ಇತ್ತೀಚಿನ ದಿನದಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿದೆ. ಈ ಭಾರಿ ವಿದ್ಯುತ್ ಉತ್ಪಾದನೆಯು ಕಡಿಮೆಯಾಗಿದೆ. ಆದರೆ ಬಳಕೆ ಮಾಡುವ ಸಂಖ್ಯೆ ಅತೀ ಆಗಿದೆ. ಇದಕ್ಕಾಗಿ ಸರ್ಕಾರ ಸೋಲಾರ್ ಅಳವಡಿಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದೆ. ಇದರಿಂದ ವಿದ್ಯುತ್ ಬಳಕೆ ಕಡಿಮೆಯು ಸಹ ಆಗಲಿದೆ. ಸೋಲಾರ್ ಎಂಬುದು ನೈಸರ್ಗಿಕ ಕ್ರಮವಾಗಿದ್ದು ಇಂದು ಸೋಲಾರ್ ಅಳವಡಿಕೆ ಮಾಡಲು ಸರ್ಕಾರದಿಂದ ಅಪಾರ ಪ್ರಮಾಣದಲ್ಲಿ ಸಹಾಯಧನ ಕೂಡ ನೀಡಲಾಗುತ್ತಿದೆ.
ಸಬ್ಸಿಡಿ ಹಣ
ಕೇಂದ್ರ ಸರ್ಕಾರದ ಸೌರಗೃಹ ಯೋಜನೆಯಡಿ ಮನೆಯ ಮೇಲ್ಛಾವಣಿ ಮೇಲೆ ಸೌರ ಫಲಕ ಅಳವಡಿಸಲು ಸಬ್ಸಿಡಿ ಸಿಗಲಿದೆ. ಇದರಿಂದ ವಿದ್ಯುತ್ ಬಳಕೆ ಕಡಿಮೆ ಮಾಡಬಹುದು.
ಹೇಗೆ ಅಳವಡಿಸಬೇಕು?
ಮನೆಯ ಮೇಲ್ಛಾವಣಿ ಮೇಲೆ ಸೋಲಾರ್ ಘಟಕ ನಿರ್ಮಾಣ ಮಾಡಬೇಕು. ಮನೆಯ ಟೆರೇಸ್ ಮೇಲೆ ಸೋಲಾರ್ ಅಳವಡಿಸುವ ಮೂಲಕ ಶೇ. 30 ರಿಂದ 50 ರಷ್ಟು ವಿದ್ಯುತ್ ವೆಚ್ಚ ಕೂಡ ಉಳಿತಾಯ ಮಾಡಬಹುದು. ನೀವು ಸೋಲಾರ್ ಬಳಕೆ ಮಾಡಲು ಸೌರ ಫಲಕ ಅಳವಡಿಕೆ ಮಾಡಲು ಬ್ಯಾಂಕುಗಳು ಕೂಡ ಇಂದು ಸಾಲ ಸೌಲಭ್ಯ ನೀಡಲಿದೆ.
ಎಷ್ಟು ಸಬ್ಸಿಡಿ ಸಿಗಲಿದೆ
ಕೇಂದ್ರ ಸರ್ಕಾರದ ವತಿಯಿಂದ ಸೌರಗೃಹ ಯೋಜನೆಯಡಿ ಮನೆಯ ಮೇಲ್ಛಾವಣಿ ಮೇಲೆ ಸೌರ ಫಲಕ ಅಳವಡಿಕೆ ಮಾಡಲು ಕೂಡ ಶೇ. 40 ರಷ್ಟು ಸಬ್ಸಿಡಿ ಸಿಗಲಿದೆ. ಇದರಿಂದ ವಿದ್ಯುತ್ ಬಿಲ್ ಉಳಿತಾಯವಾಗುತ್ತದೆ. ಸೌರ ಫಲಕಗಳು ಕನಿಷ್ಠ 25 ವರ್ಷಗಳವರೆಗೆ ಹಾಳಾಗುವುದಿಲ್ಲ. ಹೆಚ್ಚು ಸಮಯದವರೆಗೆ ಬಾಳಿಕೆ ಬರಲಿದೆ. ಹಾಗಾಗಿ ಸೌರ ಫಲಕಗಳಿಗೆ ಹೂಡಿಕೆ ಮಾಡಿದರೆ, ಅದರ ನಾಲ್ಕು ಪಟ್ಟು ಆದಾಯ ಕೂಡ ಪಡೆಯಬಹುದು. ಒಂದು ಕಿಲೋ ವ್ಯಾಟ್ ಸಾಮರ್ಥ್ಯದ ಘಟಕಕ್ಕೆ 50 ರಿಂದ 60 ಸಾವಿರ ರೂಪಾಯಿಯವರೆಗೆ ಖರ್ಚು ಇರಲಿದ್ದು, ಇದಕ್ಕೆ 20 ರಿಂದ 22 ಸಾವಿರ ರೂಪಾಯಿ ಅಂದರೆ ಶೇ. 40 ರಷ್ಟು ಸಬ್ಸಿಡಿ ಸಿಗಲಿದೆ. ಇದೇ ಸಬ್ಸಿಡಿಯು ಮೂರು ಕಿಲೋ ವ್ಯಾಟ್ ವರೆಗೂ ಸಿಗಲಿದ್ದು 10 ಕಿಲೋ ವ್ಯಾಟ್ ಘಟಕ ಸ್ಥಾಪಿಸಿದರೆ 3 ಕಿಲೋ ವ್ಯಾಟ್ ವರೆಗೂ ಶೇ. 40 ರಷ್ಟು ಸಬ್ಸಿಡಿ ಹಾಗೂ ನಂತರದ ಏಳು ಕಿಲೋ ವ್ಯಾಟ್ ವರೆಗೆ ಶೇ. 20 ರಷ್ಟು ಸಬ್ಸಿಡಿ ಸಿಗಲಿದೆ.
ಅರ್ಜಿ ಹಾಕಿ
ಮೇಲ್ಛಾವಣಿಗೆ ಸೌರ ಫಲಕಗಳನ್ನು ಅಳವಡಿಸಲು ಪ್ರಾದೇಶಿಕ ವಿದ್ಯುತ್ ವಿತರಣ ಕಂಪನಿಗಳು (ಡಿಸ್ಕಾಂ) ಅಥವಾ ವಿದ್ಯುತ್ ಕಚೇರಿಗಳನ್ನು ಸಂಪರ್ಕಿಸುವ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ. portal.mpcz.in ಗೆ ಭೇಟಿ ನೀಡಿ ಅಥವಾ ಟೋಲ್ ಫ್ರೀ ಸಂಖ್ಯೆ 1912 ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
