Home ಕೇಂದ್ರ ಸರಕಾರ ಆಯುಷ್ಮಾನ್ ಭಾರತ್ ಯೋಜನೆಯಡಿ  ವಯೋವೃದ್ಧರಿಗೆ ಭರ್ಜರಿ ಗುಡ್ ನ್ಯೂಸ್

ಆಯುಷ್ಮಾನ್ ಭಾರತ್ ಯೋಜನೆಯಡಿ  ವಯೋವೃದ್ಧರಿಗೆ ಭರ್ಜರಿ ಗುಡ್ ನ್ಯೂಸ್

ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಜನಪರ ಯೋಜನೆ ಜಾರಿಗೆ ತರುತ್ತಲಿದೆ. ಅದರಲ್ಲಿ ಒಂದಾಗಿ ಆರೋಗ್ಯ ಸಂಬಂಧಿತ ವ್ಯವಸ್ಥೆ ಸುಧಾರಿಸುವ ಆಯುಷ್ಮಾನ್ ಭಾರತ್ ಯೋಜನೆಯ ಬಹಳ ಮಹತ್ವ ಸಾಧನೆಯನ್ನು ಮಾಡಿದೆ ಎನ್ನಬಹುದು. ಆಯುಷ್ಮಾನ್ ಆರೋಗ್ಯ ಸೇವೆ ಸಾರ್ವಜನಿಕರಿಗೆ ಬಹಳ ಅನುಕೂಲಕರವಾಗಿದ್ದು, ಈಗ ಅದೇ ವ್ಯವಸ್ಥೆ ಒಳಗೆ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ವಯೋವೃದ್ಧರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಿಕೊಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೊಸ ಘೋಷಣೆ ಮಾಡಿದ್ದಾರೆ.

ಆರೋಗ್ಯವೇ ಭಾಗ್ಯ ಎಂಬ ಕನಸು ಸಹಕಾರಿಯಾಗಲು ರಾಷ್ಟ್ರಪತಿಯವರು ಜನರಿಗಾಗಿ ಆಯುಷ್ಮಾನ್ ಯೋಜನೆಯಲ್ಲಿ ಕೆಲವು ಮಹತ್ವದ ಘೋಷಣೆ ಮಾಡಿರುವುದನ್ನು ನಾವು ಕಾಣಬಹುದಾಗಿದೆ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಅಡಿಯಲ್ಲಿ 55 ಕೋಟಿ ಫಲಾನುಭವಿಗಳಿಗೆ ಉಚಿತ ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತಿದ್ದು, ಈ ಕುರಿತಾದಂತೆ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಚರ್ಚೆ ಮಾಡಲಾಗಿದೆ.

ವೃದ್ಧರಿಗೆ ಉಚಿತ ಚಿಕಿತ್ಸೆ

ಪ್ರಧಾನ ಮಂತ್ರಿ ಆಯುಷ್ಮಾನ್ ಯೋಜನೆಯ ಅಡಿಯಲ್ಲಿ ವೃದ್ಧರಿಗೂ ಕೂಡ ಅನೇಕ ಆರೋಗ್ಯ ಹಾಗೂ ಚಿಕಿತ್ಸೆ ಸೌಲಭ್ಯ ನೀಡಲು ಸರ್ಕಾರ ತೀರ್ಮಾನ ಕೈಗೊಳ್ಳುತ್ತಿದೆ ಎಂದು ಈ ಮೂಲಕ ಹೇಳಬಹುದು. ಆಯುಷ್ಮಾನ್ ಭಾರತ್ ಯೋಜನೆಯ ಅಡಿಯಲ್ಲಿ 70 ವರ್ಷದ ವಯೋವೃದ್ಧರಿಗೆ ಕೂಡ ವಿಶೇಷ ಪ್ರಾತಿನಿಧ್ಯ ನೀಡಲಾಗುವುದು. ಹೀಗಾಗಿ ಅನೇಕ ಉಚಿತ ಚಿಕಿತ್ಸೆ ಪ್ರಯೋಜನ ವಯೋವೃದ್ಧರಿಗೆ ಸಿಗಲಿದೆ. ಇಂದು ಭಾರತ ಆರೋಗ್ಯದ ವಿಚಾರದಲ್ಲಿ ವಿಶ್ವ ಮಟ್ಟದಲ್ಲಿ ಸಾಧನೆ ಮಾಡುತ್ತಿದೆ ಎಂದು ರಾಷ್ಟ್ರಪತಿ ಅವರು ಸಂಸತ್ತಿನಲ್ಲಿ ಉಲ್ಲೇಖಿಸಿದ್ದಾರೆ.

