
ಸೋಲಾರ್ ವಿದ್ಯುತ್ ಇಂದು ಬಹಳ ಜನಪ್ರಿಯವಾಗುತ್ತಿದೆ. ಇಂದು ನಗರ ಪ್ರದೇಶದಲ್ಲಿ ಸೋಲಾರ್ ವಿದ್ಯುತ್ ಅಧಿಕವಾಗಿ ಬಳಕೆ ಆಗುತ್ತಿದೆ. ಹಾಗಾಗಿ ಸರಕಾರ ಕೂಡ ಬಾರೀ ಉಳಿತಾಯ ಆಗಲು ಒಂದು ಸೋಲಾರ್ ವಿದ್ಯುತ್ ಗೆ ಅಧಿಕ ಬೆಂಬಲ ನೀಡುತ್ತಿದ್ದಾರೆ. ವಿದ್ಯುತ್ ವ್ಯತ್ಯೆಯ ಅತಿಯಾಗಿ ಆಗುತ್ತಿರುವ ಹಿನ್ನೆಲೆಯಲ್ಲಿ ಮನೆಯ ಕೆಲಸ ಕಾರ್ಯಕ್ಕೆ ತೊಂದರೆ ಆಗುವ ಜೊತೆಗೆ ರೈತರ ಕಾರ್ಯ ಚಟುವಟಿಕೆಗೆ ಸಹ ತೊಂದರೆ ಆಗಲಿದೆ.
ರೈತರಿಗೆ ತೊಂದರೆ
ರೈತರು ತಮ್ಮ ಕೃಷಿ ಕಾರ್ಯ ಚಟುವಟಿಕೆಗೆ ಪಂಪ್ ಸೆಟ್ ನ ಮೂಲಕ ನೀರು ಹಾಯಿಸಲು ಮುಂದಾಗುವವರಿಗೆ ಕರೆಂಟ್ ಅಲಭ್ಯ ಇದ್ದು ಅವರಿಗೆ ನೀರಾವರಿ ಪೂರೈಗೆ ಮಾಡುವುದೆ ಸಮಸ್ಯೆ ಆಗಿತ್ತು. ಈಗ ಕೃಷಿ ಉದ್ದೇಶಕ್ಕೆ ವಿದ್ಯುತ್ ಅಗತ್ಯ ಇದ್ದು ಅದರ ಪೂರೈಕೆ ಮಾಡುವ ನೆಲೆಯಲ್ಲಿ ಸೋಲಾರ್ ಘಟಕಸ್ಥಾಪನೆ ಮಾಡಲು ಮುಂದಾಗಿದ್ದು ಇದೀಗ ಸರಕಾರ ಕೂಡ ಸಬ್ಸಿಡಿ ನೀಡುತ್ತಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೊಸ ಸ್ಕೀಂ
ರೈತರಿಗೆ ಕೃಷಿ ಉದ್ದೇಶಕ್ಕೆ ಸೋಲಾರ್ ಸ್ಥಾಪನೆ ಅಗತ್ಯ ಮನಗಂಡ ಬೆಸ್ಕಾಂ ವಿನೂತನ ಪರಿಕಲ್ಪನೆ ಜಾರಿಗೆ ತರಲು ಮುಂದಾಗಿದೆ. ಸೋಲಾರ್ ವಿದ್ಯುತ್ ಬಳಕೆ ಮಾಡುವವರನ್ನು ಉತ್ತೇಜಿಸಲಾಗುತ್ತಿದ್ದು ಬಹುತೇಕ ನಗರವಾಸಿಗಳು ತಮ್ಮ ಮನೆ ಮೇಲೆ ಸೋಲಾರ್ ವಿದ್ಯುತ್ ಕೃಷಿ ಮಾಡಲಾಗುತ್ತಿದೆ. ಅಂದರೆ ಮನೆ ಮೇಲೆ ಸೌರ ವಿದ್ಯುತ್ ಘಟಕ ಸ್ಥಾಪನೆ ಮಾಡಿ ಸಹಾಯಧನ ವಿತರಣೆ ಮಾಡಲು ಮುಂದಾಗಲಾಗಿದೆ. ಈ ಒಂದು ಸೋಲಾರ್ ಘಟಕ ಸ್ಥಾಪನೆಗೆ ಸೌರ ಗೃಹ ಯೋಜನೆ ಎಂದು ಕೂಡ ಕರೆಯುತ್ತಾರೆ.
