
ಹಿಂದೆಲ್ಲ ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಮನೆ ಒಳಗೆ ಇರಬೇಕು ಬಟ್ಟೆ ಬಳಸಬೇಕು. ಅದು ಇದು ಮುಟ್ಟ ಬಾರದು ಇನ್ನು ಅನೇಕ ನಿಯಮ ಇತ್ತು. ಆದರೆ ಈಗ ಕಾಲ ಬದಲಾಗಿದೆ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಅಧಿಕ ಪ್ರಾಮುಖ್ಯತೆ ಪಡೆಯುತ್ತಿದೆ. ಹಾಗಾಗಿ ದೇಶದ ಎಲ್ಲ ಮಹಿಳೆಯರೂ ಕೂಡ ನೈರ್ಮಲ್ಯಕ್ಕೆ ಪ್ರಾಮುಖ್ಯತೆ ನೀಡಿ ಆರೋಗ್ಯಯುತವಾಗಿ ಇರಬೇಕು ಎಂಬ ನೆಲೆಯಲ್ಲಿ ಎಲ್ಲ ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಉಚಿತ ಮತ್ತು ಕಡಿಮೆದರಕ್ಕೆ ಸ್ಯಾನಿಟರಿ ಪ್ಯಾಡ್ ವಿತರಣೆ ಮಾಡಲಾಗುತ್ತಿದೆ.
ವಯಸ್ಸಿನ ಹೆಣ್ಣು ಮಕ್ಕಳಿಗೆ ಮೈತ್ರಿ ಮುಟ್ಟಿನ ಕಪ್ ನೀಡುವ ಜೊತೆಗೆ ಸ್ಯಾನಿಟರಿ ಪ್ಯಾಡ್ ಅನ್ನು ಸಹ ಉಚಿತವಾಗಿ ವಿತರಿಸಲಾಗುತ್ತಿದೆ. ಅದೇ ರೀತಿ ಹೆಣ್ಣು ಮಕ್ಕಳಿಗೆ 35ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಸ್ಯಾನಿಟರಿ ಪ್ಯಾಡ್ ವಿತರಣೆ ಯೋಜನೆ ಕೈ ಹಾಕಲಾಗಿತ್ತು. ಅದನ್ನು ಜನೌಷಧ ಕೇಂದ್ರದ ಮೂಲಕ ಹಳ್ಳಿ ಭಾಗದ ತೀರ ಬಡ ವರ್ಗದ ಮಹಿಳೆಯರಿಗೂ ತಲುಪಿಸುವ ಗುರಿ ಹೊಂದಲಾಗಿದೆ.
ಬಳಕೆ ಪ್ರಮಾಣ ಏರಿಕೆ
ಸ್ಯಾನಿಟರಿ ಪ್ಯಾಡ್ ನ ಬಳಕೆ ಈ ಹಿಂದಿಗಿಂತ ಅಧಿಕ ಆಗಿದೆ ಎಂದು ಹೇಳಬಹುದು. 2014 ರ ಅಂಕಿ ಅಂಶ ಇದಕ್ಕೆ ಒಂದು ಸಾಕ್ಷಿಯಾಗಿದೆ. 2014ರಲ್ಲಿ ಸ್ಯಾನಿಟರಿ ಪ್ಯಾಡ್ ಬಳಸುವ ಮಹಿಳೆಯರ ಪ್ರಮಾಣ 11% ನಿಂದ 14%ವರೆಗೆ ಇತ್ತು. ಆದರೆ 2022-2023ರ ಸಾಲನ್ನು ನೋಡುವುದಾದರೆ 45% ಗೆ ಬಂದು ತಲುಪಿದ್ದು ಈ ಹಿಂದಿಗಿಂತಲೂ ಬಳಕೆ ಪ್ರಮಾಣ ಅಧಿಕ ಆಗಿರುವುದನ್ನು ಕಾಣಬಹುದು. ಇದು ಅಭಿವೃದ್ಧಿಗೆ ದ್ಯುತಕವಾಗಿದೆ.
ರಕ್ತ ಹೀನತೆ ಸಮಸ್ಯೆ
ಮಹಿಳೆಯರಿಗೆ ಈಗ ಅಭಿವೃದ್ಧಿ ಕಾರ್ಯ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಅನೇಕ ಯೋಜನೆ ಪರಿಚಯಿಸಲಾಗುತ್ತಿದೆ. ರಕ್ತ ಹೀನತೆ ಸಮಸ್ಯೆ ಇತ್ತೀಚೆಗೆ ಮಹಿಳೆಯರಿಗೆ ಕಾಡುವ ಅತೀ ದೊಡ್ಡ ಸಮಸ್ಯೆ ಆಗುತ್ತಿದೆ. ಹಾಗೆ ಅಂತಹ ಸಮಸ್ಯೆ ಒಳಗಾದವರನ್ನು ಗುರುತಿಸಿ ಆ ಸಮಸ್ಯೆ ಬಗೆಹರಿಸಲು ಸರಕಾರ ಚಿಂತನೆ ನಡೆಸುತ್ತಿದ್ದು ಈ ಗಾಗಲೇ ಕಾರ್ಡ್ ಸೌಲಭ್ಯವನ್ನು ಸಹ ಬಿಡುಗಡೆ ಮಾಡಿದೆ.
ಇದಕ್ಕಾಗಿ ಈಗ ಮೂರು ವಿಧವಾಗಿ ಕಾರ್ಡ್ ಸಹ ಬಿಡುಗಡೆ ಮಾಡಲಾಗಿದ್ದು ಸಮಸ್ಯೆ ಇರುವ ಬಡ ಮತ್ತು ಮಧ್ಯಮ ವರ್ಗದ ಸಾಮಾನ್ಯ ಮಹಿಳೆಯರಿಗೆ , ಬುಡಕಟ್ಟು ವರ್ಗದ ಮಹಿಳೆ ಸೇರಿದಂತೆ ಅನೇಕರ ಸಮಸ್ಯೆ ಬಗೆಹರಿಸಲಾಗುತ್ತಿದೆ. ಅದರ ಜೊತೆಗೆ ಸಾಮಾನ್ಯ ಹಳ್ಳಿ ಪ್ರದೇಶದಲ್ಲಿ ವಾಸಿಸುವ ಮಹಿಳೆಯರಿಗೆ ಕೂಡ 35 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಸರಕಾರದಿಂದ ಜನೌಷಧಿ ಕೇಂದ್ರದ ಮೂಲಕ ಸ್ಯಾನಿಟರಿ ಪ್ಯಾಡ್ ವಿತರಣೆ ಮಾಡಲಾಗುತ್ತಿದೆ. ಹಾಗಾಗಿ ಈ ಕ್ರಮಕ್ಕೆ ದೇಶದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
