Home ಸರಕಾರಿ ಯೋಜನೆಗಳು ಕೇಂದ್ರ ಸರಕಾರ ಪೋಸ್ಟ್ ಆಫೀಸ್ ಸ್ಕೀಮ್, ಕೇಂದ್ರ ಸರಕಾರದ ಕಿಸಾನ್ ವಿಕಾಸ್ ಯೋಜನೆ ಬಗ್ಗೆ ನಿಮಗೆ ತಿಳಿದಿದೆಯೇ?

ಪೋಸ್ಟ್ ಆಫೀಸ್ ಸ್ಕೀಮ್, ಕೇಂದ್ರ ಸರಕಾರದ ಕಿಸಾನ್ ವಿಕಾಸ್ ಯೋಜನೆ ಬಗ್ಗೆ ನಿಮಗೆ ತಿಳಿದಿದೆಯೇ?

0
ಪೋಸ್ಟ್ ಆಫೀಸ್ ಸ್ಕೀಮ್, ಕೇಂದ್ರ ಸರಕಾರದ ಕಿಸಾನ್ ವಿಕಾಸ್ ಯೋಜನೆ ಬಗ್ಗೆ ನಿಮಗೆ ತಿಳಿದಿದೆಯೇ?

ಇಂದು ಬಹಳಷ್ಟು ಜನ ಮುಂದಿನ ದಿನದಲ್ಲಿ ಬದುಕು ಸುಖಮಯವಾಗಿ ಸಾಗಲು ದುಡಿದ ಸ್ಬಲ್ಪ ಹಣವನ್ನಾದರೂ ಹೂಡಿಕೆ ಮಾಡುತ್ತಾರೆ. ಹೂಡಿಕೆ ಅಂತ ಬಂದಾಗ ಆಸ್ತಿ, ಚಿನ್ನ, ಸ್ಕೀಮ್, ಎಲ್ ಐಸಿ ಫಂಡ್ ಇತ್ಯಾದಿ ಮೂಲಕ ಹೂಡಿಕೆ ಮಾಡುತ್ತೇವೆ. ಅದರಲ್ಲೂ ಪೋಸ್ಟ್ ಆಫೀಸ್ ಮೂಲಕ ಹಣ ಹೂಡಿಕೆ ಮಾಡುವುದು ಉತ್ತಮ ಆಯ್ಕೆ ಯಾಗಿದೆ. ಅದೇ ರೀತಿ ಕೇಂದ್ರ ಸರಕಾರವು ಉಳಿತಾಯದ ಹವ್ಯಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸುರಕ್ಷಿತ ಭವಿಷ್ಯವನ್ನು ನೀಡಲು ವಿವಿಧ ಉಳಿತಾಯ ಯೋಜನೆಗಳನ್ನು ನೀಡುವ ಮೂಲಕ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ.

ಕೇಂದ್ರ ಸರಕಾರದ ಯೋಜನೆ
ಅಂಚೆ ಕಚೇರಿಯ ಅನೇಕ ರೀತಿಯ ಸಣ್ಣ ಉಳಿತಾಯ ಯೋಜನೆಗಳು ಜನತೆಗೆ ನೆರವಾಗುತ್ತಿದೆ. ಅವುಗಳಲ್ಲಿ ಮುಖ್ಯವಾಗಿ ಕಿಸಾನ್ ವಿಕಾಸ್ ಪತ್ರ ಯೋಜನೆ ಕೂಡ ಒಂದಾಗಿದ್ದು ಇದರಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಲಾಭಗಳಿಸಬಹುದು. ಈ ಯೋಜನೆಯಲ್ಲಿ ಶೇಕಡಾ 7 ಕ್ಕಿಂತ ಹೆಚ್ಚಿನ ಬಡ್ಡಿ ಸಿಗಲಿದೆ. ಈ ಯೋಜನೆಯನ್ನು ಸಾಮಾನ್ಯ ಜನರಲ್ಲಿಯು ಉಳಿತಾಯ ಮನೋಭಾವವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಿಸಾನ್‌ ವಿಕಾಸ್‌ ಪತ್ರ ಯೋಜನೆಯನ್ನು ಆರಂಭ ಮಾಡಿದೆ.

