
ಭಾರತದಲ್ಲಿ ಶಿಸ್ತುಬದ್ಧ ಆರ್ಥಿಕ ವ್ಯವಸ್ಥೆ ಜಾರಿಯಾಗುವ ನೆಲೆಯಲ್ಲಿ ಜಿಎಸ್ ಟಿ ಯನ್ನು ಈಗಾಗಲೇ ಜಾರಿಗೆ ತಂದಿದ್ದು, ಇಂದು ನಾವು ಖರೀದಿ ಮಾಡುವ ವಸ್ತುಗಳ ಮೇಲೆ ಕೇಂದ್ರ ತೆರಿಗೆಯನ್ನು ನಾವು ಮುಕ್ತವಾಗಿ ತಿಳಿಯಲು ಈ ವ್ಯವಸ್ಥೆ ಸಹಕಾರಿ ಆಗಿದೆ. ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿ ವಿಸ್ತರಿಸಲು ಈ ಹಿಂದಿನಿಂದ ಕೂಡ ಚಿಂತನೆ ನಡೆಸಲಾಗಿದ್ದು, ಈ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಪಷ್ಟೀಕರಿಸಿದ್ದಾರೆ.
ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರುಈ ಒಂದು ಜಿಎಸ್ ಟಿ ಬಗ್ಗೆ ಈ ಹಿಂದೆಯೇ ಮಾಧ್ಯಮದ ಮುಂದೆ ಮಾಹಿತಿ ನೀಡಿದ್ದರು. ಈಗ ಉಂಟಾದ ಗೊಂದಲಕ್ಕೆ ಸೂಕ್ತ ಉತ್ತರ ದೊರೆತಿದೆ. ಈ ಬಗ್ಗೆ ಮಾಹಿತಿ ನೀಡಿದ್ದ ಅವರು ಇನ್ನು ಕೆಲವೇ ದಿನದಲ್ಲಿ ಎಲ್ಲ ರಾಜ್ಯದ ಎಲ್ಲ ಉದ್ದಿಮೆಗಳಿಗೂ ಸರಕು ಮತ್ತು ಸೇವಾ ತೆರಿಗೆ ಬರಲಿದೆ ಎಂದು ಅವರು ಗುಜರಾತ್ ನಲ್ಲಿ ಏರ್ಪಡಿಸಿದ್ದ 12 ಜಿಎಸ್ ಟಿ ಸುವಿಧಾ ಕಾರ್ಯಕ್ರಮದ ಉದ್ಘಾಟನೆ ವೇಳೆ ಮಾತಾಡಿದ್ದಾರೆ.
ಜಿಎಸ್ ಟಿ ಸಂಗ್ರಹ ಹಿಂದಿಗಿಂತ ಈಗ ವ್ಯವಸ್ಥೆ ಸುಗಮವಾಗಿದೆ. ಸರಕು ಮತ್ತು ಸೇವಾ ತೆರಿಗೆಯಿಂದ ಬಂದ ಹಣ ಸಂಗ್ರಹ ಪ್ರಮಾಣ ಅಧಿಕವಾಗಿದೆ. ಪ್ರತೀ ವರ್ಷದಿಂದ ಕೂಡ ಸಂಗ್ರಹ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಾ ಇದೆ. ಇದು ಜನರಿಗೆ ಹೆಚ್ಚು ಉಪಯುಕ್ತ ಆಗಿದ್ದು, ತೆರಿಗೆ ದರ ಈ ಹಿಂದಿಗಿಂತ ಕಡಿಮೆ ಆಗಿದೆ ಎಂದು ಹೇಳಬಹುದು. ಆದರೆ ಕೆಲ ಪ್ರಖ್ಯಾತ ಉದ್ಯಮ ಸಂಸ್ಥೆಗಳು ಜಿಎಸ್ ಟಿಯಿಂದ ಹೊರಗೆ ಉಳಿದಿದ್ದು, ಇದು ಆರ್ಥಿಕ ವ್ಯವಸ್ಥೆ ಸುಗಮತೆಗೆ ತೊಂದರೆ ಆಗುವ ಕಾರಣ ಎಲ್ಲ ಉದ್ಯಮವನ್ನು ಸಹ ಜಿಎಸ್ ವ್ಯಾಪ್ತಿಗೆ ಶೀಘ್ರ ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.
ಜಿಎಸ್ ಟಿ ದೇಶದ ಆರ್ಥಿಕ ವ್ಯವಹಾರಗಳಿಗೆ ನಿಲುವು ಗನ್ನಡಿಯಂತಿದ್ದು ಪಾರದರ್ಶಕ ವ್ಯವಸ್ಥೆಗೆ ಇದು ಸಹಕಾರಿ. ಇಂದು ಜಿಎಸ್ ಟಿ ತೆರಿಗೆ ಅನೇಕ ವ್ಯವಹಾರಗಳಿಗೆ ವಿಧಿಸಲಾಗುತ್ತಿದೆ. ಈ ಮೂಲಕ ತೆರಿಗೆ ಮೂಲಕ ಆದಾಯ ಹೆಚ್ಚಿಸುವುದು ಮಾತ್ರ ಹಣಕಾಸು ಸಚಿವಾಲಯದ ಉದ್ದೇಶ ಆಗಿರದೇ ಪ್ರತೀ ಉದ್ಯಮವನ್ನು ಸಹ ಜಿಎಸ್ ಟಿ ವ್ಯಾಪ್ತಿ ಒಳಗೆ ತರಬೇಕು ಎಂಬ ಧೋರಣೆ ಇದೆ. ಇನ್ನು ಮುಂದೆ ಈ ವ್ಯವಸ್ಥೆ ಇನ್ನಷ್ಟು ಸರಳವಾಗಲಿದೆ ಎಂದು ಅವರು ಹೇಳಿದರು.
ಒಟ್ಟಾರೆಯಾಗಿ ಸರಕು ಮತ್ತು ಸೇವಾ ತೆರಿಗೆಯು ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಬಳಿಕ ಅದರ ಫೇಮಸ್ ಪರಿಕಲ್ಪನೆ ಹೆಚ್ಚಾಗಿದೆ. ಹಾಗಾಗಿ ವಿತ್ತ ಸಚಿವರ ಈ ಒಂದು ಧೋರಣೆ ಸಾಕಷ್ಟು ಉದ್ಯಮ ಕ್ಷೇತ್ರಕ್ಕೆ ತೆರಿಗೆ ವಿನಾಯಿತಿ ಮತ್ತು ಹೊಸದಾಗಿ ವಿಧಿಸಲು ಸಹ ನೆರವಾಗಲಿದ್ದು ಆಡಳಿತ ಸುಗಮವಾಗಲಿದೆ ಎಂದು ಈ ಮೂಲಕ ಹೇಳಬಹುದು.
