
ಇತ್ತೀಚಿನ ದಿನದಲ್ಲಿ ಪ್ರತಿಯೊಂದು ವಸ್ತುವಿಗೂ ಬೆಲೆ ತುಂಬಾ ಅಧಿಕ. ಬೆಲೆ ತುಂಬಾ ಅಧಿಕವಾಗಿದ್ದರೂ ನಿತ್ಯ ಜೀವನವನ್ನು ಸಾಗಿಸಬೇಕಾಗಿರುವುದರಿಂದ ನಾವು ಅಗತ್ಯ ಎಂಬ ವಸ್ತುವನ್ನು ಕೊಂಡು ಕೊಳ್ಳುತ್ತೇವೆ. ಅದೇ ರೀತಿ ಅಕ್ಕಿ ಬೆಲೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಕೂಡ ಅದನ್ನು ಕೊಳ್ಳುವವರ ಪ್ರಮಾಣ ಮಾತ್ರ ಈಗಲೂ ಕಡಿಮೆ ಆಗಲಿಲ್ಲ. ದಿನದಿಂದ ದಿನಕ್ಕೆ ಅಕ್ಕಿ ಬೆಲೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೂಡ ಹೊಸ ಕ್ರಮಕ್ಕೆ ಮುಂದಾಗಿದ್ದು ಈ ಕ್ರಮ ಜನ ಸಾಮಾನ್ಯರಿಗೆ ದೊಡ್ಡ ಕೊಡುಗೆ ನೀಡಿದಂತಾಗಿದೆ.
ಯಾವುದು ಆ ನೂತನ ಕ್ರಮ
ಜನರಿಗೆ ಅತೀ ಕಡಿಮೆ ಹಣಕ್ಕೆ ಉತ್ತಮ ಗುಣಮಟ್ಟದ ಅಕ್ಕಿ ಪೂರೈಕೆ ಮಾಡಲು ಸರಕಾರ ಹೊಸ ಕ್ರಮ ತೆಗೆದುಕೊಳ್ಳುತ್ತಿದೆ. ಆ ನೂತನ ಕ್ರಮ ಯಾವುದೆಂದರೆ ಭಾರತ್ ಬ್ರ್ಯಾಂಡ್ ಅನ್ನೊ ಅಕ್ಕಿಯನ್ನು ಮಾರುಕಟ್ಟೆಗೆ ಸರಕಾರದ ಮುಖೇನ ಬಿಡುಗಡೆ ಮಾಡಿದೆ. ಇದು ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ಗ್ರಾಹಕರ ಕೈ ಸೇರಲಿದೆ. ಪಿಎಂ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆ ಅಡಿಯಲ್ಲಿ ಒಂದೇ ಬ್ರ್ಯಾಂಡ್ ಅಡಿಯಲ್ಲಿ ರಿಯಾಯಿತಿ ದರದಲ್ಲಿ ಆಹಾರ ಸಾಮಗ್ರಿ ನೀಡಲಾಗುತ್ತದೆ.
ಬೆಲೆ ಎಷ್ಟು?
ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಈಗಾಗಲೇ ಅನೇಕ ಅಗತ್ಯ ಆಹಾರ ಸಾಮಗ್ರಿಗಳನ್ನು ಕಡಿಮೆ ಬೆಲೆಗೆ ನೀಡಲಾಗುತ್ತಿದೆ. ಗೋಧಿ ಹಿಟ್ಟು ಕೆಜಿಗೆ 27.50 ರೂಪಾಯಿ, ಮೂಂಗ್ ದಾಲ್ ಕೆಜಿಗೆ 93 ರೂಪಾಯಿ, ಕಡ್ಲೆ ಬೇಳೆ ಕೆಜಿಗೆ 60 ರೂಪಾಯಿ, ಈಗ ಪ್ರತೀ ಕೆಜಿ ಅಕ್ಕಿಯನ್ನು ಜಾರಿಗೆ ತರಲಾಗಿದೆ. ಅಕ್ಕಿಗೆ ಪ್ರತೀ ಕೆಜಿಗೆ 29 ರೂಪಾಯಿ ನಂತೆ ಮಾರಾಟ ಮಾಡಲಾಗುತ್ತದೆ. ಈ ಒಂದು ಭಾರತ್ ಬ್ರ್ಯಾಂಡ್ ಅಕ್ಕಿಯ ಪ್ಯಾಕೇಟ್ 5 ಮತ್ತು 10 kg ಗೆ ಲಭ್ಯವಿದೆ.
