
ಇಂದು ರೇಷನ್ ಕಾರ್ಡ್ ಅನ್ನೋದು ಬಹು ಮುಖ್ಯವಾದ ದಾಖಲೆ, ಈ ಕಾರ್ಡ್ ಮೂಲಕವೇ ಇಂದು ಹಲವು ರೀತಿಯ ಸೌಲಭ್ಯ ಗಳನ್ನು ನಾವು ಮುಖ್ಯವಾಗಿ ಸರಕಾರದ ಯಾವುದೇ ಸೌಲಭ್ಯ ಪಡೆಯಬೇಕಾದರೂ ನಾವು ರೇಷನ್ ಕಾರ್ಡ್ ಅನ್ನು ಹೊಂದಿರಬೇಕಾಗುತ್ತದೆ.
ಸೂಚನೆ ನೀಡಿದೆ
ಕೆಲವು ಜನರಿಗೆ ಬಿಪಿಎಲ್ ಕಾರ್ಡ್ ಇದ್ದರೂ ಪಡಿತರ ಪದಾರ್ಥಗಳನ್ನೇ ಪಡೆಯದ ಫಲಾನುಭವಿಗಳು ಇದ್ದಾರೆ. ಈಗಾಗಲೇ ಈ ಬಗ್ಗೆ ಆಹಾರ ಇಲಾಖೆಯು ಸೂಕ್ಷ್ಮ ವಾಗಿ ಪರಿಗಣಿಸಿದ್ದು, ಇಂತಹ ಕಾರ್ಡ್‌ದಾರರನ್ನು ಆಹಾರ ಇಲಾಖೆ ಗುರುತಿಸಿದ್ದು, ಅಂತಹ ಕಾರ್ಡ್ ರದ್ದುಗೊಳಿಸುವ ಸೂಚನೆಯನ್ನು ಸಹ ನೀಡಿದೆ. ಕೆಲವು ಪಡಿತರ ಹೊಂದಿದ ಜನರು ಕೇವಲ ಸರಕಾರಿ ಸೌಲಭ್ಯ ಪಡೆಯಲು ಆರೋಗ್ಯ ಸಂಬಂಧಿ, ಕೆಲಸದ ನಿಮಿತ್ತ ಸಾವಿರಾರು ಮಂದಿ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಬಡವರ್ಗದ ಜನತೆಗೆ ನೀಡುವ ನ್ಯಾಯಬೆಲೆ ಅಂಗಡಿಗಳಲ್ಲಿ ಕೊಡುವ ರೇಷನ್ ಖರೀದಿ ಮಾಡುತ್ತಿಲ್ಲ. ಹೀಗಾಗಿ ಅಂತಹವರಿಗೆ ಎಚ್ಚರಿಕೆ ಸಹ ನೀಡಿದೆ.
ಅರಿವು ಮೂಡಿಸುವ ಕಾರ್ಯ
ಕೆಲವು ಜನರು ಬಿಪಿಎಲ್ ಕಾರ್ಡ್ ಹೊಂದಿದ್ದರೂ ಪಡಿತರ ಪಡೆಯುತ್ತಿಲ್ಲ. ಇನ್ನೂ ಈ ಕುರಿತು ಪ್ರತಿಕ್ರಿಯಿಸಿರೋ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಪ್ರತಿಕ್ರಯಿಸಿ ಪಡಿತರ ಯಾಕೆ ತೆಗೆದುಕೊಂಡಿಲ್ಲ ಎಂಬುದರ ಬಗ್ಗೆ ಮಾಹಿತಿಯನ್ನು ಶೀಘ್ರವಾಗಿ ಸಂಗ್ರಹಿಸಲಾಗುವುದು. ಪಡಿತರ ತೆಗೆದುಕೊಳ್ಳೋದರ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದ್ದು, ಪಡಿತರ ಪಡೆಯಲು ಅರ್ಹರಾದವರು ಆಹಾರ ಧಾನ್ಯಗಳನ್ನು ಕೂಡ ಖರೀದಿ ಮಾಡಬೇಕು, ಕೇವಲ ಸರ್ಕಾರಿ ಲಾಭಕ್ಕಾಗಿ ಕಾರ್ಡ್ ಮಾಡಿಸಿದ್ದರೆ ಅವುಗಳನ್ನು ರದ್ದು ಮಾಡಲಾಗುವುದು ಎಂದಿದ್ದಾರೆ.
ಈ ಹಣವೂ ಇಲ್ಲ
ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರು ತಮ್ಮ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಗೆ ಲಿಂಕ್ ಮಾಡುವುದು ಸಹ ಕಡ್ಡಾಯ ಆಗಿದೆ. ಆಗದೇ ಇದ್ದಲ್ಲಿ ಅಂತಹ ಖಾತೆಗೆ ಗೃಹಲಕ್ಷ್ಮಿ, ಅನ್ನಭಾಗ್ಯ ಹಣ ಬರಲು ಸಾಧ್ಯವೇ ಇಲ್ಲ. ನೀವು ಸರಕಾರದ ಯಾವುದೇ ಯೋಜನೆಯ ಪ್ರಯೋಜನ ಪಡೆಯುವುದಿದ್ದರು ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮೊಬೈಲ್ ನಂಬರ್ ಇತ್ಯಾದಿ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರಬೇಕಾಗಿರುವುದು ಕಡ್ಡಾಯ.
ಹೊಸ ಕಾರ್ಡ್
ಈಗಾಗಲೇ ಒಂದು ಕೋಟಿಗೂ ಅಧಿಕ ಜನರಿಗೆ ಅನ್ನಭಾಗ್ಯದ ಹಣ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದ್ದು ಗ್ಯಾರಂಟಿ ಯೋಜನೆ ಹಣ ಬರಲು ಇಕೆವೈಸಿ ಮಾಡುವುದು ಕಡ್ಡಾಯ. ಇನ್ನೂ ಈಗಾಗಲೇ ವಿಧಾನಸಭಾ ಚುನಾವಣೆಗೂ ಮುನ್ನ ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಕೆ ಮಾಡಿರುವ ಸುಮಾರು ಅರ್ಜಿಗಳ ಪರಿಶೀಲನೆ ಆಗಬೇಕಿದ್ದು, ಅರ್ಜಿಯ ಪರಿಶೀಲನೆ ಕೂಡ ನಡೆಯುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಆಹಾರ ಇಲಾಖೆ ಕೂಡ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿದ್ದು ಕಾರ್ಡ್ ವಿತರಣೆ ಶೀಘ್ರವಾಗಿ ನಡೆಯಲಿದೆ.
