ರೈತರು ಈ ದೇಶದ ಮುಖ್ಯ ಭಾಗವಾಗಿದ್ದು ರೈತರ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ರೀತಿಯ ಯೋಜನೆಯನ್ನು ರೂಪಿಸುತ್ತಾ ಬಂದಿದೆ. ಈ ಭಾರಿ ಬರಗಾಲದಿಂದ ಬೆಳೆ ಹಾನಿಯಾಗಿದ್ದು, ಇಂತಹ ಸಂದರ್ಭದಲ್ಲಿ ರೈತರ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರ ಹಲವು ಹೊಸ ಹೊಸ ಯೋಜನೆಗಳನ್ನು ತರುತ್ತಿದ್ದು, ಅದರಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಕೂಡ ಮಹತ್ವದ ಯೋಜನೆಯಾಗಿದೆ.
ಸಾಲ ಪಡೆಯಬಹುದು
ರೈತರು ತಮ್ಮ ಹೊಲಗಳಿಗೆ ಬಿತ್ತನೆ ಮಾಡಲು, ಬೆಳೆ ಪೋಷಣೆ, ಬೆಳೆಗಳಿಗೆ ರಸಗೊಬ್ಬರ ಹಾಕಲು ಮುಂತಾದ ಕೃಷಿ ಚಟುವಟಿಕೆಗಳಿಗೆ ಸಾಲ ಪಡೆಯಲು ಕಿಸಾನ್ ಕ್ರೆಡಿಟ್ ಕಾರ್ಡ್ ಉಪಯೋಗ ಮಾಡಬಹುದು. ಈ ಯೋಜನೆಯಡಿ ರೈತರು ಯಾವುದೇ ಅಡಮಾನ ಇಲ್ಲದೆ ಸಾಲ ಪಡೆಯಬಹುದು.
ಎಷ್ಟು ಸಾಲ ಸಿಗಲಿದೆ?
ಕೇಂದ್ರ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ರೈತರ ಅಭಿವೃದ್ಧಿಗಾಗಿ ಜಾರಿಗೆ ತಂದಿದ್ದು, ಈ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಪಿಎಂ ಕಿಸಾನ್ ಯೋಜನೆಗೆ ಲಿಂಕ್ ಮಾಡಿದ ನಂತರ, ರೈತರು 4% ಬಡ್ಡಿಯಲ್ಲಿ 3 ಲಕ್ಷದವರೆಗೆ ಸಾಲ ಪಡೆಯಬಹುದು. ಈ ಯೋಜನೆಯಡಿ ಅರ್ಜಿ ಸಲ್ಲಿಸಿದ ಕೇವಲ 15 ದಿನಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗುವುದು.
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಹತೆ
ರೈತರು ಭಾರತೀಯ ಪ್ರಜೆಯಾಗಿರಬೇಕು. ಜಮೀನು ಹೊಂದಿರಬೇಕು. ಬೇರೆಯವರ ಜಮೀನಿನಲ್ಲಿ ಸಾಗುವಳಿ ಮಾಡುವ ವ್ಯಕ್ತಿಯೂ ಈ ಕಾರ್ಡ್ ಮಾಡಿಸಿಕೊಳ್ಳಬಹುದು. ಈ ಕಾರ್ಡ್ ಪಡೆಯಲು, ಅರ್ಜಿದಾರರ ವಯಸ್ಸು 18 ವರ್ಷದಿಂದ 75 ವರ್ಷಗಳ ನಡುವೆ ಇರಬೇಕು.
ಈ ದಾಖಲೆ ಬೇಕು
ಜಮೀನಿನ ದಾಖಲೆಗಳನ್ನು ಹೊಂದಿರಬೇಕು. ಅರ್ಜಿದಾರರ ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ
ಜಮೀನಿನ ಆರ್‌ಟಿಸಿ ಪ್ರತಿ, ಅರ್ಜಿದಾರರ ಪ್ಯಾನ್ ಕಾರ್ಡ್, ಅರ್ಜಿದಾರರ ಮೊಬೈಲ್ ಸಂಖ್ಯೆ ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಅರ್ಜಿದಾರರ ಬ್ಯಾಂಕ್ ಖಾತೆ ಪುಸ್ತಕ ಇತ್ಯಾದಿ
ಈ ಯೋಜನೆ ಗೆ ಅರ್ಜಿ ಹಾಕಲು https://pmkisan.gov.in ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಥವಾ PM ಕಿಸಾನ್ ವೆಬ್‌ಸೈಟ್‌ಗೆ ಹೋಗಿ ಅರ್ಜಿ ಹಾಕಿ.
