Home ರಾಜ್ಯ ಸರಕಾರ 18 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ ಸಿಗ್ತಿದೆ ಒಂದು ಲಕ್ಷ ರೂಪಾಯಿ

18 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ ಸಿಗ್ತಿದೆ ಒಂದು ಲಕ್ಷ ರೂಪಾಯಿ

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿದೆ. ಹೆಣ್ಣುಮಕ್ಕಳಿಗೆ ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಎಲ್ಲ ರಂಗದಲ್ಲಿಯೂ ಸರಿ ಸಮಾನವಾದ ಸ್ಥಾನಮಾನ ನೀಡಲಾಗುತ್ತಿದ್ದು, ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ಬೆಂಬಲ ನೀಡುವುದನ್ನು ನಾವು ಕಾಣಬಹುದು. ಹೆಣ್ಣು ಮಕ್ಕಳಿಗೆ ಶೈಕ್ಷಣಿಕ, ಮದುವೆ, ಭವಿಷ್ಯದಲ್ಲಿ ನೆರವಾಗುವ ಅನೇಕ ಯೋಜನೆ ಇದ್ದು ಅವುಗಳಲ್ಲಿ ಒಂದಾಗಿ ಭಾಗ್ಯಲಕ್ಷ್ಮೀ ಯೋಜನೆಯನ್ನು ಕಾಣಬಹುದು. ಈ ಯೋಜನೆ ಅಡಿಯಲ್ಲಿ 18 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ 1 ಲಕ್ಷ ರೂಪಾಯಿ ಸರ್ಕಾರದಿಂದ ಲಭ್ಯವಾಗುತ್ತದೆ.

ಉದ್ದೇಶ ಏನು?
ಸರ್ಕಾರ ಒಂದು ಯೋಜನೆ ಜಾರಿಗೆ ತರುತ್ತದೆ ಎಂದರೆ ಅದರ ಹಿಂದೆ ಒಂದು ಅತ್ಯುತ್ತಮ ಸದುದ್ದೇಶ ಇದ್ದೇ ಇರಲಿದೆ. ಅದೇ ರೀತಿ ಬಹಳ ಹಿಂದೆ ಹೆಣ್ಣು ಮಗು ಜನಿಸಿದರೆ ವಂಶೋದ್ಧಾರ ಆಗೊಲ್ಲ, ಮದುವೆ ಮಾಡಿಸಿ ಕಳುಹಿಸುವುದೆ ಕಷ್ಟ ಎಂದೆಲ್ಲ ಅಂದುಕೊಳ್ಳುವ ಪ್ರಮಾಣ ಅಧಿಕ ಇತ್ತು. ಹಾಗಾಗಿ ಭ್ರೂಣ ಹತ್ಯೆ ಪ್ರಮಾಣ ಕೂಡ ಏರಿಕೆ ಆಗಿತ್ತು ಎನ್ನಬಹುದು‌. ಭ್ರೂಣ ಹತ್ಯೆ ಪ್ರಮಾಣ ಕಡಿಮೆ ಮಾಡಿ ಹೆಣ್ಣು ಮಗುವಿಗೂ ಲಿಂಗ ಸಮಾನತೆ ಆಧಾರದ ಮೇಲೆ ಅವಕಾಶ ಕಲ್ಪಿಸುವ ಸದುದ್ದೇಶದಿಂದ ಭಾಗ್ಯಲಕ್ಷ್ಮೀ ಯೋಜನೆಯನ್ನು ಪರಿಚಯಿಸಲಾಗುತ್ತಿದೆ.

ಈ ಒಂದು ಯೋಜನೆಯ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಹೆಣ್ಣು ಮಗುವಿಗೆ ಅವರ ಹೆಸರಿನಲ್ಲಿ ನಿಶ್ಚಿತ ಠೇವಣಿ ಇಟ್ಟು ಕಾಲ ಕ್ರಮೇಣ ಆ ಮಗು 18 ವರ್ಷ ಪೂರೈಸಿದ್ದ ಬಳಿಕ 1 ಲಕ್ಷ ರೂಪಾಯಿ ನೀಡಲಾಗುವುದು. ಅದನ್ನು ಶಿಕ್ಷಣ ಅಥವಾ ಇತರ ಉದ್ದೇಶಕ್ಕಾಗಿ ಬಳಸಿಕೊಳ್ಳಬಹುದಾಗಿದೆ. ಮಗುವಿಗೆ 18 ವರ್ಷ ಪೂರ್ಣವಾಗುತ್ತಿದ್ದಂತೆ  ಬಡ್ಡಿ ಸಹಿತ  ಹಣ ನೀಡಲಾಗುವುದು. ಹೀಗಾಗಿ ಯಾರು ಈ ಯೋಜನೆ ಅಡಿಯಲ್ಲಿ ತೊಡಗಿ ಕೊಂಡಿದ್ದಾರೆಯೊ ಅವರಿಗೆಲ್ಲ ಹಣ ಸಿಗುವ ಕಾಲ ಈಗ ಸಮೀಪಿಸಿದೆ ಎನ್ನಬಹುದು.

