
ಇಂದು ಪ್ರತಿಯೊಬ್ಬ ವ್ಯಕ್ತಿಗೂ ಮೂಲಭೂತ ಅವಶ್ಯಕ ವಸ್ತುಗಳು ಬಹಳ ಮುಖ್ಯ ವಾಗುತ್ತದೆ. ಅದೇ ರೀತಿ ವಿಶೇಷಚೇತನ ವ್ಯಕ್ತಿಗಳ ಬದುಕನ್ನು ಮತ್ತಷ್ಟು ಹಸನಾಗಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಹಳಷ್ಟು ಪ್ರೇರೆಪಿಸುತ್ತಲೆ ಬಂದಿದೆ. ಇದಕ್ಕಾಗಿ ಸಹಾಯಧನ ನೀಡುತ್ತಾ ಬಂದಿದ್ದು ವಿವಿಧ ರೀತಿಯ ಸೌಲಭ್ಯಗಳನ್ನು ಸಹ ಕಲ್ಪಿಸಿದೆ. ವಿಶೇಷಚೇತನರನ್ನು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅವರನ್ನು ಸಮಾಜದಲ್ಲಿ ಗುರುತಿಸಲು ಸರಕಾರದ ಯೋಜನೆ ಈ ಹಿಂದಿನಿಂದಲೂ ಕೂಡ ಪ್ರಚಲಿತದಲ್ಲಿದ್ದು ಅದರಲ್ಲಿ ಮಾಸಾಶನ ಯೋಜನೆ ಕೂಡ ಒಂದಾಗಿದೆ.
ಯಾರು ಪಡೆಯಬಹುದು ಈ ಸೌಲಭ್ಯ
ಕೆಲವೊಮ್ಮೆ ವಿಶೇಷಚೇತನ ಮಕ್ಕಳಲ್ಲಿಯು ಹಲವು ರೀತಿಯ ಪ್ರತಿಭೆಗಳು ಇರುತ್ತದೆ. ಇದಕ್ಕಾಗಿ ಅವರನ್ನು ಉತ್ತೇಜಿಸಲು ಉಚಿತ ಶಿಕ್ಷಣ ಸೌಲಭ್ಯವನ್ನು ಜಾರಿಗೆ ತಂದಿದೆ. ಅದೇ ರೀತಿ ಮಗು ಹುಟ್ಟುವಾಗಲೇ ವಿಶೇಷಚೇತನ ಸಮಸ್ಯೆಯಿಂದ ಇದ್ದರೆ ಅಥವಾ ಅಪಘಾತ ಇನ್ನಿತರ ಅಂಗವೈಕಲ್ಯ ಕಂಡು ಬಂದರೆ ಇದಕ್ಕಾಗಿ ಸರಕಾರ ಮಾಸಾಶನ ಸೌಲಭ್ಯ ನೀಡುತ್ತದೆ. ಆರ್ಥಿಕ ಭದ್ರತೆ ನೀಡುವ ಸಲುವಾಗಿ ಈ ಯೋಜನೆ ತರಲಾಗಿದೆ.
ಷರತ್ತು ಏನು?
*ಭಾರತೀಯ ಪ್ರಜೆಯಾಗಿದ್ದರೆ ಮಾತ್ರ ಈ ಯೋಜನೆಯ ಸೌಲಭ್ಯ ದೊರೆಯುತ್ತದೆ ಕರ್ನಾಟಕದಲ್ಲಿ ಕನಿಷ್ಟ ವಾಸ್ತವ್ಯ ಇದ್ದರೆ ಈ ಯೋಜನೆ ಪಡೆಯಬಹುದು.
*ವೈದ್ಯಕೀಯ ಪ್ರಾಮಾಣಪತ್ರ ವಿಶೇಷಚೇತನ ಸಮಸ್ಯೆ ಪತ್ರ ಹೊಂದಿರಬೇಕು.
*40%ಅಂಗವೈಕಲ್ಯ ಇದ್ದು ವೈದ್ಯಕೀಯ ಪತ್ರ ವಿದ್ದರೆ ಅವರಿಗೆ ತಿಂಗಳಿಗೆ 500ರೂ, 75% ಅಂಗವೈಕಲ್ಯ ಹೊಂದಿದ್ರೆ 1,200ರೂ. ಮಾಸಾಶನ ನೀಡಲಾಗುತ್ತದೆ.
ಯೋಜನೆಗೆ ಬೇಕಾದ ದಾಖಲಾತಿ
ವಾಸಸ್ಥಳದ ದೃಢೀಕರಣ ಪತ್ರ
ವಿಶೇಷಚೇತನ ವೈದ್ಯಕೀಯ ಪ್ರಮಾಣ ಪತ್ರ
ಪೋಟೋ
ಆಧಾರ್ ಕಾರ್ಡ್
ಬ್ಯಾಂಕ್ ಖಾತೆ
ವಯಸ್ಸಿನ ದೃಢೀಕರಣ ಪತ್ರ
ಇವರು ಪಡೆಯಬಹುದು
*ಅಂಧತ್ವ
*ಕುಷ್ಠರೋಗ
*ಶ್ರವಣದೋಷ ಸಮಸ್ಯೆ
*ಕೈ,ಕಾಲು, ಚಲನ ವಲನ ಅಂಗವಿಕಲತೆ
*ಬುದ್ಧಿಮಾಂದ್ಯತೆ
*ಮಾನಸಿಕ ಅಸ್ವಸ್ಥತೆ
*ಅಪಘಾತ ಸಮಸ್ಯೆಯಿಂದ ಕೈ,ಕಾಲು ಸಮಸ್ಯೆ ಇತ್ಯಾದಿಗೆ ಪಡೆಯಬಹುದು
ಅರ್ಜಿ ಸಲ್ಲಿಸಿ
ಆಯಾ ಗ್ರಾಮದ ನಾಡ ಕಚೇರಿ, ತಾಲೂಕು ತಹಶೀಲ್ದಾರ್ ಕಚೇರಿಗಳಲ್ಲಿ ಅರ್ಜಿ ಪಡೆದು ಸಲ್ಲಿಸಿ. ಇಲ್ಲದಿದ್ದಲ್ಲಿ www.nadakacheri.karnataka.gov.in) ವೆಬ್‌ಸೈಟ್‌ಗೆ ತೆರಳಿ ಅರ್ಜಿ ಹಾಕಬಹುದಾಗಿದೆ.
