Home ಸರಕಾರಿ ಯೋಜನೆಗಳು ಕೇಂದ್ರ ಸರಕಾರ ಅಂಚೆ ಕಚೇರಿ ತಿದ್ದುಪಡಿ ಮಸೂದೆ ಅಂಗೀಕಾರ, ಕೇಂದ್ರ ಸರಕಾರದ ನಿಲುವೇನು?

ಅಂಚೆ ಕಚೇರಿ ತಿದ್ದುಪಡಿ ಮಸೂದೆ ಅಂಗೀಕಾರ, ಕೇಂದ್ರ ಸರಕಾರದ ನಿಲುವೇನು?

0
ಅಂಚೆ ಕಚೇರಿ ತಿದ್ದುಪಡಿ ಮಸೂದೆ ಅಂಗೀಕಾರ, ಕೇಂದ್ರ ಸರಕಾರದ ನಿಲುವೇನು?

ಇಂದು ಹೆಚ್ಚಿನ ಜನರು ಸೇವಿಂಗ್ ಮಾಡಲು ಬಯಸುತ್ತಾರೆ. ಅದರೆ ಸೇವಿಂಗ್ಸ್ ಅಂತ ಬಂದಾಗ ಜನ ಯಾವುದು ಸೇಫ್ ಎಂದು ನೊಡೇ ನೋಡುತ್ತಾರೆ. ಅದರಲ್ಲಿ ಮೊದಲಿಗೆ ಆಯ್ಕೆ ಮಾಡುವುದೆ ಅಂಚೆಕಛೇರಿ. ಇಲ್ಲಿ ಹಣವನ್ನು ಹೂಡಿಕೆ ಮಾಡಿದ್ರೆ ಬಹಳ ಉತ್ತಮ ಮಟ್ಟದ ಹಣವನ್ನು ಕೂಡ ಇಲ್ಲಿ ಸೇವಿಂಗ್ ಮಾಡಲು ಉತ್ತಮ ಆಯ್ಕೆ ಎನ್ನಬಹುದು.ಇಲ್ಲಿ ಹಿರಿಯ ನಾಗರಿಕರು ಕೂಡ ತಮ್ಮ ಪಿಂಚಣಿ ಹಣದಲ್ಲಿ ಒಂದಷ್ಟು ಮೊತ್ತವನ್ನು ಹಿರಿಯ ನಾಗರಿಕರ ಉಳಿತಾಯ ಯೋಜನೆ ಮೂಲಕ ಉಳಿತಾಯ ಮಾಡಬಹುದಾಗಿದೆ.

ಕೇಂದ್ರ ಸರಕಾರ ಮಹತ್ವದ ಮಾಹಿತಿ ನೀಡಿದೆ

125 ವರ್ಷಗಳ ಹಿಂದಿನ ಹಳೆಯದಾದ ಭಾರತೀಯ ಅಂಚೆ ಕಚೇರಿ ಕಾಯಿದೆಯನ್ನು ರದ್ದುಗೊಳಿಸಿ, ಹೊಸದಾದ ವ್ಯವಸ್ಥೆಯನ್ನು ಜಾರಿಗೆ ತರುವ ಅಂಚೆ ಕಚೇರಿ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆ ಇಂದು ಅಂಗೀಕರಿಸಿದ್ದು ಈ ಬಗ್ಗೆ ಕೇಂದ್ರ ಸರಕಾರ ಮಹತ್ವದ ಮಾಹಿತಿ ಯೊಂದು ನೀಡಿದೆ.ದೇ ಶದ ಅತ್ಯಂತ ಹಳೆಯ ಸೇವೆಯಾದ ಅಂಚೆ ಕಚೇರಿಯನ್ನು ಎಂದಿಗೂ ನಾವು ಖಾಸಗೀಕರಣ ಮಾಡುವುದಿಲ್ಲ. ಮುಂದೆಯು ಹೊಸ ಕಚೇರಿಗಳನ್ನು ತೆರೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಇನ್ನಷ್ಟು ಅಂಚೆಕಛೇರಿ ಸ್ಥಾಪನೆ

