Home ಕೇಂದ್ರ ಸರಕಾರ ಅಂಚೆ ಇಲಾಖೆಯ ಮೂಲಕ ಹೂಡಿಕೆ ಮಾಡಿದ್ರೆ‌ ನಿಮಗೆ ಸಿಗುತ್ತೆ ಭರ್ಜರಿ ಲಾಭ

ಅಂಚೆ ಇಲಾಖೆಯ ಮೂಲಕ ಹೂಡಿಕೆ ಮಾಡಿದ್ರೆ‌ ನಿಮಗೆ ಸಿಗುತ್ತೆ ಭರ್ಜರಿ ಲಾಭ

ಇಂದು ಹಣ ಹೂಡಿಕೆ ಮಾಡಲು ಹಲವು ರೀತಿಯ ಅವಕಾಶಗಳು ಇವೆ. ಅದರಲ್ಲೂ ಮುಂದಿನ ಬದುಕು ಸುಗುಮವಾಗಿ ಸಾಗಲು ಹಣ ಹೂಡಿಕೆ ಬಹಳ ಮುಖ್ಯ ವಾಗುತ್ತದೆ.ಇಂದು ಹೆಚ್ಚಿನ ಜನರು ಹೂಡಿಕೆ ಅಂತ ಬಂದಾಗ ಅಂಚೆ ಇಲಾಖೆಯ ಸೇವೆ ಯನ್ನು‌ ಉಪಯೋಗ ಮಾಡಿಕೊಳ್ಳುವುದು ಹೆಚ್ಚು. ಹೌದು ಇಲ್ಲಿ ಹೂಡಿಕೆ ಮಾಡಿದ್ರೆ ಹಣ ಸುರಕ್ಷತೆ ಯೊಂದಿಗೆ ಹೆಚ್ಚಿನ ಬಡ್ಡಿ ಸಹ ದೊರೆಯುತ್ತದೆ. ಇಲ್ಲಿ ಮಾಡುವ ಹೂಡಿಕೆ ಅತೀ ಸೇಫ್ ಎಂದು ಹೇಳಬಹುದು.

ಗ್ರಾಮ ಸುರಕ್ಷ ಯೋಜನೆ
ಗ್ರಾಮ ಸುರಕ್ಷಾ (Grama suraksha) ಯೋಜನೆ ಮೂಲಕ ನೀವು ಸುಲಭವಾಗಿ ಹೂಡಿಕೆ ಮಾಡಲು ಅವಕಾಶ ಇದೆ. ಇಲ್ಲಿ ಕನಿಷ್ಟ ಮೊತ್ತವಾದರೂ ಹೂಡಿಕೆ ಮಾಡಬಹುದಾಗಿದೆ. ಗರಿಷ್ಠ ಮೊತ್ತ 10ಲಕ್ಷದಿಂದ 10 ಸಾವಿರ ಕನಿಷ್ಟ ಮೊತ್ತದ ವರೆಗೆ ಹೂಡಿಕೆ ಮಾಡಬಹುದು. ಅಷ್ಟೆ ಅಲ್ಲದೆ ಈ ಯೋಜನೆಯ ಮೂಲಕ ನೀವು ದಿನಕ್ಕೆ 50 ರೂಪಾಯಿಗಳನ್ನು ಹೂಡಿಕೆ ಮಾಡಿದ್ರೆ ತಿಂಗಳಿಗೆ 1500 ರೂಪಾಯಿ ಠೇವಣಿ ಇಟ್ಟ ನಂತರ 35 ಲಕ್ಷ ರೂಪಾಯಿಹಣ ಪಡೆಯಬಹುದು.

ಮುಕ್ತಾಯದ ಸಂದರ್ಭದಲ್ಲಿ ಹೆಚ್ಚಿನ ಲಾಭ

ಅದೇ ರೀತಿ ಗ್ರಾಮ ಸುರಕ್ಷಾ ಯೋಜನೆಯ ಮೂಲಕ ನೀವು ಪ್ರತಿ ತಿಂಗಳು ರೂ 1411 ಹೂಡಿಕೆ ಮಾಡಿದ್ರೆ ಮುಕ್ತಾಯದ ಸಂದರ್ಭದಲ್ಲಿ ರೂ 34.60 ಲಕ್ಷವನ್ನು ಪಡೆಯಬಹುದು.ಇದರಲ್ಲಿ ಭಾರತದ ನಾಗರಿಕರು ಈ ಯೋಜನೆಯಲ್ಲಿ 19ರಿಂದ 55 ವರ್ಷಗಳವರಿನ ವ್ಯಕ್ತಿಗಳು ಹೂಡಿಕೆ ಮಾಡಬಹುದು. ಅದೇ ರೀತಿ ಈ ಯೋಜನೆ ಅಡಿ ಸಾಲದ ಲಾಭವನ್ನು ಸಹ ಪಡೆಯಬಹುದು. 4 ವರ್ಷಗಳ ಹೂಡಿಕೆಯ ನಂತರವೇ ನೀವು ಸಾಲ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತದೆ.

ಹೆಣ್ಣು ಮಕ್ಕಳಿಗಾಗಿ ಈ ಯೋಜನೆ

ಈ ಯೋಜನೆಯು ಹೆಣ್ಣುಮಕ್ಕಳಿಗೆ ಇರುವಂತಹ ಯೋಜನೆ ಆಗಿದ್ದು 10 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಇರುವಂತಹ ಯೋಜನೆ ಆಗಿದೆ.ಇಲ್ಲಿ ಬಡ್ಡಿ ದರ ಶೇ.7.6ರಷ್ಟಿರುತ್ತದೆ.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಠೇವಣಿ ಮಾಡಲು ನಿಮಗೆ ಅವಕಾಶ ಇದ್ದು, ಸುಮಾರು 10 ವರ್ಷ 9 ತಿಂಗಳಲ್ಲಿ ಈ‌ ಹಣ ದ್ವಿಗುಣಗೊಳ್ಳುತ್ತ ಹೋಗುತ್ತದೆ.

ಅದೇ ರೀತಿ ಪೋಸ್ಟ್ ಆಫೀಸ್ ಆರ್‌ಡಿ (RD) ಯಲ್ಲಿ ನೀವು ಹೂಡಿಕೆ ಮಾಡಿದರೆ, ನಿಮ್ಮ ಠೇವಣಿ ಹಣ 12 ವರ್ಷ 4 ತಿಂಗಳಲ್ಲಿ ದುಪ್ಪಟ್ಟಾಗುತ್ತ ಹೋಗಿ ಹೆಚ್ಚಿನ ಲಾಭ ನೀವು ಪಡೆಯಬಹುದಾಗಿದೆ.

 
Previous articleಹೊಸ ಬಿಪಿಎಲ್‌, ಎಪಿಎಲ್‌ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದಿರಾ? ನಿಮಗಿದೆ ಸಿಹಿ ಸುದ್ದಿ
Next articleಕೋವಿಡ್‌ ಭೀತಿ ಹಿನ್ನೆಲೆ ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