
ಪ್ರತೀ ವರ್ಷದಲ್ಲಿ ಸರಕಾರ ಆಗಾಗ ಹೊಸ ನೀತಿ ನಿಯಮ ಜಾರಿಗೆ ತರುತ್ತಲೇ ಇರುತ್ತದೆ. ಆಡಳಿತ ಸುಸ್ಥಿತತೆಯ ಜೊತೆಗೆ ಆಡಳಿತದಲ್ಲಿ ಪಾರದರ್ಶಕತೆ ತರುವ ಸಲುವಾಗಿ ಬ್ಯಾಂಕ್ ಖಾತೆಯಲ್ಲಿ ವಹಿವಾಟು ಮಾಡುವ ಗ್ರಾಹಕರಿಗೆ ನೀತಿ ನಿರ್ಭಂಧ ಹೇರಿಕೆ ಎನ್ನುವುದು ಸಾಮಾನ್ಯ ವಿಚಾರವಾಗಿದ್ದು ವಿತ್ತ ಸಚಿವರು ಬ್ಯಾಂಕಿನ ಹಣಕಾಸು ವಹಿವಾಟಕ್ಕೆ ಸಂಬಂಧಿಸಿದಂತೆ ವಿನೂತನ ಕ್ರಮ ವೊಂದರ ಬಗ್ಗೆ ತಿಳಿಸಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ನೀಡಲಿದ್ದೇವೆ.
ವಿತ್ತ ಸಚಿವರಿಂದ ಸಲಹೆ
ಬ್ಯಾಂಕಿನಲ್ಲಿ ಉಳಿತಾಯ ಮಾಡುವ ಗ್ರಾಹಕರು ಇತ್ತೀಚಿನ ದಿನದಲ್ಲಿ ಅಧಿಕವಾಗೇ ಇದ್ದಾರೆ ಅದೇ ರೀತಿ ಉಳಿತಾಯ ಯೋಜನೆ ಬೆಂಬಲಿಸುವ ಅನೇಕ ಯೋಜನೆ ಕೂಡ ಚಿರ ಪರಿಚಿತವಾಗಿದ್ದು ತಮ್ಮ ಲಾಭದ ಒಂದು ನಿರ್ದಿಷ್ಟ ಮೊತ್ತವಾದರೂ ಬ್ಯಾಂಕಿನಲ್ಲಿ ಚಾಲ್ತಿ ಖಾತೆ ಇಲ್ಲವೇ ಉಳಿತಾಯ ಖಾತೆಯಲ್ಲಿ ಹಾಕಿಡುತ್ತಾರೆ. ಹಾಗೆಂದು ಉಳಿತಾಯ ಖಾತೆಯಲ್ಲಿ ಉಳಿತಾಯ ಮಾಡಿದ್ದ ಹಣ ಎಂದು ಬೇಕಾ ಬಿಟ್ಟಿಯಾಗಿ ಸಂಗ್ರಹ ಮಾಡುವಂತಿಲ್ಲ ಅದಕ್ಕೂ ಕೂಡ ನಿಯಮಗಳಿವೆ ಎಂಬ ಬಗ್ಗೆ ಇತ್ತೀಚೆಗಷ್ಟೇ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದರು ಹಾಗಾಗಿ ಈ ಬಗ್ಗೆ ಕೆಲ ಅಗತ್ಯ ಮಾಹಿತಿಯನ್ನು ನಾವಿಂದು ನಿಮಗೆ ನೀಡಲಿದ್ದೇವೆ.
ಈ ಬಗ್ಗೆ ಎಚ್ಚರವಿರಲಿ
ಹೆಚ್ಚಿನ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯ ನೀತಿ ನಿರ್ಭಂಧಗಳ ವಿಚಾರ ತಿಳಿದು ಅಧಿಕ ಹಣ ಸಂಗ್ರಹ ಮಾಡುವ ಅನೇಕರು ನಿಯಮ ಮೀರಿ ಅಧಿಕ ಹಣ ಸಂಗ್ರಹ ಮಾಡಿ ಬಿಡುತ್ತಾರೆ. ಹಾಗಾಗಿ ಈ ಬಗ್ಗೆ ಎಚ್ಚೆತ್ತುಕೊಳ್ಳುವುದು ಕೂಡ ಅತ್ಯವಶ್ಯಕವಾಗಿದೆ. ಆದಾಯ ಮಿತಿಗಿಂತ ಅಧಿಕ ಹಣ ಸಂಗ್ರಹ ಮಾಡಿದರೆ ಅದಕ್ಕೆ ಇಂತಿಷ್ಟು ಮೊತ್ತದ ದಂಡ ಕೂಡ ಬರಿಸಬೇಕಿದೆ.
ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲೇಬೇಕು
ಉಳಿತಾಯ ಖಾತೆಯಲ್ಲಿ ಇಂತಿಷ್ಟೇ ಹಣ ಸಂಗ್ರಹ ಮಾಡಬೇಕೆಂಬ ನಿಯಮ ಇಲ್ಲದಿದ್ದರೂ ಒಂದು ಹಣಕಾಸಿನ ವರ್ಷದಲ್ಲಿ ಹತ್ತು ಲಕ್ಷ ಹಾಗೂ ಅದಕ್ಕಿಂತ ಅಧಿಕ ಹಣಕಾಸಿನ ವ್ಯವಹಾರ ಮಾಡಿದರೆ ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡುವುದು ಒಂದಿ ಕಡ್ಡಾಯ ಕ್ರಮವಾಗಿದೆ. ಒಂದು ವೇಳೆ ಮಾಹಿತಿ ನೀಡದೇ ಇದ್ದರೆ ಕಾನೂನಾತ್ಮಕವಾಗಿ ದಂಡ ಹಾಗೂ ತಪ್ಪಿದ್ದಲ್ಲಿ ಶಿಕ್ಷೆ ಸಹ ವಿಧಿಸಲಾಗುತ್ತದೆ. ತೆರಿಗೆ ಪಾವತಿದಾರರು ಉಳಿತಾಯ ಖಾತೆಯಲ್ಲಿ ಹಣ ಇಡುವಾಗ ಮುಂಜಾಗ್ರತಾ ಕ್ರಮ ಅನುಸರಿಸಬೇಕು.
ಎಷ್ಟು ಬಡ್ಡಿದರ ಕಟ್ಟಬೇಕು
ಉಳಿತಾಯ ಖಾತೆಯಲ್ಲಿ ನೀವು ಎಷ್ಟು ಮೊತ್ತ ಜಮೆ ಇಡಬೇಕು ಅಂದುಕೊಂಡಿದ್ದೀರಿ ಅದಕ್ಕೆ ನಿಗಧಿತ ಪ್ರಮಾಣದ ಬಡ್ಡಿದರ ಕೂಡ ಸಿಗಲಿದೆ ಹಾಗಾಗಿ ಸಿಗುವಂತಹ ಬಡ್ಡಿದರದ ಮೇಲೆ ನೀವು ಆದಾಯ ತೆರಿಗೆ ಪಾವತಿ ಮಾಡುವುದು ಕಡ್ಡಾಯವಾಗಿದೆ. ಉಳಿತಾಯ ಖಾತೆ ಗಿಂತಲೂ ಚಾಲ್ತಿ ಖಾತೆಗೆ ಅಧಿಕ ಹಣ ಸಂಗ್ರಹಕ್ಕೆ ಅವಕಾಶವಿದೆ. ಚಾಲ್ತಿ ಖಾತೆಯಲ್ಲಿ 50ಲಕ್ಷ ರೂಪಾಯಿ ವರೆಗೆ ಮಿತಿ ಇರಲಿದ್ದು ಇಷ್ಟು ಪ್ರಮಾಣದ ಮೊತ್ತಕ್ಕೆ ಸರಿಯಾದ ದಾಖಲೆಗಳು ಹೊಂದಿರುವುದು ಅತ್ಯವಶ್ಯಕವಾಗಿದೆ. ಸರಿಯಾದ ದಾಖಲೆ ಮತ್ತು ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ ಯಾವುದೇ ವಿಧವಾಗಿ ಹೆದರುವ ಅಗತ್ಯವಿಲ್ಲ. ಹಾಗೇ ನಿಮ್ಮ ಖಾತೆಯಲ್ಲಿ ಹಣ ಅಧಿಕ ಇದ್ದು ಸರಿಯಾಗಿ ದಾಖಲೆ ಇಲ್ಲದಿದ್ದರೆ ಅಥವಾ ನೀವು ಆದಾಯ ತೆರಿಗೆ ಪಾವತಿ ಮಾಡದಿದ್ದರೆ ಆಗ ತೆರಿಗೆ ವಂಚನೆ ಅಡಿಯಲ್ಲಿ ಕೇಸ್ ದಾಖಲು ಮಾಡಲಾಗುವುದು. ಹಾಗಾಗಿ ಸರಿಯಾದ ಮಾಹಿತಿ ಇಲ್ಲದೇ ವ್ಯವಹಾರ ಮಾಡುವ ಮುನ್ನ ಈ ಬಗ್ಗೆ ಎಚ್ಚೆತ್ತುಕೊಳ್ಳುವುದು ಅತ್ಯವಶ್ಯಕವಾಗಿದೆ.
