Home ಕೇಂದ್ರ ಸರಕಾರ ನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೋಗಿದ್ಯಾ? ಹಾಗಿದ್ರೆ ಈ ಸರಳ ಮಾರ್ಗ ಅನುಸರಿಸಿ

ನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೋಗಿದ್ಯಾ? ಹಾಗಿದ್ರೆ ಈ ಸರಳ ಮಾರ್ಗ ಅನುಸರಿಸಿ

ಇಂದು ಬಹುತೇಕ ಆರ್ಥಿಕ ಚಟುವಟಿಕೆಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿದ್ದು ಅದರ ಬಳಕೆ ಪ್ರಾಮುಖ್ಯತೆ ಬಗ್ಗೆ ಸರಕಾರ ಕೂಡ ಆಗಾಗ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಲಿರುತ್ತದೆ. ಅದೇ ರೀತಿ ನಿಮ್ಮ ಸಾಲ ವ್ಯವಹಾರಕ್ಕೆ, ಠೇವಣಿ ಇಡಲು, ಆನ್ಲೈನ್ ಪೇಮೆಂಟ್, ಆದಾಯ ತೆರಿಗೆ ರಿಟೃರ್ನ್ಸ್ ಇನ್ನು ಅನೇಕ ಕಾರ್ಯ ಚಟುವಟಿಕೆಗೆ ಪ್ಯಾನ್ ಕಾರ್ಡ್ ಕಡ್ಡಾಯ ಮಾಡಲಾಗುತ್ತಿದ್ದು ನಿಮ್ಮ ಪಾನ್ ಕಾರ್ಡ್ ಕಳೆದು ಹೋದರೆ ಅದನ್ನು ಮರಳಿ ಪಡೆಯುವುದೇ ಒಂದು ದೊಡ್ಡ ಸಮಸ್ಯೆ ಇದ್ದಂತೆ ಹಾಗಾಗಿ ನಾವಿಂದು ನೀಡುವ ಮಾಹಿತಿ ನಿಮಗೆ ಸಾಕಷ್ಟು ಅನುಕೂಲ ಒದಗಿಸಲಿದೆ.

ಗೊತ್ತೋ ಗೊತ್ತಿಲ್ಲದೆಯೊ ನಿಮ್ಮ ಪ್ಯಾನ್ ಕಾರ್ಡ್ ಅನ್ನು ನೀವು ಕಳೆದುಕೊಂಡರೆ ಅದರಿಂದ ನಿಮಗೆ ಅನಾನುಕೂಲ ಅನ್ನಬಹುದು. ಇಂದು ಬ್ಯಾಂಕಿನ ವ್ಯವಹಾರ ಮಾತ್ರವಲ್ಲದೆ ವಿವಿಧ ಸೌಲಭ್ಯದ ಹಣ ಪಡೆಯಲು ಕೂಡ ಪ್ಯಾನ್ ಕಾರ್ಡ್ ಕೇಳಲಾಗುತ್ತಿದೆ. ಹೀಗಾಗಿ ಅದನ್ನು ಕಳೆದುಕೊಂಡಾಗ ಏನು ಮಾಡಬಹುದು ಎಂಬ ಗೊಂದಲ ಎಲ್ಲರಲ್ಲಿಯೂ ಆಗೇ ಆಗುತ್ತದೆ ಹಾಗಾಗಿ ನಾವಿಂದು ಹೇಳುವ ಸರಳ ಮಾರ್ಗ ಅನುಸರಿಸಿದರೆ ಕಷ್ಟದಿಂದ ದೂರಾಗಬಹುದು.

