Home ಕೇಂದ್ರ ಸರಕಾರ ರೈತ ಮಹಿಳೆಯರಿಗೆ ಗುಡ್ ನ್ಯೂಸ್, ಈ ಯೋಜನೆಡಿ ನಿಮಗೆ ಸಿಗಲಿದೆ 60 ರಿಂದ 80...

ರೈತ ಮಹಿಳೆಯರಿಗೆ ಗುಡ್ ನ್ಯೂಸ್, ಈ ಯೋಜನೆಡಿ ನಿಮಗೆ ಸಿಗಲಿದೆ 60 ರಿಂದ 80 ಸಾವಿರ ಮೊತ್ತ

ಭಾರತ ಕೃಷಿ‌ ಪ್ರಧಾನವಾದ ದೇಶವಾಗಿದ್ದು, ಇಲ್ಲಿ ಕೃಷಿ ಮಾಡಿಯೇ ಬದುಕು ರೂಪಿಸಿದವರು ಹೆಚ್ಚು ಎಂದು ಹೇಳಬಹುದು. ಹೌದು ಇಂದು ಕೃಷಿಯಲ್ಲಿ ಹಿರಿಯರು, ಅದರ ಜೊತೆ ಯುವಕರು ಕೂಡ ಪಾಲ್ಗೊಳ್ಳುತ್ತಾರೆ. ಆದರೆ ಕೃಷಿಯಲ್ಲಿ ಮಹಿಳೆಯರ ಪಾಲ್ಗೋಳ್ಳುವಿಕೆಯನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರವು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಈ ವಿಚಾರ ಮಹಿಳಾ ಕೃಷಿಕರಿಗೆ ಖುಷಿ ನೀಡಿದೆ.

ಕೃಷಿ ಸಖಿ ಯೋಜನೆ
ಗ್ರಾಮೀಣ ಮಹಿಳೆಯರನ್ನು ಉತ್ತೇಜನ ಮಾಡುವ ಸಲುವಾಗಿ ಕೃಷಿ ಸಖಿ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯ ಮೂಲಕ ಮಹಿಳೆಯರ ಕೌಶಲ್ಯಗಳನ್ನು ಅಭಿವೃದ್ಧಿ‌ ಮಾಡುವ ತರಬೇತಿ ‌ಜೊತೆಗೆ ಅವರಿಗೆ ಕೃಷಿ ಸಖಿ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಇದರಿಂದ ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಸಿಗಲಿದ್ದು ರೈತ ಕುಟುಂಬಗಳ ಆದಾಯವನ್ನು ಕೂಡ ಹೆಚ್ಚು ಮಾಡಲಿದೆ.

ಯಾವ ತರಬೇತಿ ಸಿಗಲಿದೆ
ಈ ಯೋಜನೆಯ ಮೂಲಕ ಮಣ್ಣಿನ ಆರೋಗ್ಯ, ಮಣ್ಣು ಸಂರಕ್ಷಣೆ ಕ್ರಮಗಳು, ಸಮಗ್ರ ಕೃಷಿ ವ್ಯವಸ್ಥೆ, ಪಶುಸಂಗೋಪನೆ ನಿರ್ವಹಣೆ ಇತ್ಯಾದಿಯ ಕುರಿತು ಆಯ್ದ ಸ್ವ-ಸಹಾಯ ಗುಂಪುಗಳ ಮಹಿಳೆಯರಿಗೆ 56 ದಿನಗಳ ಕಾಲ ತರಬೇತಿ ನೀಡುತ್ತದೆ. ಬಳಿಕ ಅವರಿಗೆ ಪ್ರಮಾಣಪತ್ರಗಳನ್ನು ಕೂಡ ನೀಡಲಾಗುತ್ತದೆ. ಅದೇ ರೀತಿ ಮಹಿಳಾ ಸ್ವಸಹಾಯ ಗುಂಪುಗಳಲ್ಲಿ ತಯಾರಿಸುವ ಉತ್ಪನ್ನಗಳ ಮೌಲ್ಯವರ್ಧನೆ, ಮಾರುಕಟ್ಟೆ ಲಭ್ಯಗೆ, ವ್ಯಾಪಾರ ವಹೀವಾಟುಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತದೆ.

ಆರ್ಥಿಕ ಲಾಭ ಪಡೆಯಬಹುದು
ಸಖಿ ಯೋಜನೆಯನ್ನು ಲಕ್ಪತಿ ದೀದಿ ಯೋಜನೆಯ ಅಡಿಯಲ್ಲಿ ಜಾರಿಗೆ ತರಲಾಗಿದೆ. ಮಹಿಳೆಯರು ಆರ್ಥಿಕವಾಗಿ ಸಬಲವಾಗಿರಲಿ ಎಂದು ಅವರಿಗೆ ಆದಾಯ ಕಲ್ಪಿಸಿಕೊಡುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ. ಮಹಿಳೆಯರು ವಿವಿಧ ಉದ್ಯಮ ಮಾಡುವ ಮೂಲಕ ಈ ಯೋಜನೆಯಡಿ 60 ರಿಂದ 80 ಸಾವಿರ ಸಂಪಾದನೆ ಮಾಡಬಹುದು.

ಸ್ಥಳೀಯ ಮಟ್ಟದಲ್ಲಿ ಉದ್ಯೋಗ
ಇದರ ಮೂಲಕ ರೈತರಿಗೆ ಸಕಾಲದಲ್ಲಿ ಕೃಷಿ ಮತ್ತು ತೋಟಗಾರಿಕೆಯ ಮಾಹಿತಿ ತಲುಪಿಸುವ ಕುರಿತು ಕೃಷಿಸಖಿಯರು ತರಬೇತಿ ಶಿಬಿರ ಮಾಡುತ್ತಾರೆ. ಶಿಕ್ಷಣ ಇದ್ದು ಉದ್ಯೋಗ ವಂಚಿತರಾಗಿರುವ ಗ್ರಾಮೀಣ ಮಹಿಳೆಯರಿಗೆ ಇದು ಸಹಾಯಕ ವಾಗಲಿದ್ದು, ಸ್ಥಳೀಯ ಮಟ್ಟದಲ್ಲಿ ಮಹಿಳೆಯರು ಉದ್ಯೋಗ ಹೊಂದಲು ಈ ಯೋಜನೆ ನೆರವಾಗಲಿದೆ. ಮಹಿಳೆಯರಿಗೆ ತರಬೇತಿ ನೀಡಿದ ಬಳಿಕ ಇಬ್ಬರು ಸಖಿಯರನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ನೇಮಕ ಮಾಡಲಾಗುತ್ತದೆ.

 
Previous articleಪರೀಕ್ಷಾ ಅಕ್ರಮ ತಡೆಗಟ್ಟಲು ಹೊಸ ಕಾನೂನು! ಅಧಿಸೂಚನೆ ಹೊರಡಿಸಿದ ಸರ್ಕಾರ
Next articleಆಯೋಧ್ಯೆ ರಾಮನಿಗೆ ಪ್ರಾಣಪ್ರತಿಷ್ಠೆ ನೆರೆವೇರಿಸಿದ್ದ ಪ್ರಧಾನ ಅರ್ಚಕ ಲಕ್ಷ್ಮಿಕಾಂತ್ ದೀಕ್ಷಿತ್ ನಿಧನ