ಕನಿಷ್ಠ ಮೊತ್ತ ಹೂಡಿಕೆ
ಕಿಸಾನ್ ವಿಕಾಸ್ ಪತ್ರ ಯೋಜನೆಯನ್ನು ಅಂಚೆ ಕಛೇರಿಯ ಸಣ್ಣ ಉಳಿತಾಯ ಯೋಜನೆಗಳಲ್ಲಿ ಸೇರಿಸಲಾಗಿದೆ. ಈ ಯೋಜನೆಯಲ್ಲಿ ಕನಿಷ್ಠ ಮೊತ್ತದೊಂದಿಗೆ ಅಂದರೆ 1000 ರೂಪಾಯಿಗಳೊಂದಿಗೆ ಈ ಯೋಜನೆಯಲ್ಲಿ ಹೂಡಿಕೆಯನ್ನು ಮಾಡಬಹುದಾಗಿದೆ. ಇದರಲ್ಲಿ ವಾರ್ಷಿಕ ಶೇ. 6.9 ಬಡ್ಡಿ ಸಿಗುತ್ತದೆ. ಕನಿಷ್ಠ 1000 ರೂ. ಹಣ ಹೂಡಿಕೆ ಮಾಡಿದ್ರೆ ಶೇ.7.6 ಬಡ್ಡಿ ದೊರೆಯುತ್ತದೆ.

ಡಬಲ್ ಮೊತ್ತ ದೊರೆಯುತ್ತದೆ
ನೀವು ಕಿಸಾನ್ ವಿಕಾಸ್ ಪತ್ರದಲ್ಲಿ 1 ಲಕ್ಷ ರೂ ಹೂಡಿಕೆ ಮಾಡಿದ್ರೆ 10 ವರ್ಷದ ಒಳಗೆ ಆ ಹಣ ಎರಡು ಲಕ್ಷ ರೂ ಆಗಿರುತ್ತದೆ. ಅಗತ್ಯವಿದ್ದಾಗ ಈ‌ ಯೋಜನೆ ಪ್ರಾರಂಭಿಸಿದ ದಿನಾಂಕದಿಂದ ಎರಡು ಅಥವಾ ಒಂದೂವರೆ ವರ್ಷದಲ್ಲಿ ಹಣ ಹಿಂಪಡೆಯಲು ಅವಕಾಶ ಇದೆ.

ಈ ನಿಯಮ ಇದೆ
ಭಾರತೀಯ ನಾಗರಿಕರು ಈ ಯೋಜನೆಯ ಫಲ ಪಡೆಯಬಹುದು.‌ಹೂಡಿಕೆ ಮಾಡುವ ವ್ಯಕ್ತಿಯ ಕನಿಷ್ಠ 18 ವರ್ಷ ಆಗಿದ್ದರೆ ಸಾಕು. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕಿಸಾನ್‌ ವಿಕಾಸ್‌ ಪತ್ರಗಳನ್ನು ಪಡೆಯಲು ಅವಕಾಶ ಇದ್ದು ಒಬ್ಬ ಅರ್ಹ ವ್ಯಕ್ತಿ ಎಷ್ಟು ಖಾತೆ ಬೇಕಾದರೂ ತೆರೆಯಬಹುದು. ಅದೇ ರೀತಿ ಕಿಸಾನ್ ವಿಕಾಸ್ ಪತ್ರದ ((KVP) ಪ್ರಮಾಣಪತ್ರಗಳನ್ನು ವರ್ಗಾಯಿಸಲು ಅವಕಾಶವಿದೆ. ಭಾರತದಲ್ಲಿ ಒಂದು ಅಂಚೆ ಕಚೇರಿಯಿಂದ ಇನ್ನೊಂದು ಅಂಚೆ ಕಚೇರಿ ಶಾಖೆಗೆ ವರ್ಗಾಯಿಸಲು ಕೂಡ ಸಮ್ಮತಿ‌ ಇದೆ.

 

LEAVE A REPLY

Please enter your comment!
Please enter your name here