
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತೊಂದು ಇದೆ. ಇಂದು ಹೆಣ್ಣು ಮಕ್ಕಳ ಶಿಕ್ಷಣ ಕ್ಕೂ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಹೆಂದೆಲ್ಲಾ ಹೆಣ್ಣು ಮಗು ಜನಿಸಿದರೆ ಬೇಸರ ಪಡುವ ಕಾಲವಿತ್ತು. ಆದರೆ ಇಂದು ಹೆಣ್ಣು ಮಗುವಿನ ಆಗಮನಕ್ಕೆ ಕಾಯುವ ಅದೆಷ್ಟೋ ಕುಟುಂಬಗಳು ಇವೆ. ಇಂದು ಹೆಣ್ಣು ಮಕ್ಕಳು ಶಿಕ್ಷಣ ವಂತರಾಗಿ ಉದ್ಯೊಗ ಸೃಷ್ಟಿಸಿಕೊಂಡಿದ್ದಾರೆ. ಇದರೊಂದಿಗೆ ಸರಕಾರವು ಅನೇಕ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಆರ್ಥಿಕ ಉತ್ತೇಜನ ಸಹ ನೀಡುತ್ತಿದೆ.
ಮಹಿಳೆಯರ ಸಮೃದ್ಧಿ ಗೆ ಹಲವು ರೀತಿಯ ಯೋಜನೆ
ಇಂದು ಹೆಣ್ಣು ಮಕ್ಕಳ ಮಹಿಳೆಯರ ಒಳಿತಿಗಾಗಿ ಸರಕಾರ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ. ಈಗಾಗಲೇ ಭೇಟಿ ಬಚಾವೊ ಭೇಟಿ ಪಡಾವೊ, ರಾಜಶ್ರೀ ಯೋಜನೆ, ಬಾಲಿಕಾ ಸಮೃದ್ಧಿ ಯೋಜನೆ ಹೀಗೆ ಹಲವು ರೀತಿಯ ಯೋಜನೆಯನ್ನು ಆರಂಭ ಮಾಡಿದ್ದು ಹೆಣ್ಣು ಮಕ್ಕಳ ಶಿಕ್ಷಣ ಕ್ಕೆ ಒತ್ತು ನೀಡುತ್ತಿದೆ. ಹೆಣ್ಣು ಮಕ್ಕಳಿಗಾಗಿ ಉಚಿತ ಶಿಕ್ಷಣ, ಆರ್ಥಿಕ ಸಹಾಯಧನ, ಅನೇಕ ಸ್ಕೀಮ್ ಯೋಜನೆ ಜಾರಿಗೆ ತಂದಿದೆ.
ಈ ಯೋಜನೆಯ ನೆರವು ಪಡೆಯಿರಿ
ಬಾಲಿಕಾ ಸಮೃದ್ಧಿ ಯೋಜನೆ ಹೆಣ್ಣು ಮಗು ಜನಿಸಿದ ನಂತರ, ತಾಯಿಗೆ 500 ರೂಪಾಯಿ ಹಣ ದೊರಕಲಿದ್ದು 10 ನೇ ತರಗತಿವರೆಗೆ ಬಾಲಕಿಯ ಶಿಕ್ಷಣದ ಪ್ರತಿ ಹಂತದಲ್ಲೂ ಸರ್ಕಾರವು ಆರ್ಥಿಕ ನೆರವು ಒದಗಿಸುತ್ತದೆ.ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರವು ಹೆಣ್ಣು ಮಗುವಿನ ಶಿಕ್ಷಣಕ್ಕಾಗಿ ವಾರ್ಷಿಕ ವಿದ್ಯಾರ್ಥಿವೇತನವನ್ನು ಸಹ ನೀಡುತ್ತದೆ. ಒಂದರಿಂದ ಮೂರನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಗೆ 300 ರೂಪಾಯಿವರೆಗೆ ಸ್ಕಾಲರ್‌ಶಿಪ್ ಅನ್ನು ನೀಡಲಿದ್ದು ಆದರೆ 9 ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ 1000 ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ಈ ದಾಖಲಾತಿ ಬೇಕು
ಆಧಾರ್ ಕಾರ್ಡ್, ವಿದ್ಯಾರ್ಥಿಯ ಜನನ ಪ್ರಮಾಣಪತ್ರ, ರೇಷನ್ ಕಾರ್ಡ್ , ಪೋಷಕರ ಗುರುತು ಚೀಟಿ, ಫೋಟೋ, ಬ್ಯಾಂಕ್ ಪಾಸ್ ಬುಕ್ ಇತ್ಯಾದಿ ದಾಖಲೆ ದಾಖಲಾತಿ ಅಗತ್ಯವಾಗಿ ಬೇಕು.
ಈ ಷರತ್ತು ಅನ್ವಯ
ಈ ಯೋಜನೆಯ ಹಣ ಪಡೆಯಲು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇರುವ ಬಿಪಿಎಲ್ ಕುಟುಂಬಗಳು ಮಾತ್ರ ಅರ್ಹರಾಗಿರುತ್ತಾರೆ. ಬಾಲಿಕಾ ಸಮೃದ್ಧಿ ಯೋಜನೆಯ ಲಾಭ ಪಡೆಯಲು ನೀವು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದ್ದು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ.
