Home ಸರಕಾರಿ ಯೋಜನೆಗಳು ಕೇಂದ್ರ ಸರಕಾರ ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡಲು ಕಾಯುತ್ತಿದ್ದ ಜನರಿಗೆ ಗುಡ್ ನ್ಯೂಸ್, ಎಪ್ರಿಲ್ ಒಂದರಿಂದಲೇ ಅವಕಾಶ

ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡಲು ಕಾಯುತ್ತಿದ್ದ ಜನರಿಗೆ ಗುಡ್ ನ್ಯೂಸ್, ಎಪ್ರಿಲ್ ಒಂದರಿಂದಲೇ ಅವಕಾಶ

0
ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡಲು ಕಾಯುತ್ತಿದ್ದ ಜನರಿಗೆ ಗುಡ್ ನ್ಯೂಸ್, ಎಪ್ರಿಲ್ ಒಂದರಿಂದಲೇ ಅವಕಾಶ

ಬಡವರ್ಗದ ಜನತೆಗೆ ಅವಶ್ಯಕ ವಸ್ತುಗಳು ಸಿಗಬೇಕು, ಅವರನ್ನು ಅಭಿವೃದ್ಧಿ ಪಡಿಸಬೇಕೆಂದು ರಾಜ್ಯ ಮತ್ತು ಕೇಂದ್ರ ಸರಕಾರ ಹಲವು‌ ರೀತಿಯ ಪ್ರಗತಿಪರ ಯೋಜನೆಗಳನ್ನು ಜಾರಿಗೆ ತರುತ್ತಲೆ ಬಂದಿದೆ. ಅಂತಹ ಯೋಜನೆಯಲ್ಲಿ ಬಡವರ್ಗದ ಜನತೆಗೆ ಆಹಾರ ಧಾನ್ಯ ಗಳ ಸೌಲಭ್ಯ ಗಳನ್ನು ಒದಗಿಸುವ ಉಚಿತ ಪಡಿತರ ಅಂದರೆ ಅನ್ನಭಾಗ್ಯ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯ‌ ಸೌಲಭ್ಯ ಪಡೆಯಬೇಕಿದ್ರೆ ಪ್ರಮುಖವಾಗಿ ರೇಷನ್ ಕಾರ್ಡ್ ‌ಕೂಡ ಅಗತ್ಯವಾಗಿ ಬೇಕು.ಆದ್ರೆ ಹೆಚ್ಚಿನ‌ ಜನರು ಈ ಕಾರ್ಡ್ ಅರ್ಜಿ ಸಲ್ಲಿಕೆಗೆ ಕಾಯುತ್ತಿದ್ದು ಅಂತವರಿಗೆ ಇದೀಗ ಶುಭ ಸುದ್ದಿಯೊಂದು ಸಿಕ್ಕಿದೆ.

ಶೀಘ್ರ ಹಂಚಿಕೆ
ಆಹಾರ ಇಲಾಖೆಯ ಸಚಿವ ಕೆಎಚ್ ಮುನಿಯಪ್ಪ ಅವರು ಹೊಸ ಪಡಿತರ ಚೀಟಿ ವಿತರಣೆಯ ಬಗ್ಗೆ ಶುಭ ಸುದ್ದಿಯನ್ನು ನೀಡಿದ್ದಾರೆ. ಈಗಾಗಲೇ ಈ ಮೊದಲು ಅರ್ಜಿ ಸಲ್ಲಿಕೆ ಮಾಡಿದ್ದ ಅರ್ಜಿಗಳನ್ನು ಪರಿಶೀಲನೆ ಮಾಡಿ ಅವುಗಳನ್ನು ಮಾರ್ಚ್ 31ರ ಒಳಗೆ ಎಲ್ಲಾ ಅರ್ಜಿ ಪರಿಶೀಲನೆ ಮಾಡಿ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದಿದ್ದಾರೆ.

ತಿದ್ದುಪಡಿಗೂ ಅವಕಾಶ?
ನಿಮ್ಮ ರೇಷನ್ ಕಾರ್ಡ್ ಅಲ್ಲಿ ಹೆಸರು ಸೇರ್ಪಡೆ , ಹೆಸರು ಬದಲಾವಣೆ, ವಿಳಾಸ ಬದಲಾವಣೆ ಇತ್ಯಾದಿ ತಪ್ಪುಗಳಿದ್ದರೆ‌ ತಿದ್ದುಪಡಿಯು ಸೇರಿದಂತೆ ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿ ಸರಿಪಡಿಸಿಜೊಳ್ಳಲು ಮಾಡಿಕೊಳ್ಳಲು ಸರಕಾರ ಇದೀಗ ಮತ್ತೊಮ್ಮೆ ಅವಕಾಶವನ್ನು ಕಲ್ಪಿಸಿದೆ.

ಹೊಸ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ
ಹೊಸ ಕಾರ್ಡ್ ಗೆ ಅರ್ಜಿ ಹಾಕಲು ಕೂಡ ಏಪ್ರಿಲ್ ಒಂದರಿಂದ ಅವಕಾಶ ಇರಲಿದೆ ಎಂದು ಆಹಾರ ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಮಾಹಿತಿ ನೀಡಿದ್ದಾರೆ.ಇಂದು ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ರೇಷನ್ ಕಾರ್ಡ್ ಸಮಸ್ಯೆ ಯಿಂದ ಹೆಚ್ಚಿನ ಜನರಿಗೆ ಲಭ್ಯವಾಗಿಲ್ಲ.‌ ಹಾಗಾಗಿ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡೋರಿಗೂ ಈ ಅವಕಾಶವನ್ನು ಕಲ್ಪಿಸಲಾಗಿದೆ

ಈ ದಾಖಲೆ ಕಡ್ಡಾಯ
*ಆಧಾರ್ ಕಾರ್ಡ್
*ಗುರುತಿನ ಚೀಟಿ
*ವಿಳಾಸದ ಪುರಾವೆ
*ಫೋಟೋ
*ಆದಾಯ ಪ್ರಮಾಣ ಪತ್ರ
*ಜಾತಿ ಪ್ರಮಾಣ ಪತ್ರ
ಇತ್ಯಾದಿ

ರೇಷನ್ ಕಾರ್ಡ್ ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು‌ https://ahara.kar.nic.in/ ಆಹಾರ ಇಲಾಖೆಯ ಈ ಅಧಿಕೃತ ಲಿಂಕ್ ನಲ್ಲಿ ಅರ್ಜಿ ಹಾಕಬಹುದಾಗಿದೆ

 

LEAVE A REPLY

Please enter your comment!
Please enter your name here