2014 ರಿಂದ 2023 ರ ವರೆಗೆ ಸುಮಾರು 5 ಸಾವಿರ ಅಂಚೆ ಕಚೇರಿಗಳನ್ನು ತೆರೆಯಲಾಗಿದೆ. ಸುಮಾರು 5,746 ಹೊಸ ಕಚೇರಿಗಳನ್ನು ತೆರೆಯುವ ಯೋಜನೆ ಪ್ರಕ್ರಿಯೆಯಲ್ಲಿದೆ ಎಂದಿದ್ದಾರೆ. ಅಂಚೆ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದೆ. ಇದರ ಸೇವೆಯನ್ನು ವಿಸ್ತರಿಸಿದೆ.

ಸೂಕ್ತ ಮಾಹಿತಿ ತಿಳಿಸಿದ್ದಾರೆ

ಮಸೂದೆ ಕುರಿತು ನಡೆದ ಚರ್ಚೆಗೆ ಉತ್ತರ ನೀಡಿದ ಸಂವಹನ ಸಚಿವ ಅಶ್ವಿನಿ ವೈಷ್ಣವ್ ಅವರು, ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಮಸೂದೆಯಲ್ಲಿ ಸೂಕ್ತ ಅಂಶವನ್ನು ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಲಾಭ ಪಡೆಯಬಹುದಾಗಿದೆ

ಪೋಸ್ಟ್‌ ಆಫೀಸ್‌ಗಳಲ್ಲಿ ಟೈಮ್‌ ಡೆಪಾಸಿಟ್‌ ಅಕೌಂಟ್‌ ತೆರೆದರೂ ಉತ್ತಮ ಲಾಭ ಪಡೆಯಬಹುದಾಗಿದ್ದು, ಇಂಡಿಯಾ ಪೋಸ್ಟ್‌ ಹೆಚ್ಚು ಬಡ್ಡಿಯನ್ನು ನಿಗದಿ ಮಾಡಿದೆ. ಒಂದು, ಎರಡು, ಮೂರು ಹಾಗೂ ಐದು ವರ್ಷದವರೆಗೆ ಠೇವಣಿ ಮಾಡುವ ಹಣಕ್ಕೆ ಹೆಚ್ಚು ಬಡ್ಡಿ ಇಲ್ಲಿ ಸಿಗಲಿದೆ.ಇಲ್ಲಿ ಹಿರಿಯ ನಾಗರಿಕರು ಕೂಡ ತಮ್ಮ ಪಿಂಚಣಿ ಹಣದಲ್ಲಿ ಒಂದಷ್ಟು ಮೊತ್ತವನ್ನು ಹಿರಿಯ ನಾಗರಿಕರ ಉಳಿತಾಯ ಯೋಜನೆ ಮೂಲಕ ಉಳಿತಾಯ ಮಾಡಬಹುದಾಗಿದೆ.

ಬಡ್ಡಿ ಹೆಚ್ಚಳ

ಅಂಚೆ ಕಛೇರಿಯ ಈ ಯೋಜನೆಯಲ್ಲಿ, ಹಣವು ಸುರಕ್ಷಿತವಾಗಿ ಉಳಿಯುದಲ್ಲದೆ ಬಡ್ಡಿ ಕೂಡ ಉತ್ತಮವಾಗಿರುತ್ತದೆ. ಬ್ಯಾಂಕ್‌ಗಳಿಗೆ ಹೋಲಿಸಿದರೆ ಬಡ್ಡಿಯೂ ಬಹಳಷ್ಟು ಹೆಚ್ಚಾಗಿದೆ. ಐದು ವರ್ಷಗಳವರೆಗೆ ಹೂಡಿಕೆ ಮಾಡಲು ಬಯಸಿದರೆ ಇದು ಲಾಭದಾಯಕ ಹೂಡಿಕೆ ಎಂದೆ ಹೇಳಬಹುದಾಗಿದೆ.

 

LEAVE A REPLY

Please enter your comment!
Please enter your name here