ಕೃಷಿ ಪ್ರತೀ ರಾಷ್ಟ್ರದ ಬೆಳವಣಿಗೆಯ ಧ್ಯೇಯವಾಗಿದ್ದರೂ ಕೃಷಿ ಕ್ಷೇತ್ರದಲ್ಲಿ ತೊಡಗಿರುವ ದೇಶಗಳ ಸಂಖ್ಯೆ ತೀರಾ ಕಡಿಮೆ ಇದೆ. ಇಂದು ಐಟಿ ಕಾರ್ಪೋರೆಟ್ ಕಂಪೆನಿಗಳು ಜಾಗತಿಕ ಮನ್ನಣೆ ಬರುತ್ತಿರುವ ಕಾರಣ ಕಷ್ಟ ಪಟ್ಟು ಕೆಲಸ ಮಾಡುವುದಕ್ಕಿಂತ ಎಸಿ ಚೇರ್ ನಲ್ಲಿ ಕಂಫರ್ಟ್ ಆಗಿ ಇರುವುದೇ ಲೇಸು ಎನ್ನುವವರಿದ್ದಾರೆ. ಇದು ನಮ್ಮ ದೇಶದಲ್ಲಿ ಕೂಡ ಇರುವ ಒಂದು ಪರಿಸ್ಥಿತಿ ಆಗಿದೆ. ಹಾಗಾಗಿ ರಾಜ್ಯದಲ್ಲಿ ಸಹ ಕೃಷಿ ಕ್ಷೇತ್ರ ಉತ್ತೇಜಿಸಲು ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರಿಗೆ ಅನೇಕ ಯೋಜನೆ ಜಾರಿಗೆ ತಂದಿದ್ದು ಈಗ ಇದ್ದ ಹಳೆ ಯೋಜನೆಗೆ ಹೊಸ ರೂಪ ನೀಡಲು ಮುಂದಾಗಲಾಗುತ್ತಿದೆ. ಈ ಹಿಂದೆ ಜಾರಿಯಲ್ಲಿದ್ದ ಕೃಷಿ ಭಾಗ್ಯ ಯೋಜನೆಗೆ ಈಗ ಮತ್ತೆ ಪುನರಾರಂಭಕ್ಕೆ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲು ಮುಂದಾಗುತ್ತದೆ. ಇದು ಅನೇಕ ಜನರ ಕೃಷಿ ಚಟುವಟಿಕೆಗೆ ಸಹಕಾರಿ ಆಗಲಿದೆ ಎಂದು ಈ ಮೂಲಕ ಹೇಳಬಹುದು.
ಈ ಒಂದು ಕೃಷಿ ಯೋಜನೆಯು ಮುಖ್ಯವಾಗಿ ಇಂದು ಬರಗಾಲದಂತಹ ಪರಿಸ್ಥಿತಿಯಲ್ಲಿಯೂ ಮಳೆ ಆಧಾರಿತ ಕೃಷಿ ಮಾಡಬೇಕೆಂದು ಕಂಗಾಲಾದವರಿಗೆ ಸುಸ್ಥಿರ ವ್ಯವಸ್ಥೆ ಒದಗಿಸುವ ಪರಿಕಲ್ಪನೆಯಿಂದ ರಚಿತವಾಗಿದೆ. ಮಳೆ ನೀರಿನ ವ್ಯರ್ಥ ಹರಿಯುವುದನ್ನು ತಪ್ಪಿಸಿ ಕೃಷಿ ಹೊಂಡಕ್ಕೆ ಸಂಗ್ರಹ ಮಾಡುವ ಕಾರಣ ವ್ಯಾಪಕ ನೀರಿನ ಸಂಗ್ರಹಣೆ ಆಗಲಿದೆ. ಹೊಂಡ , ಬದು ನಿರ್ಮಾಣವಾಗುವ ಕಾರಣ ವ್ಯಾಪಕ ನೀರಾವರಿ ಪ್ರಮಾಣ ಇದ್ದಂತಾಗುವುದು. ಹೀಗಾಗಿ ಉತ್ಪಾದನೆ ಹೆಚ್ಚಾಗಿ ಲಾಭದ ಪ್ರಮಾಣ ಅಧಿಕವಾಗಲಿದೆ.
ಎಷ್ಟು ಅನುದಾನ
ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಈ ಹಿಂದೆ ಈ ಸೌಲಭ್ಯ ಅನೇಕರಿಗೆ ನೆರವಾಗಿದ್ದು ಇದು ತಾತ್ಕಾಲಿಕ ಸ್ಥಗಿತವಾಗಿತ್ತು. ಆದರೆ ಈಗ ಮತ್ತೆ ಪುನಃ ಚಾಲನೆ ಸಿಕ್ಕಂತಾಗಿದೆ. 2024ರ ಅವಧಿಯ ಪ್ರಾರಂಭದಲ್ಲಿ 100ಕೋಟಿ ಅನುದಾನ ಬಿಡುಗಡೆ ಮಾಡಿದ್ದು, 24ಜಿಲ್ಲೆಯಲ್ಲಿ ಮಳೆಯಾಶ್ರೀತ ಕೃಷಿ ಮಾಡೊ ರೈತರಿಗೆ ಕೃಷಿ ಹೊಂಡ ಇತರ ನೀರಾವರಿ ಸಂಗ್ರಹಣೆ ಮಾಡುವ ಯೋಜನೆಗೆ ಸಹಾಯಧನ ನೀಡಲು ಇದು ಉಪಯುಕ್ತವಾಗಿದೆ. ಈ ಯೋಜನೆಯ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು ಹಂತ ಹಂತವಾಗಿ ಸಬ್ಸಿಡಿ ನೀಡಲು ಮುಂದಾಗಲಾಗುತ್ತಿದೆ. ಸಾಮಾನ್ಯ ವರ್ಗದ ಜನರಿಗೆ 80% ಸಹಾಯಧನ ಮತ್ತು SC, ST ಅವರಿಗೆ 90% ಸಹಾಯಧನ ನೀಡಲು ಮುಂದಾಗಲಾಗಿದೆ.
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನ ಮಾಡಲು ಚಿಂತನೆ ನಡೆಸಲಾಗಿದೆ. ಇದನ್ನು 2014ರ ಕೃಷಿ ನೀತಿ ಅನ್ವಯ ಜಾರಿಗೊಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ ಈ ಒಂದು ಪರಿಕಲ್ಪನೆಯನ್ನು ಸಚಿವ ಸಂಪುಟ ಕೂಡ ಅನುಮೋದನೆ ನೀಡಲು ಮುಂದಾಗಿರುವುದು ಬಹುತೇಕ ಕೃಷಿಕರಿಗೆ ಖುಷಿತಂದ ವಿಚಾರವಾಗಿದೆ. ಈ ಬಗ್ಗೆ ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ.
