ಕೇಂದ್ರ ಸರ್ಕಾರಗಳು ಈ ಹಿಂದಿನಿಂದಲೂ ರೈತಪರ ಕಾರ್ಯಕ್ರಮವನ್ನು ಪರಿಚಯಿಸುತ್ತಲೇ ಬಂದಿದೆ. ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವ ಜೊತೆಗೆ ಸಹಾಯಧನ ನೀಡಿ ಸಹ ನೆರವಾಗುತ್ತಿದೆ. ಇದರಿಂದಾಗಿ ರೈತರಿಗೂ ಕೃಷಿಯಲ್ಲಿ ತೊಡಗಿಕೊಳ್ಳಲು ಬೇಕಾದ ಆರ್ಥಿಕ ಸಹಕಾರ ಸರ್ಕಾರದಿಂದ ದೊರೆತಂತಾಗಿದೆ. ಅದೇ ರೀತಿ ಕೇಂದ್ರ ಸರ್ಕಾರದ ಅವಧಿಯಲ್ಲಿ ಪ್ರಧಾನ ಮಂತ್ರಿ ಕುಸುಮ್ ಯೋಜನೆ ಜಾರಿಗೆ ಬಂದಿದ್ದು, ಈ ಬಗ್ಗೆ ಅನೇಕರಿಗೆ ಪೂರ್ಣ ಮಾಹಿತಿ ತಿಳಿದಿಲ್ಲ. ಹಾಗಾಗಿ ಇಂದಿನ ಮಾಹಿತಿ ಅಂತವರಿಗೆ ಬಹಳ ಉಪಕಾರವಾಗಲಿದೆ.
ಯಾವಾಗ ಜಾರಿಗೆ ಬಂದಿದೆ?
ಪಿಎಂ ಕುಸುಮ್ ಯೋಜನೆಯನ್ನು ಕೇಂದ್ರ ಸರ್ಕಾರವು 2019ರಲ್ಲಿ ಜಾರಿಗೆ ತಂದಿದೆ. ಕೊರೊನಾ ಕಾಲಾವಧಿಯಲ್ಲಿ ಇದನ್ನು ಜಾರಿಗೆ ತರಲು ಕಷ್ಟವಾದ ಕಾರಣ ಈ ಯೋಜನೆ ಅವಧಿ ವಿಸ್ತರಣೆ ಮಾಡುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಮುಂದಾಯಿತು. ಇದರ ಮೂಲಕ ನೀರಾವರಿ ಸಮಸ್ಯೆ ಬಗೆಹರಿಸುವ ಮುಖ್ಯ ಉದ್ದೇಶ ಇದರಲ್ಲಿ ಇರುವುದನ್ನು ನಾವು ಕಾಣಬಹುದು. ಹಾಗಾಗಿ 2026ರ ಒಳಗೆ ರೈತರು ಈ ಯೋಜನೆಗೆ ನೋಂದಣಿ ಮಾಡಿಕೊಂಡರೆ ಸರ್ಕಾರದಿಂದ ನೀರಾವರಿ ಯೋಜನೆ ನಿಮಗೆ ಕೃಷಿ ಕಾರ್ಯಕ್ಕೆ ಸಹಕಾರಿ ಆಗಲಿದೆ.
ಈಗ ಕೂಡ ರೈತರು ಮಳೆ ನಂಬಿ ಕೃಷಿ ಮಾಡುತ್ತಿದ್ದಾರೆ. ಅದೇ ರೀತಿ ಪಂಪ್ ಸೆಟ್ ಬಳಸಿ ಸಹ ಕೃಷಿ ಮಾಡುತ್ತಿದ್ದಾರೆ. ಆದರೆ ವಿದ್ಯುತ್ ವೆಚ್ಚ ಇದರಿಂದಾಗಿ ಅಧಿಕ ಆಗಲಿದೆ ಹಾಗಾಗಿ ಪ್ರಧಾನ ಮಂತ್ರಿ ಕುಸುಮ್ ಯೋಜನೆ ಮೂಲಕ ಸೋಲಾರ್ ಅಳವಡಿಸಿ ಸೋಲಾರ್ ಚಾಲಿತ ಪಂಪ್ ಸೆಟ್ ಬಳಸಲು ಸಬ್ಸಿಡಿ ಸಿಗಲಿದೆ. ಹಾಗಾಗಿ ವಿದ್ಯುತ್ ಉಳಿತಾಯ ಆಗುವ ಜೊತೆಗೆ ರೈತರಿಗೆ ಲಾಭ ಆಗಲಿದೆ. ಹೆಚ್ಚುವರಿ ವಿದ್ಯುತ್ ಸಂಗ್ರಹ ಆದರೆ ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡಲು ಸಹ ಅವಕಾಶ ನೀಡಲಾಗುತ್ತದೆ.