ಈ ಸರಳ ನಿಯಮವೂ ಇದೆ

*ಒಂದು ಕುಟುಂಬದ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರವೇ ಈ ಒಂದು ಯೋಜನೆ ಸೌಲಭ್ಯ ಸಿಗಲಿದೆ.
* ಹೆಣ್ಣು ಮಗುವಿನ ಹೆಸರಿಗೆ ನಿರ್ದಿಷ್ಟ ನಿಶ್ಚಿತ ಠೇವಣಿ ಇಡಲಾಗಿದ್ದು ಆ ಮಗು 18 ವರ್ಷ ಆದ ಬಳಿಕ  ಬಡ್ಡಿ ಸಹಿತ ಮೊತ್ತ ದೊರೆಯುತ್ತಿದೆ.
*ಸರ್ಕಾರ ಇದಕ್ಕೆ ಸಂಬಂಧಪಟ್ಟ ಬಾಂಡ್ ನೀಡಲಿದ್ದು, ಹಣ ಪಡೆಯುವಾಗ ಆ ಬಾಂಡ್ ಅನ್ನು ತೋರಿಸಬೇಕು.
*ಹೆಣ್ಣು ಮಗಳು ಕನಿಷ್ಟ 8ನೇ ತರಗತಿ ವಿದ್ಯಾಭ್ಯಾಸ ಮಾಡಿರಬೇಕು ಎಂಬ ನಿಯಮ ಇದೆ. ವಿದ್ಯಾಭ್ಯಾಸ ಮಾಡಿದ ದೃಢೀಕರಣ ಪತ್ರ ಅಗತ್ಯ.
*ಹೆಣ್ಣು ಮಗು ಯಾವುದೇ ತರನಾದ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿಗೆ ಒಳಗಾಗಿರಬಾರದು.

18 ವರ್ಷ ಪೂರ್ಣ
ಈ ಒಂದು ಭಾಗ್ಯಲಕ್ಷ್ಮೀ ಯೋಜನೆಯನ್ನು 2006-2007 ರಲ್ಲಿ ಜಾರಿಗೆ ತರಲಾಗಿತ್ತು ಈ ಯೋಜನೆ ಜಾರಿಗೆ ತಂದ ವರ್ಷ ಯಾರೆಲ್ಲ ಮಗುವಿಗೆ ಭಾಗ್ಯಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿದ್ದಾರೆಯೋ ಅವರಿಗೆಲ್ಲ ಇದೀಗ ಹಣ ಸಿಗಲಿದೆ ಎನ್ನಬಹುದು. ಈಗಾಗಲೇ ರಾಜ್ಯದ ನಾನಾ ಭಾಗದಲ್ಲಿ ಭಾಗ್ಯ ಲಕ್ಷ್ಮೀ ಯೋಜನೆಯ ಫಲಾನುಭವಿಗಳು ಹಣ ಪಡೆಯುತ್ತಿದ್ದು, ಮಕ್ಕಳ ಭವಿಷ್ಯಕ್ಕಾಗಿ ಆ ಹಣವನ್ನು ಎತ್ತಿಡುವ ಕೆಲಸವನ್ನು ಕೂಡ ಮಾಡುತ್ತಿದ್ದಾರೆ ಎನ್ನಬಹುದು

 
Previous articleಸಂಸದ ಕೋಟ ಶ್ರೀನಿವಾಸ ಪೂಜಾರಿಗೆ ಮಾತೃವಿಯೋಗ
Next articleಶಕ್ತಿ ಯೋಜನೆ ದುರುಪಯೋಗದ ಆರೋಪ, ಸಾರಿಗೆ ಇಲಾಖೆಯಿಂದ ಬಂತು ಹೊಸ ರೂಲ್ಸ್