ಮಹಿಳೆಯರು ಎಲ್ಲ ಕ್ಷೇತ್ರದಲ್ಲಿಯೂ ಮುಂದೆ ಇರಬೇಕು ಎಂಬ ಕಾರಣಕ್ಕಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಗಾಗ ಹೊಸ ಹೊಸ ಯೋಜನೆ ಜಾರಿಗೆ ತರುತ್ತಲೇ ಇರುತ್ತದೆ. ಹಿಂದೆ ಹೆಣ್ಣು ಮಗು ಹುಟ್ಟಿದರೆ ಖರ್ಚು , ಮನೆಗೆ ಹೊರೆ ಎಂದು ಅಂದುಕೊಳ್ಳುತ್ತಿದ್ದ ಕಾಲ ಈಗ ಮರೆಯಾಗಿ ಹೆಣ್ಣು ಮಗು ಭಾಗ್ಯಲಕ್ಷ್ಮೀ ಸ್ಥಾನ ಪಡೆದಿದ್ದಾಳೆ. ಹೆಣ್ಣು ಮಗು ಹುಟ್ಟುವುದರಿಂದ ಕೊನೆ ತನಕ ಕೂಡ ಅನೇಕ ಯೋಜನೆ ಅಡಿಯಲ್ಲಿ ಸೌಲಭ್ಯ ಸಿಗುತ್ತಲೇ ಇರುತ್ತದೆ ಎಂದು ಹೇಳಬಹುದು. ಹಾಗಾಗಿ ಮಹಿಳೆಯರು ಈಗ ಎಲ್ಲ ಕ್ಷೇತ್ರದಲ್ಲಿಯೂ ತಮ್ಮ ಸಾಮರ್ಥ್ಯ ತೋರ್ಪಡಿಸುವ ಕಾಲ ಬಂದಿದೆ ಎನ್ನಬಹುದು.
ಸರ್ಕಾರದ ಬೆಂಬಲ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲ ಕ್ಷೇತ್ರದಲ್ಲಿ ಮಹಿಳೆಯರಿಗೆ ವಿನಾಯಿತಿ ನೀಡುತ್ತಿವೆ. ಉಚಿತ ಯೋಜನೆ ಮಾತ್ರವಲ್ಲದೆ ಮೀಸಲಾತಿ, ರಿಯಾಯಿತಿ ಅನೇಕ ವಿಧವಾದ ಸೌಲಭ್ಯವನ್ನು ಸಹ ನೀಡುತ್ತಲೇ ಇವೆ ಹಾಗಾಗಿ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಇದೊಂದು ಪರ್ವಕಾಲ ಎಂಬಂತಾಗಿದೆ. ಇಂದು ಸ್ವ ಉದ್ಯಮ ಮಾಡುತ್ತೇವೆ ಎಂಬವರಿಗೆ ಕೂಡ ಕಡಿಮೆ ಬಡ್ಡಿದರದ ಸಬ್ಸಿಡಿ ಸಹಿತ ಸಾಲ ಸೌಲಭ್ಯ ನೀಡುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರವು ಕೂಡ ಮಹಿಳೆಯರ ಸ್ವ ಉದ್ಯಮಕ್ಕೆ ಬಹಳ ಬೆಂಬಲ ನೀಡುತ್ತಲಿವೆ ಎನ್ನಬಹುದು.