ನೀವು ಈ ಯೋಜನೆ ಮಾಡಲು ನಿಮ್ಮ ಸೋಲಾರ್ ಪ್ಯಾನಲ್ ಹಾಕುವ ಜಾಗ ವಿದ್ಯುತ್ ಉಪಕೇಂದ್ರದಿಂದ 5km. ದೂರದಲ್ಲಿ ಇರಬೇಕು. ಸೋಲಾರ್ ಪ್ಯಾನಲ್ ಒಟ್ಟು ವೆಚ್ಚದಲ್ಲಿ 10% ನೀವು ಹೂಡಿಕೆ ಮಾಡಿದರೆ 30% ಕೇಂದ್ರ ಸರ್ಕಾರದಿಂದ ಸಬ್ಸಿಡಿ ಮತ್ತು 30% ರಾಜ್ಯ ಸರ್ಕಾರದಿಂದ ಸಬ್ಸಿಡಿ ಸಿಗಲಿದೆ. ಉಳಿದ ಮೊತ್ತವನ್ನು ರೈತರು ಬ್ಯಾಂಕಿನಿಂದ ಸಾಲ ಪಡೆಯಲು ಅನುಮತಿಸಲಾಗಿದೆ.
ವೆಚ್ಚ ಎಷ್ಟಾಗಲಿದೆ?
ನೀವು ಎಷ್ಟು ಮೇಗಾ ವ್ಯಾಟ್ ಸೋಲಾರ್ ಹಾಕಿಕೊಳ್ಳುತ್ತೀರಿ ಎಂಬುದು ಮುಖ್ಯ. 0.5 ಮೇಗಾ ವ್ಯಾಟ್ ಗೆ 2,500 ಆಗಲಿದೆ. 1MW ಗೆ 5,000+ GST ಇದೆ. 2MW 10,000+ GST ಇದೆ. ಈ ಯೋಜನೆ ರೈತರಿಗೆ, ಸಹಕಾರಿ ಸಂಘಕ್ಕೆ, ರೈತ ಉತ್ಪಾದನಾ ಕಂಪೆನಿ, ಪಂಚಾಯತ್, ನೀರಿನ ಗ್ರಾಹಕ ಸಂಘ ಈ ಯೋಜನೆಗೆ ಅರ್ಹರಾಗಿ ಸದುಪಯೋಗ ಪಡೆಯಬಹುದು.
ಈ ದಾಖಲೆ ಅಗತ್ಯ
ಆದಾಯ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ,ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ವಿಳಾಸ ಪುರಾವೆ, ನಿಮ್ಮ ಪಾಸ್ ಪೋರ್ಟ್ ಫೋಟೋ ಇರಬೇಕು. ಕುಸುಮ್ ಯೋಜನೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್ಲೈನ್ ನೋಂದಣಿ ಮಾಡಿಕೊಂಡ ಬಳಿಕ ಎಲ್ಲ ದಾಖಲಾತಿ ಅಪ್ಲೋಡ್ ಮಾಡಿರಿ. ಎಲ್ಲ ದಾಖಲಾತಿ ಪರಿಶೀಲನೆ ಮಾಡಿ ಅಪ್ಲೋಡ್ ಮಾಡಲು.
https://www.india.gov.in/ ಭೇಟಿ ನೀಡಿ ಅರ್ಜಿ ಹಾಕಬಹುದಾಗಿದೆ.