ಭಾರತೀಯ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಆಯುಷ್ಮಾನ್ ಯೋಜನೆಯ ಸಂಪೂರ್ಣ ನಿರ್ವಹಣೆ ಮಾಡುತ್ತಿದ್ದು, ಅದರಲ್ಲಿ ಅನೇಕ ಸೇವೆಗಳು ಹಾಗೂ ಆರೋಗ್ಯ ಪ್ರಯೋಜನ ಬಡವರ್ಗದವರಿಗೆ ಸಿಗುತ್ತದೆ ಎಂದು ಹೇಳಬಹುದು. ಪ್ರಸ್ತುತ ನಮ್ಮ ದೇಶದಲ್ಲಿ 25,000 ಕೋಟಿ ಜನೌಷಧ ಕೇಂದ್ರ ಇವೆ. ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಚಿಕಿತ್ಸೆ ಪಡೆಯುವವರಿಗೆ 5ಲಕ್ಷದ ತನಕವು ಚಿಕಿತ್ಸೆ ವೆಚ್ಚ ಭರಿಸಲಾಗುವುದು. ಸರಿ ಸುಮಾರು 55ಕೋಟಿಗೂ ಅಧಿಕ ಜನರು ಈ ಯೋಜನೆ ಅಡಿಯಲ್ಲಿ ಆರೋಗ್ಯ ಪ್ರಯೋಜನ ಪಡೆಯಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದರು.

ಈ ಒಂದು ಆಯುಷ್ಮಾನ್ ಯೋಜನೆಯೂ ಯಾವೆಲ್ಲ ಆಸ್ಪತ್ರೆಯಲ್ಲಿ ಜಾರಿಗೆ ತರಬೇಕು ಎಂದು ಏಜೆನ್ಸಿ ಮೂಲಕ ಪಟ್ಟಿ ಸಿದ್ಧಮಾಡಿ ಸರ್ಕಾರದಿಂದ ಚಿಕಿತ್ಸೆ ವೆಚ್ಚವನ್ನು ಆಸ್ಪತ್ರೆಗೆ ಹಣ ಪಾವತಿ ಮಾಡಲಾಗುವುದು‌. ಇನ್ನು ಮುಂದೆ ವಯೋವೃದ್ಧರು ಸರ್ಕಾರದ ಈ ಸೇವೆಯಿಂದ ಆರೋಗ್ಯ ಪ್ರಯೋಜನ ಪಡೆದುಕೊಳ್ಳಲು ಬಹಳ ಸಹಕಾರಿ ಎನ್ನಬಹುದು.

 
Previous articleಬೆಕ್ಕು ನುಂಗಿ ತಡೆ ಗೋಡೆಯ ಬೇಲಿಗೆ ಹಾಕಲಾಗಿದ್ದ ಬಲೆಗೆ ಸಿಲುಕಿಕೊಂಡ ಹೆಬ್ಬಾವಿನ ರಕ್ಷಣೆ
Next articleಮಧುಮೇಹ ಸಮಸ್ಯೆ ಇರುವವರು ಹಾಲಿನ ಪುಡಿ ಚಹಾ, ಕಾಫಿ ಸೇವನೆಯಿಂದ ದೂರ ಇರುವುದು ಉತ್ತಮ..!