ಮೋದಿ ಸರ್ಕಾರದಿಂದ ಹೊಸ ಯೋಜನೆ
ಕೇಂದ್ರದ ಬಿಜೆಪಿ ಸರ್ಕಾರದಿಂದ ಲಕ್ ಪತಿ ದೀದಿ ಯೋಜನೆ ಜಾರಿಗೆ ತಂದಿದ್ದು, ಇದು ಅನೇಕ ಮಹಿಳೆಯರಿಗೆ ಬಹಳ ಸಹಕಾರಿ ಆಗಿದೆ. ಮಹಿಳೆಯರನ್ನು ಉದ್ಯಮಶೀಲರನ್ನಾಗಿ ಮಾಡುವ ಜೊತೆಗೆ ಆರ್ಥಿಕ ಸಬಲೀಕರಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದಾಗಿ ಈ ಲಕ್ ಪತಿ ದೀದಿ ಯೋಜನೆ ಹುಟ್ಟಿಕೊಂಡಿದೆ. ಕೇಂದ್ರ ಸರ್ಕಾರವು ಈ ಒಂದು ಯೋಜನೆಯ ಅಡಿಯಲ್ಲಿ 5ಲಕ್ಷ ರೂಪಾಯಿ ಸಾಲ ಸೌಲಭ್ಯ ನೀಡಲಿದ್ದು, ದೇಶಾದ್ಯಂತ ಹಳ್ಳಿ ಹಳ್ಳಿಯಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಿ ಮಹಿಳೆಯರನ್ನು ಸ್ವ ಉದ್ಯಮ ಕ್ಷೇತ್ರದಲ್ಲಿ ತೊಡಗಿಕೊಳ್ಳುವಂತೆ ಮಾಡಲಾಗುವುದು.
ಈ ಯೋಜನೆಯ ಅಡಿಯಲ್ಲಿ ಸ್ವಸಹಾಯ ಗುಂಪುಗಳ ಪಾಲುದಾರಿಕೆ ಕೂಡ ಮುಖ್ಯವಾಗಿದ್ದು ಹೊಸ ವಿಚಾರ, ಮಾರುಕಟ್ಟೆ, ವಸ್ತುಗಳ ತಯಾರಿ, ಮಾರಾಟ ಎಲ್ಲ ವಿಚಾರ ಕಲಿಯಲು ಕೂಡ ಅವಕಾಶ ನೀಡಲಾಗುವುದು. ಲಕ್ ಪತಿ ದೀದಿ ಯೋಜನೆ ಅಡಿಯಲ್ಲಿ ಸೌಲಭ್ಯ , ಸೌಕರ್ಯ ಪಡೆಯಲು ನಿಮ್ಮ ಬಳಿ ಆಧಾರ್ ಕಾರ್ಡ್, ರೇಶನ್ ಕಾರ್ಡ್, ಸ್ಥಳ ಪುರಾವೆ, ಬ್ಯಾಂಕ್ ಖಾತೆಯ ವಿವರ, ವಿಳಾಸ ಪುರಾವೆ,ಮೊಬೈಲ್ ಸಂಖ್ಯೆ ಎಲ್ಲವೂ ಅಗತ್ಯವಾಗಿ ನೀಡಬೇಕು.
ಬಡ್ಡಿ ರಹಿತ ಸಾಲ
ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಮಹಿಳೆಯರ ಸ್ವ ಉದ್ಯಮಕ್ಕೆ ನೀಡುವ ಸಾಲದಲ್ಲಿ ಕಡಿಮೆ ಬಡ್ಡಿದರ ಇರುವುದು ನಾವು ಕಾಣಬಹುದು. ಆದರೆ ಇಲ್ಲಿ 1 ಲಕ್ಷದಿಂದ 5ಲಕ್ಷದ ತನಕವೂ ಬಡ್ಡಿ ರಹಿತ ಸಾಲ ಸೌಲಭ್ಯ ಸಿಗಲಿದೆ. ಅದರ ಜೊತೆಗೆ ತಾವು ಮಾಡಬೇಕು ಎಂಬ ಸ್ವ ಉದ್ಯಮಕ್ಕೆ ಉತ್ತಮ ಮಾರುಕಟ್ಟೆ ಬೆಂಬಲವನ್ನು ಸಹ ನೀಡಲಿದೆ. ತಂತ್ರಜ್ಞಾನದ ಬಳಕೆ, ಆಧುನಿಕ ಸೌಲಭ್ಯ, ಮಾರುಕಟ್ಟೆ ತಂತ್ರ ಎಲ್ಲದರ ಅರಿವು ಮೂಡಿಸಿ ಸ್ವ ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರನ್ನು ತಯಾರು ಮಾಡಲಾಗುವುದು. ಹಾಗಾಗಿ ಲಕ್ ಪತಿ ದೀದಿ ಯೋಜನೆ ದೇಶದಲ್ಲಿ ಮಹತ್ವದ ಸ್ಥಾನ ಪಡೆಯಲಿದೆ ಎನ್ಮಬಹುದು.
