿಗೆ ವಿದ್ಯುತ್ ಕೂಡ ಬಹಳ ಮುಖ್ಯ. ರೈತರು ಬೆಳೆಗಳಿಗೆ ನೀರು ಹಾಯಿಸುವಾಗ ವಿದ್ಯುತ್ ಕೈಕೊಡುವುದನ್ನು ತಪ್ಪಿಸುವ ಸಲುವಾಗಿ, ಕೃಷಿಕರಿಗೆ ತೋಟಗಾರಿಕೆ ಇಲಾಖೆಯು ಸೋಲಾರ್ ಪಂಪ್ ಸೆಟ್ಗಳನ್ನು ವಿತರಣೆ ಮಾಡುತ್ತಿದೆ. ಕಳೆದ 2014-15ರಲ್ಲಿ ಭಾರತದ MNRE ಅನುದಾನದ ಮೂಲಕ ರೈತರಿಗೆ ಸೌರ ವಿದ್ಯುತ್ ಪೂರೈಕೆಯನ್ನು ನೀಡುತ್ತಿದ್ದು ಇದು ರೈತರಿಗೆ ಬಹಳಷ್ಟು ಅನುಕೂಲ ಆಗಿದೆ.
ವಿದ್ಯುತ್ ಪೂರೈಕೆ
ಈ ಒಂದು ಸೌರ ವಿದ್ಯುತ್ ಪೂರೈಕೆಗೆ ರಾಜ್ಯ ಮತ್ತು ಕೇಂದ್ರ ಸರಕಾರ ಪ್ರೋತ್ಸಾಹ ನೀಡುತ್ತಲೆ ಬಂದಿದ್ದು ಹಲವು ರೈತರಿಗೆ ಈ ಯೋಜನೆಯ ಮಾಹಿತಿ ಕೂಡ ಇಲ್ಲ. ಹಾಗಾಗಿ ರೈತರು ಮಾಹಿತಿ ತಿಳಿದುಕೊಳ್ಳುವುದು ಬಹಳ ಮುಖ್ಯ. ಕೆಲವೊಮ್ಮೆ ಧಿಡೀರ್ ಆಗಿ ವಿದ್ಯುತ್ ಕೈ ಕೊಟ್ಟಾಗ ರೈತರಿಗೆ ಈ ಸೋಲಾರ್ ವ್ಯವಸ್ಥೆ ಬಹಳಷ್ಟು ಸಹಾಯಕವಾಗಬಹುದು.
ಎಷ್ಟು ಸಬ್ಸಿಡಿ ಮೊತ್ತ?
ಸೋಲಾರ್ ನಂತಹ ಸಾಂಪ್ರದಾಯಿಕ ಮತ್ತು ಕೃಷಿಗೆ ಪೂರಕವಾಗುವ ಇಂಧನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಸೋಲಾರ್ ಪಂಪ್ ಸೆಟ್ ಯೋಜನೆ ಜಾರಿಗೆ ಬಂದಿದ್ದು ರೈತರಿಗೆ ಸಾಕಷ್ಟು ನೇರವಾಗಿದೆ. ಇದು ಬಹುತೇಕ ಕೃಷಿಕರಿಗೆ ಸಾಕಷ್ಟು ನೆರವಾಗಲಿದೆ. ಸೋಲಾರ್ ಪಂಪ್ ಸೆಟ್ ಖರೀದಿಸಲು ಸಾಮಾನ್ಯ ವರ್ಗದವರಿಗೆ ಶೇ. 40 ರಷ್ಟು ಸಹಾಯಧನ ನೀಡುವುದಲ್ಲದೆ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ರೈತರಿಗೆ ಶೇ. 50 ರಷ್ಟು ಸಹಾಯಧನ ನೀಡುತ್ತದೆ.
*ಅದೇ ರೀತಿ 5 ಹೆಚ್.ಪಿ ಗಿಂತ ಹೆಚ್ಚಿನ ಕ್ವಾಲಿಟಿಯ ಸೋಲಾರ್ ಪಂಪ್ ಸೆಟ್ ಗಳಿಗೆ ವೆಚ್ಚ 3 ಲಕ್ಷ ರೂಪಾಯಿಗಳನ್ನು ಶೇ. 50 ರಂತೆ 1.50 ಲಕ್ಷ ರೂಪಾಯಿಗಳಿಗೆ ಮಿತಗೊಳಿಸಿ ಸಹಾಯಧನ ನೀಡಲು ಮುಂದಾಗಿದೆ.
ಈ ದಾಖಲೆಗಳು ಅಗತ್ಯ
ಆಧಾರ್ ಕಾರ್ಡ್ ಪ್ರತಿ
ಬ್ಯಾಂಕ್ ಪಾಸ್ ಬುಕ್,
ಫೋಟೋ
ಪಹಣಿ ಪತ್ರ
ಜಾತಿ ಆದಾಯ ಪ್ರಮಾಣ ಪತ್ರ.
ಇಲ್ಲಿ ಮಾಹಿತಿ ಪಡೆಯಿರಿ
ಈ ಸೋಲಾರ್ ಪಂಪ್ ಸೆಟ್ ಪಡೆಯಲು ರೈತರಿಗೆ ಸಲಹೆಗಳು ಬೇಕಾದಲ್ಲಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು. ಅಥವಾ ಕೃಷಿ ಇಲಾಖೆಗೆ ಭೇಟಿನೀಡಿ ಮಾಹಿತಿ ಪಡೆಯಬಹುದಾಗಿದೆ.
