Home ರಾಜ್ಯ ಸರಕಾರ ಎಸ್‌ಎಸ್‌ಪಿ ವಿದ್ಯಾರ್ಥಿ ವೇತನ ಬಂದಿಲ್ಲ ಎಂದು ಕಾಯುತ್ತಿರುವವರಿಗೆ ಇಲ್ಲಿದೆ ಮಹತ್ವದ ಸುದ್ದಿ

ಎಸ್‌ಎಸ್‌ಪಿ ವಿದ್ಯಾರ್ಥಿ ವೇತನ ಬಂದಿಲ್ಲ ಎಂದು ಕಾಯುತ್ತಿರುವವರಿಗೆ ಇಲ್ಲಿದೆ ಮಹತ್ವದ ಸುದ್ದಿ

ಶಿಕ್ಷಣ ಪ್ರತಿ ಮಗುವಿನ ಹಕ್ಕು ಎನ್ನಬಹುದು. ಸಾರ್ವತ್ರಿಕ ಶಿಕ್ಷಣ ನೀತಿ ನಿಯಮ ಜಾರಿ ಇರುವ ಹಿನ್ನೆಲೆಯಲ್ಲಿ ಇಂದು ಎಲ್ಲ ಪೋಷಕರು ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಲೇಬೇಕಾಗಿದೆ. ಮಕ್ಕಳಿಗೆ ಕಲಿಕೆಯ ವಿಚಾರಕ್ಕೆ ಬೆಂಬಲಿಸುವ ಸಲುವಾಗಿ ರಾಜ್ಯದಲ್ಲಿ ಸರ್ಕಾರವು ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯ ಚಟುವಟಿಕೆಗೆ ಬೆಂಬಲಿಸುವ ಸಲುವಾಗಿ ವಿದ್ಯಾರ್ಥಿ ವೇತನ ನೀಡಲು ಮುಂದಾಗಿದೆ. ಈ ಯೋಜನೆಗೆ ಎಸ್‌ಎಸ್‌ಪಿ ಎಂದು ಹೆಸರಿಸಲಾಗಿದ್ದು ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ ಎನ್ನುವುದು ಇದರ ವಿಸ್ತ್ರತ ರೂಪವಾಗಿದೆ.

ಯಾರಿಗೆ ಅನುಕೂಲ?
ಈ ಒಂದು ವಿದ್ಯಾರ್ಥಿ ವೇತನವು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾಭ್ಯಾಸಕ್ಕೆ ಬಹಳ ಸಹಕಾರಿ ಆಗಲಿದೆ. ಆರ್ಥಿಕವಾಗಿ ಶಕ್ತರಲ್ಲದವರಿಗೆ ಶೈಕ್ಷಣಿಕ ಪರಿಕರ ಮತ್ತು ಅಗತ್ಯತೆ ಕೊಂಡುಕೊಳ್ಳಲು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಈ ಯೋಜನೆ ಬಹಳ ಸಹಕಾರಿ ಆಗಲಿದೆ ಎನ್ನಬಹುದು. ಇದರ ಮೂಲಕ ಆರ್ಥಿಕ ಸಹಾಯ ಧನ ಪಡೆಯಲು ವಿದ್ಯಾರ್ಥಿಗಳು ಎಸ್‌ಎಸ್‌ಪಿ ಪೋರ್ಟಲ್ ಮೂಲಕ ವೆಬ್‌ಸೈಟ್‌ನಲ್ಲಿ ಭೇಟಿ ನೀಡಿ ಅರ್ಜಿ ಸಲ್ಲಿಸಿದರೆ ಅರ್ಹರಿಗೆ ವಿದ್ಯಾರ್ಥಿ ವೇತನ ಸಿಗಲಿದೆ.

ಈ ಒಂದು ಎಸ್‌ಎಸ್‌ಪಿ ಯೋಜನೆಯನ್ನು ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಒಬಿಸಿ ಹಾಗೂ ಇತರ ಆರ್ಥಿಕವಾಗಿ ಹಿಂದುಳಿದವರಿಗಾಗಿ ಮೀಸಲಿರಿಸಲಾಗಿದೆ. ಇದರಲ್ಲಿ ವ್ಯಾಸಂಗ ನಿಲ್ಲಿಸಿದ್ದವರಿಗೆ ವಿದ್ಯಾರ್ಥಿ ವೇತನ ಸಿಗಲಾರದು. ಅರ್ಜಿ ಸಲ್ಲಿಸುವಾಗ ವಿದ್ಯಾಭ್ಯಾಸ ಮಾಡುತ್ತಿರಬೇಕು. ಅರ್ಜಿ ದಾರರ ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂಪಾಯಿ ಮೀರಬಾರದು. ಬಾಲಕಿಯರಿಗೆ 30% ಮೀಸಲಾತಿ ನೀಡಲಾಗುವುದು. ಕರ್ನಾಟಕದ ನಿವಾಸಿ ಆಗಿದ್ದು ಸಾಮಾನ್ಯ ಮತ್ತು ಬಡವರ್ಗಕ್ಕೆ ಸೇರಿದವರಿಗೆ ಆದ್ಯತೆ ಸಿಗಲಿದೆ.

