
ಇಂದು ಚಿನ್ನ ಎಂಬುದು ಬಹು ಹೂಡಿಕೆಯ ವಸ್ತುವಾಗಿ ಪರಿಗಣಿಸಿದೆ. ಪ್ರತಿಯೊಬ್ಬರಿಗೂ ಕಷ್ಟದ ಸಮಯದಲ್ಲಿ ಸಹಾಯಕವಾಗುವುದೇ ಈ ಚಿನ್ನ ಎಂದು ಹೇಳಬಹುದು. ಹಾಗಾಗಿ ಚಿನ್ನದ ಹೂಡಿಕೆ ಬಹಳಷ್ಟು ಲಾಭಕರ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬ್ಯಾಂಕ್ ನಲ್ಲಿ ನೀಡಲಾಗುವ ವೈಯಕ್ತಿಕ ಸಾಲದ ಮೇಲಿನ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ. ಇದಕ್ಕೆ ಚಿನ್ನದ ಸಾಲ ಉತ್ತಮ ಆಯ್ಕೆಯಾಗಿದೆ.
ವೈಯಕ್ತಿಕ ಸಾಲಗಿಂತ ಚಿನ್ನದ ಸಾಲ ಉತ್ತಮ
ಇಂದು ಚಿನ್ನ ಇಟ್ಟು ಸಾಲ ಕೂಡ ಪಡೆಯಬಹುದಾಗಿದೆ. ವೈಯಕ್ತಿಕ ಸಾಲಗಿಂತ ಚಿನ್ನದ ಸಾಲ ಉತ್ತಮ. ಕಷ್ಟದ ಸಂದರ್ಭದಲ್ಲಿ ಚಿನ್ನವನ್ನು ಅಡಇಡುವುದರ ಮೂಲಕ ಸಾಲವನ್ನು ಪಡೆಯುತ್ತೇವೆ. ನಿಮ್ಮ ಬಳಿ ಚಿನ್ನ ಇದ್ದರೆ, ತಕ್ಷಣವೇ ಸಾಲ ಪಡೆಯಲು ನಿಮಗೆ ಅವಕಾಶ ಇದೆ. ಗೋಲ್ಡ್ ಲೋನ್ ಎಂಬುದು ಕೇವಲ ಹತ್ತು ನಿಮಿಷಗಳಲ್ಲಿ ಪಡೆಯಬಹುದಾಗಿದೆ.
ಸುರಕ್ಷಿತ ಸಾಲ
ಚಿನ್ನದ ಸಾಲಗಳು ಸುರಕ್ಷಿತವಾಗಿದ್ದು , ನಿಮ್ಮ ಚಿನ್ನದ ಆದಾಯಕ್ಕೆ ಅನುಗುಣವಾಗಿ ನಿಮಗೆ ಸಾಲ ದೊರೆಯುತ್ತದೆ. ಚಿನ್ನದ ಸಾಲದಲ್ಲಿ ಕಡಿಮೆ ಬಡ್ಡಿ ದರವೂ ಇರುತ್ತದೆ. ಇನ್ನು ನೀವು ಚಿನ್ನವನ್ನು ಅಡವಿಟ್ಟು ಸಾಲವನ್ನು ಪಡೆಯುವ ಮೊದಲೇ ಸಾಲದ ಅವಧಿಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.
ಕೇಂದ್ರ ಸರಕಾರದಿಂದ ಗುಡ್ ನ್ಯೂಸ್
ಈವರೆಗೆ ಚಿನ್ನ ಅಡವಿಟ್ಟು ಸಾಲ ಪಡೆದುಕೊಂಡರೆ ಎರಡು ಲಕ್ಷ ರೂಪಾಯಿಗಳ ವರೆಗೆ ಪಡೆಯಬಹುದಿತ್ತು, ಈಗ ಅದನ್ನು ನಾಲ್ಕು ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವ ಮೂಲಕ ಜನರಿಗೆ ಗುಡ್ ನ್ಯೂಸ್ ನೀಡಿದೆ. ಈಗ ಚಿನ್ನದ ಸಾಲವನ್ನು ಆನ್‌ಲೈನ್‌ನಲ್ಲಿಯೂ ಪಡೆಯಲು ಅವಕಾಶ ಇದ್ದು. ವಿವಿಧ ಬ್ಯಾಂಕುಗಳು ಆನ್‌ಲೈನ್ ಚಿನ್ನದ ಸಾಲ ಸೌಲಭ್ಯವನ್ನು ಸುಲಭವಾಗಿ ನೀಡುತ್ತವೆ.
ಕ್ರೆಡಿಟ್ ಸ್ಕೋರ್ ಹೆಚ್ಚಳ
ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಕೂಡ ಚಿನ್ನದ ಮೇಲೆ ಸಾಲವನ್ನು ಪಡೆದು ಕೊಳ್ಳಬಹುದು. ಅಷ್ಟೆ ಅಲ್ಲದೆ ಚಿನ್ನವನ್ನು ಅಡವಿಟ್ಟು ಸಾಲ ತೆಗೆದುಕೊಂಡರೆ ಅದನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದರೆ ಸಹಜವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಜಾಸ್ತಿ ಆಗುತ್ತದೆ.