ಈ ರೀತಿ ಪಡೆಯಬಹುದು
ಸಿಮ್, ಮಾರ್ಕ್ಸ್ ಕಾರ್ಡ್ ಎಲ್ಲ ಹೇಗೆ ಡ್ಯುಬ್ಲಿಕೇಟ್ ಪಡೆಯಲಾಗುವುದೊ ಅದೇ ರೀತಿ ಪ್ಯಾನ್ ಕಾರ್ಡ್ ಅನ್ನುಸಹ ನಕಲಿ ಪಡೆಯಬಹುದು. ಅದಕ್ಕಾಗಿ ಸೇವಾಕೇಂದ್ರ ಅಲೆಯಬೇಕು ಅಂದುಕೊಳ್ಳದೇ ಈ ಕೆಲಸ ಮಾಡಿದರೆ ಸಮಸ್ಯೆ ನಿವಾರಣೆ ಆಗಲಿದೆ. ಈಗ ಆನ್ಲೈನ್ ಮೂಲಕ ಸರಳ ವಿಧಾನ ಅನುಸರಿಸಿದರೆ ನಿಮಗೆ ಪ್ಯಾನ್ ಕಾರ್ಡ್ ನ ಡ್ಯೂಬ್ಲಿಕೇಟ್ ಕಾಪಿ ಸಿಗಲಿದೆ.

ಹೀಗೆ ಮಾಡಿದರೆ ಸಾಕು
ಪ್ಯಾನ್ ಕಾರ್ಡ್ ಗೆ ಸಂಬಂಧಿಸಿದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. (https://www.pan.utiitsl.com ಅದರಲ್ಲಿ ಸರ್ವಿಸ್ ವಿಭಾಗದಲ್ಲಿ ಪ್ಯಾನ್ ಅನ್ನೊ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಅದರಲ್ಲಿ ರೀಪ್ರಿಂಟ್ ಪ್ಯಾನ್ ಎಂಬ ಆಯ್ಕೆ ಕ್ಲಿಕ್ ಮಾಡಬೇಕು.ಅದರಲ್ಲಿ ಒಂದು ಫಾರ್ಮ್ ಓಪನ್ ಆಗಲಿದ್ದು ನಿಮ್ಮ ವೈಯಕ್ತಿಕ ಹಾಗೂ ಸ್ಥಳ ದಾಖಲಾತಿ ಇತರೆಗಳನ್ನು ಕೇಳಲಿದೆ ಅವೆಲ್ಲವನ್ನು ಫಿಲಪ್ ಮಾಡಿದ್ದ ಬಳಿಕ ಅದನ್ನು ಸಬ್ ಮಿಟ್ ಮಾಡಬೇಕು. ಆಗ ನಿಮಗೆ ಡ್ಯುಬ್ಲಿಕೇಟ್ ಕಾಪಿ ಸಿಗಲಿದೆ.

ಈ ನಿಯಮ ನೆನಪಿರಲಿ
ಪ್ಯಾನ್ ಕಾರ್ಡ್ ಕಳೆದುಕೊಂಡಂತಹ ಸಂದರ್ಭದಲ್ಲಿ ನಿಮಗೆ ಡ್ಯುಬ್ಲಿಕೇಟ್ ಪ್ಯಾನ್ ಕಾರ್ಡ್ ಅವಶ್ಯವಾಗಿದೆ. ಅದೇ ರೀತಿ ಈಗಾಗಲೇ ಪ್ಯಾನ್ ಕಾರ್ಡ್ ಇದ್ದವರು ಪುನಃ ಪ್ಯಾನ್ ಕಾರ್ಡ್ ಎರಡು ಮೂರು ಮಾಡಿಸಿದರೆ ಅದು ಅಕ್ರಮ ಹಾಗೂ ಕಾನೂನು ಬಾಹಿರ ಎಂದು ಪರಿಗಣಿಸಲಾಗುವುದು‌. ಹಾಗಾಗಿ ಇಂತಹ ಕೆಲಸ ಮಾಡಿದರೆ ಅಂತವರ ವಿರುದ್ಧ ಹತ್ತು ಸಾವಿರ ರೂಪಾಯಿ ದಂಡ ವಿಧಿಸಲು ಸಹ ಆದೇಶ ನೀಡಲಾಗಿದೆ. ಹಾಗಾಗಿ ಈ‌ ನಿಯಮದ ಬಗ್ಗೆ ಅರಿವು ಹೊಂದಿವುದು ಅತೀ ಮುಖ್ಯ.

 
Previous articleರೇಷನ್ ಕಾರ್ಡ್ ಹೊಂದಿದವರಿಗೆ ಆಹಾರ ಇಲಾಖೆಯ ಮಹತ್ವದ ಆದೇಶ
Next articleಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