ಇಲ್ಲಿ ಅರ್ಜಿ ಸಲ್ಲಿಸಿ
ಈ ಒಂದು ಎಸ್‌ಎಸ್‌ಪಿ ಸ್ಕಾಲರ್ ಶಿಪ್ ಪಡೆಯಬೇಕು ಎಂದು ಅರ್ಜಿ ಹಾಕುವವರು ಹಾಗೂ ಹಿಂದಿನ ಸಲ ಅರ್ಜಿ ಹಾಕಿದ್ದವರು ಹಣ ಬಂದಿದೆ ಅಥವಾ ಇಲ್ಲ ಎಂದು ತಿಳಿಯಲು SSP.Karnataka.gov.in ವೆಬ್‌ಸೈಟ್‌ನಲ್ಲಿ ಭೇಟಿ ನೀಡಿ. ಲಾಗಿನ್ ಆದ ಬಳಿಕ ನಿಮ್ಮ ಆಧಾರ್ ಸಂಖ್ಯೆ ಕೇಳಲಿದೆ ಹಾಗೇ ಪೋಷಕರ ಆಧಾರ್ ಕಾರ್ಡ್ ಸಂಖ್ಯೆ ಕೂಡ ಕೇಳಲಿದೆ. ಹೀಗೆ ಎಲ್ಲ ಮಾಹಿತಿ ಫಿಲಪ್ ಮಾಡಿದ್ದ ಬಳಿಕ ಬಳಕೆದಾರರಿಗೆ ID ಹಾಗೂ ಪಾಸ್ ವರ್ಡ್ ಅನ್ನು ಅವರ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವುದು.

ಸ್ಕಾಲರ್ ಶಿಪ್ ಯಾವಾಗ ಬರುತ್ತೆ?
ಬಹುತೇಕರಿಗೆ ಈ ಹಣ ಬಂದಿದೆ. ಇನ್ನು ಕೆಲವರಿಗೆ ಹಣ ಡೆಬಿಟ್ ಶೀಘ್ರ ಆಗುತ್ತದೆ ಎಂದು ಮೆಸೇಜ್ ಬಂದಿದ್ದರೂ ಹಣ ಮಾತ್ರ ಬಂದಿರುವುದಿಲ್ಲ ಅಂತಹ ಸಂದರ್ಭದಲ್ಲಿ ನೀವು ಕಳೆದ ಒಂದು ವರ್ಷದ ಲ್ಲಿ ಹಾಕಿದ್ದ ಅರ್ಜಿ ಸ್ಕಾಲರ್ ಶಿಪ್ ಬರುವ ಸಾಧ್ಯತೆ ಇದೆ‌. ಅದಕ್ಕೂ ಹಿಂದೆ ಹಾಕಿದ್ದ ಅರ್ಜಿ ವಿದ್ಯಾರ್ಥಿ ವೇತನ ಬರುವುದು ಅನುಮಾನ ಎನ್ನಬಹುದು. 3 ವರ್ಷಕ್ಕಿಂತ ಹೆಚ್ಚು ಸಮಯವಾಗಿದ್ದರೆ ಆ ಮೊತ್ತ ಬರುವುದು ಅನುಮಾನವಾಗಿದೆ. ಈಗಾಗಲೇ ರಾಜ್ಯಾದ್ಯಂತ ಎಲ್ಲ ಜಿಲ್ಲೆಯಲ್ಲಿ ಹಂತ ಹಂತವಾಗಿ ಎಸ್‌ಎಸ್‌ಪಿ ವಿದ್ಯಾರ್ಥಿ ವೇತನ ಬರಲು ಆರಂಭ ಆಗಿದೆ. ಹಾಗಾಗಿ ಕಳೆದ ಎರಡು ವರ್ಷದ ಒಟ್ಟು ಮೊತ್ತ ಒಮ್ಮೆಗೆ ಬರುವ ಸಾಧ್ಯತೆ ಇದೆ ಎನ್ನಬಹುದು.

 
Previous articleಉದರ ಸಂಬಂಧಿ ಸಮಸ್ಯೆಯಿಂದ ದೂರ ಇರಲು ಬೆಳಿಗ್ಗೆ ಎದ್ದಾಕ್ಷಣ ಬೆಚ್ಚಗಿನ ನೀರು ಕುಡಿಯಿರಿ
Next articleಜುಲೈ 9 ರವರೆಗೆ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