Home ಕೇಂದ್ರ ಸರಕಾರ ಪಿಎಂ ಆವಾಸ್ ಯೋಜನೆ ಅರ್ಜಿ ಪ್ರಾರಂಭ, ನೀವು ‌ಅರ್ಜಿ ಸಲ್ಲಿಕೆ ‌ಮಾಡಬಹುದು

ಪಿಎಂ ಆವಾಸ್ ಯೋಜನೆ ಅರ್ಜಿ ಪ್ರಾರಂಭ, ನೀವು ‌ಅರ್ಜಿ ಸಲ್ಲಿಕೆ ‌ಮಾಡಬಹುದು

ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ಮಾಡಿದ್ದು, ಬಡ ವರ್ಗದ ಜನತೆಗೆ ಈ ಯೋಜನೆ ಬಹಳಷ್ಟು ನೆರವಾಗುತ್ತಿದೆ. ಹಿಂದುಳಿದ ವರ್ಗ ಹಾಗೂ ಬಡ ಕುಟುಂಬಗಳಿಗೆ ಮತ್ತು ಅಲ್ಪಸಂಖ್ಯಾತರು ಹಾಗೂ ಆರ್ಥಿಕವಾಗಿ ಹಿಂದುಳಿದ ಅವರಿಗೆ‌ ವಾಸ ಮಾಡಲು ಮನೆ ಇಲ್ಲದಿದ್ದರೆ ಈ ಯೋಜನೆಯ ಪ್ರಯೋಜನ ಪಡೆಯಬಹುದು.

ಸಬ್ಸಿಡಿ ಸಿಗಲಿದೆ
ಈ ಯೋಜನೆಯ ಮೂಲಕ ಆರ್ಥಿಕ ಸಹಾಯದೊಂದಿಗೆ ಕಡಿಮೆ ಬಡ್ಡಿ ದರದಲ್ಲಿ ಮನೆ ಕಟ್ಟಿಸಿಕೊಳ್ಳಲು ಸಾಲವನ್ನು ಕೂಡ ಒದಗಿಸಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಅರ್ಜಿ ಸಲ್ಲಿಸಿದಂತ ಅರ್ಜಿದಾರರಿಗೆ ಈ ಯೋಜನೆ ಮೂಲಕ 1,50,000 ರಿಂದ 1,70,000 ರೂಪಾಯಿವರೆಗೆ ಮನೆ ಕಟ್ಟಿಸಿಕೊಳ್ಳಲು ಸಹಾಯಧನ ಸಿಗಲಿದೆ.

ಮತ್ತಷ್ಟು ಅಭಿವೃದ್ಧಿ
ಇದೀಗ 3ನೇ ಬಾರಿಗೆ ಪ್ರಧಾನಿಯಾಗಿ ಮೊದಲ ಕ್ಯಾಬಿನೆಟ್ ಸಭೆ ನಡೆಸಿದ ಮೋದಿ ಈ ಯೋಜನೆಗೆ ಮತ್ತಷ್ಟು ಹುರುಪು ನೀಡಿದ್ದಾರೆ. ಹೆಚ್ಚುವರಿಯಾಗಿ 3 ಕೋಟಿ ಮನೆ ನಿರ್ಮಾಣದ ಗುರಿ ಹೊಂದಿದ್ದಾರೆ. ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಮನೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮತ್ತಷ್ಟು ಬೆಂಬಲ ನೀಡಿದೆ.

ಈ ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗ ಹಾಗೂ ಕಡಿಮೆ ಆದಾಯ ಹೊಂದಿರುವ ಕುಟುಂಬಕ್ಕೆ 6.50 ಬಡ್ಡಿ ದರದಲ್ಲಿ ಗರಿಷ್ಠ 6 ಲಕ್ಷ ರೂಪಾಯಿ ಸಬ್ಸಿಡಿ ಸಾಲ ದೊರೆಯಲಿದೆ. ಮಧ್ಯಮ ಆದಾಯ ವರ್ಗ 1ರ ಅಡಿಯಲ್ಲಿ ಶೇಕಡಾ 4 ರಷ್ಟು ಬಡ್ಡಿದರದಲ್ಲಿ ಗರಿಷ್ಠ 9 ಲಕ್ಷ ರೂಪಾಯಿವರೆಗೆ ಸಬ್ಸಿಡಿ ಸಾಲ ಸಿಗಲಿದೆ. ಇನ್ನು ಮಧ್ಯಮ ವರ್ಗ 2ರ ಅಡಿಯಲ್ಲಿ ಶೇಕಡ 3ರ ಬಡ್ಡಿದರದಲ್ಲಿ ಗರಿಷ್ಠ 12 ಲಕ್ಷ ರೂಪಾಯಿ ಸಬ್ಸಿಡಿ ಸಾಲ ಸೌಲಭ್ಯ ಸಿಗಲಿದ್ದು ಇಂದು ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ.

ಈ ದಾಖಲೆ ಕಡ್ಡಾಯ
ಆಧಾರ್ ಕಾರ್ಡ್
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ರೇಷನ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ಮೊಬೈಲ್ ನಂಬರ್

ಈ ಅರ್ಹತೆ ಬೇಕು
ಕುಟುಂಬದ ಆದಾಯ 18 ಲಕ್ಷ ರೂಪಾಯಿಗಿಂತ ಮೇಲಿದ್ದರೆ ಅರ್ಜಿ ಹಾಕುವಂತಿಲ್ಲ. ಅರ್ಜಿ ಸಲ್ಲಿಸುವ ವ್ಯಕ್ತಿ ಕರ್ನಾಟಕದಲ್ಲಿ ವಾಸಿಸಿರಬೇಕು. ಪಿಎಂ ಅವಾಸ್ ಯೋಜನೆಯಡಿ ಅರ್ಜಿ ಸಲ್ಲಿಸುವ ಕುಟುಂಬ ದೇಶದ ಯಾವುದೇ ಮೂಲೆಯಲ್ಲಿ ಸ್ವಂತ ಮನೆ ಹೊಂದಿರಬಾರದು.

ಇದಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸರ್ಕಾರದ ಅಧಿಕೃತ ವೆಬ್‌ಸೈಟ್ pmaymis.gov.in ಇಲ್ಲಿ ಅರ್ಜಿ ಹಾಕಬಹುದಾಗಿದೆ.

 
Previous articleಇಂದು ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ 17ನೇ ಕಂತಿನ ಹಣ ಬಿಡುಗಡೆ
Next articleಅಸಿಡಿಟಿ ಸಮಸ್ಯೆ ನಿಮ್ಮನ್ನ ಕಾಡ್ತಿದ್ರೆ ಈ ಅಭ್ಯಾಸವನ್ನು ಬದಲಿಸಿಕೊಳ್ಳಿ…!