ದೇಶದಲ್ಲಿ ರೈತರ ಸಂಖ್ಯೆ ಬಹಳ ಕಡಿಮೆ ಇದೆ. ಕಷ್ಟ ಪಟ್ಟು ಕೆಲಸ ಮಾಡಿ ಸರಿಯಾದ ಬೆಲೆಗೆ ತಮ್ಮ ಫಸಲು ಬಾರದೆ ಇದ್ದರೆ ದೊಡ್ಡ ನಷ್ಟ ಅನುಭವಿಸುತ್ತಾರೆ. ಹಾಗಾಗಿ ರೈತರಿಗೆ ಕಷ್ಟ ಪಟ್ಟು ಕೆಲಸ ಮಾಡುವುದೇ ಸಮಸ್ಯೆ ಎಂಬ ಭಾವನೆ ಬರುವುದು ಇದೆ. ಇದೇ ಕಾರಣಕ್ಕೆ ಕುಲ ಕಸುಬಾದ ರೈತ ಪ್ರವೃತ್ತಿಯನ್ನು ಬಿಟ್ಟು ನಗರದ ಕಡೆ ಅಂಗಡಿ ಇತರ ಉದ್ಯೋಗದತ್ತ ವಲಸೆ ಹೋಗುತ್ತಿದ್ದಾರೆ. ರೈತರಿಗೆ ಆರ್ಥಿಕ ಬೆಂಬಲ ನೀಡಬೇಕು ಎಂಬ ಸಲುವಾಗಿ ಕೇಂದ್ರ ಸರ್ಕಾರ ವಿನೂತನ ಯೋಜನೆಯೊಂದನ್ನು ಬಿಡುಗಡೆ ಮಾಡುತ್ತಿದ್ದು, ಕನಿಷ್ಟ ಭೂಮಿ ಹೊಂದಿದ್ದ ರೈತರು ಕೂಡ ಈ ಯೋಜನೆ ಅಡಿಯಲ್ಲಿ ಸೌಲಭ್ಯ ಪಡೆಯಬಹುದು.
ರೈತರಿಗೆ ಕೃಷಿ ಸಂಕಷ್ಟ ಎಂದು ಎನಿಸಲು ಮುಖ್ಯ ಕಾರಣ ಸರಿಯಾದ ಆರ್ಥಿಕ ಸದೃಢತೆ ಇಲ್ಲದಿರುವುದು ಗಮನಕ್ಕೆ ಬಂದ ಕೇಂದ್ರ ಸರ್ಕಾರವು ಆರ್ಥಿಕ ಬೆಂಬಲ ನೀಡುವ ಸಲುವಾಗಿ ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು, ರೈತರಿಗೆ ಸಂಕಷ್ಟದ ಸಂದರ್ಭದಲ್ಲಿ ಆಸರೆಯಾಗಲು ಈ ಯೋಜನೆ ಬಹಳ ಸಹಕಾರಿ ಎನ್ನಬಹುದು. ಇದೀಗ ಇಂತಹದ್ದೆ ಇನ್ನೊಂದು ಯೋಜನೆ ಕೂಡ ಜಾರಿ ಆಗಿದ್ದು ಕಡಿಮೆ ಭೂಮಿ ಹೊಂದಿದ್ದ ರೈತರಿಗೆ ಇದೊಂದು ಸಂತಸ ತಂದಿದೆ.
