Home ಸರಕಾರಿ ಯೋಜನೆಗಳು ಕೇಂದ್ರ ಸರಕಾರ ಅಪಾಯಕಾರಿ ಶ್ವಾನ ತಳಿ ಸಾಕಾಣಿಕೆಗೆ ನಿರ್ಬಂಧ ವಿಧಿಸಿದ ಕೇಂದ್ರ ಸರಕಾರ

ಅಪಾಯಕಾರಿ ಶ್ವಾನ ತಳಿ ಸಾಕಾಣಿಕೆಗೆ ನಿರ್ಬಂಧ ವಿಧಿಸಿದ ಕೇಂದ್ರ ಸರಕಾರ

0
ಅಪಾಯಕಾರಿ ಶ್ವಾನ ತಳಿ ಸಾಕಾಣಿಕೆಗೆ ನಿರ್ಬಂಧ ವಿಧಿಸಿದ ಕೇಂದ್ರ ಸರಕಾರ

ಇಂದು‌ ನಾಯಿ ಸಾಕಾಣಿಕೆ ಎನ್ನುವುದು ರೂಢಿಯಾಗಿ ಬಿಟ್ಟಿದೆ‌. ಈಗಂತೂ ಜನ ತಮ್ಮ ಮಕ್ಕಳಂತೆ ಸಾಕು ನಾಯಿಗಳನ್ನು ಸಲಹಿ ಪೋಷಣೆ ಮಾಡುತ್ತಾರೆ.ಹೆಚ್ಚಿನ ಪ್ರಾಣಿ ಪ್ರೀಯರು ನಾಯಿ ನೋಡಿದರೆ ಸಾಕು ಅದನ್ನು ಮನೆಗೆ ತೆಗೆದುಕೊಂಡು ಹೋಗುವಷ್ಟು ಉತ್ಸುಕರಾಗಿ ಬಿಡುತ್ತಾರೆ.ಇಂದು ವಿವಿಧ ಬಗೆಯ‌ ವಿದೇಶಿ ನಾಯಿ‌ ತಳಿಗಳನ್ನು ಖರೀದಿ ಮಾಡಲು ಹೆಚ್ಚಿನ ಜನರು ಒಲವು ತೋರಿಸುತ್ತಾರೆ.ಆದ್ರೆ ಇದೀಗ ವಿದೇಶಿ ತಳಿಗಳ ನಾಯಿ ಖರೀದಿಗೆ ಬ್ರೇಕ್ ಬಿದ್ದಿದೆ.

ನಿಷೇಧ ಹೇರಲು ಕಾರಣ ವೇನು?
ನಾಯಿಗಳಿಂದ ಜನರ ಮೇಲೆ ಆಗುವ ದಾಳಿ ಹಾಗೂ ವಿದೇಶಿ ತಳಿಗಳ ಅಕ್ರಮ ವ್ಯಾಪಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೆಲವು ತಳಿಗಳಿಗೆ ಕೇಂದ್ರ ಸರಕಾರ ನಿಷೇಧ ಹೇರಿದೆ.ದೇಶಾದ್ಯಂತ ನಾಯಿ ಕಡಿತದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು‌ಕಳೆದ ಕೆಲವು ತಿಂಗಳುಗಳಲ್ಲಿ ದೇಶಾದ್ಯಂತ ನಾಯಿ ಕಡಿತದಿಂದ ಹಲವಾರು ಸಾವುಗಳು ಸಂಭವಿಸಿವೆ. ಹೀಗಾಗಿ ಕಟ್ಟುನಿಟ್ಟಿನ ‌ಕ್ರಮ ಜಾರಿಗೆ ತಂದಿದೆ.

ಯಾವೆಲ್ಲ ತಳಿಗಳಿಗೆ ನಿಷೇಧ?
ಪಿಟ್‌ಬುಲ್‌ ಟೆರಿಯರ್‌, ಟೋಸಾ ಇನು, ಅಮೆರಿಕನ್‌ ಸ್ಟಾಫರ್ಡ್‌ಶೈರ್‌ ಟೆರಿಯರ್‌, ಫಿಲಾ ಬ್ರೆಸಿಲಿರೊ, ಡೊಗೊ ಅರ್ಜೆಂಟಿನೊ, ಅಮೆರಿಕನ್‌ ಬುಲ್‌ಡಾಗ್‌, ಬೋರ್‌ಬೋಯಲ್‌, ಕಂಗಾಲ್‌, ರಷ್ಯನ್‌ ಶೆಫರ್ಡ್‌, ಟೊರ್ನ್‌ಜಾಕ್‌, ಸಪ್‌ರ್‍ಲಾನಿನಾಕ್‌, ಜಪಾನೀಸ್‌ ಟೋಸಾ ಮತ್ತು ಅಕಿಟಾ, ಮಾಸ್ಟಿಫ್ಸ್, ರಾಟ್‌ವೀಲರ್‌, ಟೆರಿಯರ್‌ಗಳು ರಿಡ್ಜ್‌ಬ್ಯಾಕ್‌, ವೂಲ್ಫ್ ಡಾಗ್ಸ್‌, ಕೆನರಿಯೊ, ಅಕ್ಬಾಶ್‌, ಮಾಸ್ಕೊ ಗಾರ್ಡ್‌ , ಕೇನ್‌ ಕೊರ್ಸೊ ಶ್ವಾನ ಇತ್ಯಾದಿ ನಾಯಿ ತಳಿಗಳನ್ನು ನಿಷೇಧ ಮಾಡಿದೆ.

ಈ ಬಗ್ಗೆ ಆದೇಶ
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಯಾದ ಡಾ.ಒ.ಪಿ.ಚೌಧರಿ ಈ ಬಗ್ಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಕಳುಹಿಸಿದ್ದು ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಪತ್ರದಲ್ಲಿ ಉಲ್ಲೇಖ ಕೂಡ ಮಾಡಿದ್ದಾರೆ. ಮುನುಷ್ಯರ ಮೇಲೆ ಆಕ್ರಮಣಕಾರಿ ಶ್ವಾನದ ತಳಿಗಳ ದಾಳಿ ಹೆಚ್ಚಾಗುತ್ತಿರುವ ಕಾರಣ ಇದೀಗ ಈ ನಿರ್ಧಾರ ಕೈಗೊಳ್ಳಲಾಗಿದೆ.

 

LEAVE A REPLY

Please enter your comment!
Please enter your name here