ನಿರ್ವಹಣೆ ಹೇಗೆ?
ಕಡಿಮೆ ಬೆಲೆಗೆ ಅಕ್ಕಿ ಲಭ್ಯ ಮಾಡುವುದು ನಷ್ಟವಲ್ಲವೇ ಎಂಬ ಅನುಮಾನ ಜನರಿಗೂ ಕಾಡುತ್ತಿದೆ. ಹಾಗಾಗಿ ಈ ಪರಿಕಲ್ಪನೆ ವಿಸ್ತ್ರತ ರೂಪದ ಬಗ್ಗೆ ತಿಳಿಸಲಾಗುತ್ತಿದೆ. ಭಾರತ್ ಬ್ರ್ಯಾಂಡ್ ಅಕ್ಕಿಯನ್ನು ರೈತರಿಂದ ನೇರವಾಗಿ ಖರೀದಿ ಮಾಡಿ ರೈತರಿಗೆ ನೇರ ಲಾಭ ನೀಡಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇದು ಮಧ್ಯಮ ದಲ್ಲಾಳಿಗಳ ಕಾಟವಿಲ್ಲದೆ ಗ್ರಾಹಕರಿಗೆ ಕಡಿಮೆ ಬೆಲೆಗೆ ಅಕ್ಕಿ ಸೌಲಭ್ಯ ಲಭ್ಯವಾಗಲಿದೆ. ಬೆಂಗಳೂರಿಗೆ ಈಗಾಗಲೇ 120 ಕ್ವಿಂಟಲ್ ಅಕ್ಕಿ ಬಂದಿದ್ದು ಸಾಗಾಟಕ್ಕೆ 25 ವಾಹನ ನೇಮಿಸಲಾಗಿದೆ.
ಆನ್ಲೈನ್ ಮಾರುಕಟ್ಟೆ
ಜನರು ಹೆಚ್ಚು ಆನ್ಲೈನ್ ನಲ್ಲೇ ಮಾರಾಟ ಪ್ರಕ್ರಿಯೆ ಮಾಡುವ ಕಾರಣ ಫ್ಲಿಪ್ ಕಾರ್ಟ್ , ರಿಲಯನ್ಸ್ ಮಾರ್ಟ್ ಸೇರಿದಂತೆ ಇತರ ಶಾಪಿಂಗ್ ಆ್ಯಪ್ ನಲ್ಲಿ 29 ರೂಪಾಯಿಗೆ ಸಿಗಲಿದೆ. ಮೊಬೈಲ್ ನಂಬರ್ ಅನ್ನು ರಿಜಿಸ್ಟರ್ ಮಾಡುವ ಮೂಲಕ ಅಕ್ಕಿ ಪಡೆಯಬಹುದು. ಈ ಮೂಲಕ 10 KG ನಷ್ಟು ಅಕ್ಕಿ ನೀಡಲಾಗುತ್ತದೆ. ಈ ಮೂಲಕ ಕಡಿಮೆ ಹಣಕ್ಕೆ ಅಕ್ಕಿ ಪಡೆಯಬಹುದಾಗಿದೆ. ಇದು ಬಹಳಷ್ಟು ಮಧ್ಯಮವರ್ಗದ ಜನರಿಗೆ ಬಹಳ ಅನುಕೂಲ ಆಗಿದೆ ಎಂದು ಹೇಳಬಹುದು.