ಹೊಚ್ಚ ಹೊಸ ಯೋಜನೆ
ರೈತರ ಪರವಾಗಿ ಕೃಷಿ ಆಶೀರ್ವಾದ್ ಯೋಜನೆಯನ್ನು ಜಾರಿಗೆ ತಂದಿದ್ದು, ಕೃಷಿ ಭೂಮಿ ಹೊಂದಿದ್ದ ರೈತರಿಗೆ ಆರ್ಥಿಕ ಸಹಕಾರ ನೀಡಲು ಸರ್ಕಾರ ಮುಂದಾಗಿದೆ. ಈ ಒಂದು ಕೃಷಿ ಆಶೀರ್ವಾದ್ ಯೋಜನೆಯನ್ನು ಕೃಷಿ ಭೂಮಿ ಹೊಂದಿದ್ದ ರೈತರಿಗೆ 5ಎಕರೆ ಹಾಗೂ ಅದಕ್ಕಿಂತ ಕಡಿಮೆ ಭೂ ಪ್ರದೇಶ ಹೊಂದಿರುವ ರೈತರಿಗೆ ಒಂದು ಎಕರೆ ಹಾಗೂ ಅದಕ್ಕಿಂತ ಕಮ್ಮಿ ಇದ್ದರೆ 5,000 ರೂಪಾಯಿ ಆರ್ಥಿಕ ನೆರವು ಸಿಗಲಿದೆ. ಆ ಪ್ರಕಾರ 5000 ರೂಪಾಯಿಯಿಂದ ಪ್ರತಿ ಎಕರೆಗೆ ಸಿಗುವ ಕಾರಣ 5 ಎಕರೆ ಮೇಲೆ 25,000 ಮೊತ್ತ ಸಿಗಲಿದೆ. ಅದರೊಂದಿಗೆ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ 6,000 ದ ತನಕ ಸಹಾಯಧನ ಸಿಗಲಿದೆ.
ರೈತರು ಆಶೀರ್ವಾದ್ ಯೋಜನೆಯನ್ನು ಕೃಷಿಯಲ್ಲಿ ಹಂಗಾಮಿ ಕೃಷಿಗೂ ಮೊದಲೇ ಹಣ ಮಂಜೂರಾಗಲಿದೆ. ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ 6,000, ಕೃಷಿ ಆಶೀರ್ವಾದ್ ಯೋಜನೆ ಅಡಿಯಲ್ಲಿ 5,000 ರೂಪಾಯಿ ಒಟ್ಟು 11,000 ವಾರ್ಷಿಕ ಆರ್ಥಿಕ ಸಹಾಯಧನ ಪಡೆಯಲು ರೈತರು ಅರ್ಹರಾಗಲಿದ್ದಾರೆ. 5ಎಕರೆ ಭೂಮಿ ಹೊಂದಿದ್ದರೆ ಆಗ 25,000 ಮೊತ್ತ ಅದರ ಜೊತೆಗೆ 6,000 ರೂಪಾಯಿ ಪಿಎಂ ಕಿಸಾನದ ಯೋಜನೆ ಒಟ್ಟು 31 ಸಾವಿರ ವಾರ್ಷಿಕವಾಗಿ ಪಡೆಯಬಹುದು.
ಎಲ್ಲಿ ಜಾರಿಗೆ ಬಂದ ಯೋಜನೆ?
ಈ ಒಂದು ಕೃಷಿ ಆಶೀರ್ವಾದ್ ಯೋಜನೆಯನ್ನು ಜಾರ್ಖಂಡ್ ಸರ್ಕಾರ ಜಾರಿಗೆ ತಂದಿದೆ. ಇದನ್ನು ಪಡೆಯಲು ಸಣ್ಣ ಮತ್ತು ಅತಿ ಸಣ್ಣ ಕೃಷಿ ಉಳುಮೆ ಮಾಡುವ ರೈತರಿಗೆ ಮಾತ್ರವೇ ಅವಕಾಶ ಸಿಗಲಿದೆ. ಇದನ್ನು ಅತೀ ಕಡಿಮೆ ಜಾಗ ಹೊಂದಿದ್ದ ರೈತರು ಕೂಡ ಸೇವೆ ಸೌಲಭ್ಯ ಪಡೆಯಬಹುದು. ಇದುವರೆಗೆ ಜಾರ್ಖಂಡ್ ನಲ್ಲಿ 22.5 ಲಕ್ಷ ರೈತರಿಗೆ ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ. ಈ ಒಂದು ಹಣವು ಖಾರಿಫ್ ಹಂಗಾಮಿ ಕೃಷಿಗೂ ಮೊದಲೇ ಈ ಹಣ ಮಂಜೂರಾಗಲಿದೆ.