ಅಧಿಕ ಪ್ರಯೋಜನ
ಮನೆಯ ಮೇಲ್ಛಾವಣಿಯ ಮೇಲೆ ಸೌರ ಘಟಕ ಸ್ಥಾಪನೆ ಮಾಡಲು ಸೋಲಾರ್ ಪ್ಯಾನಲ್ ಅಳವಡಿಸಬಹುದು. ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಲು ಕೂಡ ಅನುಮತಿಸಲಾಗಿದೆ. ಹಾಗಾಗಿ ನಿಮಗೆ ಸರಕಾರದ ಸಬ್ಸಿಡಿ ಮೊತ್ತ ದೊರೆಯುವ ಜೊತೆ ಜೊತೆಗೆ ನೀವು ಮಿಗುತೆಯಿಂದ ಉಳಿದ ಸೋಲಾರ್ ವಿದ್ಯುತ್ ಮಾರಾಟ ಮಾಡಿದರೆ ಅದಕ್ಕೆ ಕೂಡ ಹಣ ಸಂದಾಯ ಆಗಲಿದೆ. ವಿದ್ಯುತ್ ಮಾರಾಟ ಮಾಡಲು ಬೆಸ್ಕಾಂ ಜೊತೆಗೆ ಒಪ್ಪಂದ ಮಾಡಿರಬೇಕು ಆಗ ಮಾತ್ರವೆ ವಿದ್ಯುತ್ ಘಟಕ ನಿಮ್ಮ ವಿದ್ಯುತ್ ಖರೀದಿ ಮಾಡಲಿದೆ. ಸದ್ಯ ಈ ಸೋಲಾರ್ ಯೋಜನೆ ಬೆಂಗಳೂರು, ಧಾರವಾಡ, ರಾಮನಗರ, ಕೋಲಾರ, ತುಮಕೂರು ಎಂಬಂತೆ ಬೆಸ್ಕಾಂ ವ್ಯಾಪ್ತಿಯಲ್ಲೇ ಅಧಿಕ ಪ್ರಾತಿನಿಧ್ಯ ಪಡೆದಿವೆ. ಇದರಲ್ಲಿ ಸಬ್ಸಿಡಿ ಮೊತ್ತವು 1-3ಕಿಲೊ ವ್ಯಾಟ್ ವರೆಗೆ ಪ್ರತಿ ಕಿಲೋ ವ್ಯಾಟ್ ಗೆ 9000- 18,000ದಂತೆ ವಸತಿ ಗ್ರಾಹಕರಿಗೆ ಸಬ್ಸಿಡಿ ಹಣ ನೀಡಲಾಗುವುದು.
ಈ ಯೋಜನೆಗೆ ಒಮ್ಮೆ ನೀವು ಹಣ ವಿನಿಯೋಗ ಮಾಡಿದರೆ 22 ವರ್ಷದ ವರೆಗೆ ಸೋಲಾರ್ ಸೌಲಭ್ಯ ಸಿಗಲಿದೆ. ನೀವು ಅಗತ್ಯ ದಾಖಲೆಗಳ ಸಮೇತ ಆನ್ಲೈನ್ ಮೂಲಕ ಅರ್ಜಿ ಹಾಕಬಹುದು. ಕರೆಂಟ್ ಸಮಸ್ಯೆ ಅಧಿಕ ಮೊತ್ತದ ಬಿಲ್ ಕಟ್ಟುವ ಸಮಸ್ಯೆ ಇರಲಾರದು. ಹಾಗಾಗಿ ನಿಮಗೆ ಅಧಿಕ ಉಳಿತಾಯ ಆಗುವ ಜೊತೆಗೆ ಪ್ರಾಕೃತಿಕ ಸಂಪನ್ಮೂಲಗಳು ಸದ್ವಿನಿಯೋಗ ಆದಂತಾಗುವುದು.
