
ಸರಕಾರದ ಕೃಷಿ ಅಥವಾ ಇತರ ಯೋಜನೆ ಬಗ್ಗೆ ಸಂದೇಶ ಸಂಶಯ ಇದ್ದಲ್ಲಿ ಅದನ್ನು ಕ್ಲಪ್ತ ಕಾಲಕ್ಕೆ ಬಗೆಹರಿಸಿ ಜನರಿಗೆ ನೆರವಾಗುವ ದೃಷ್ಟಿಯಿಂದ ಹುಟ್ಟಿಕೊಂಡ ಸಕಾಲ ಪರಿಕಲ್ಪನೆಯು ಕಾಲ ಕ್ರಮೇಣ ಬಳಕೆಯಾಗುತ್ತಿದೆ. ಅದಕ್ಕೆ ಮುಖ್ಯ ಕಾರಣ ಸಕಾಲ ಅವಧಿಯಲ್ಲಿ ಕೆಲ ಅರ್ಜಿಗಳು ತಿರಸ್ಕೃತವಾಗುತ್ತಿದ್ದು ಇದೀಗ ಈ ಸಂಬಂಧಿತ ಹೊಸ ನಿಯಮವೊಂದು ಜಾರಿಯಾಗಲಿದೆ.
ಮೆಸೇಜ್ ಬರಲಿದೆ
ಸಕಾಲ ಮಿಶನ್ ಹೆಚ್ಚು ಪ್ರಾಮುಖ್ಯತೆ ಪಡೆದ ಹಿನ್ನೆಲೆ ಅರ್ಜಿ ಸಲ್ಲಿಸುವವರ ಪ್ರಮಾಣ ಸಹ ಹೆಚ್ಷಾಗಿದೆ. ಸಕಾಲದಲ್ಲಿ ಜನರು ತಾವು ಸಲ್ಲಿಸಿದ್ದ ಅರ್ಜಿ ತಿರಸ್ಕೃತ ಆಗಿದ್ದರೆ ಆಗ ಮೊಬೈಲ್ ಗೆ ಈ ಬಗ್ಗೆ ಒಂದು ಮೆಸೇಜ್ ಬರಲಿದೆ. ಆ ಮೆಸೇಜ್ ಮೂಲಕ ಪ್ರಥಮ ಹಂತದ ಮೇಲ್ಮನವಿ ಕಳುಹಿಸಲು ವ್ಯವಸ್ಥೆ ಜಾರಿಗೆ ತರಲಾಗುವುದು. ಇದನ್ನು ಜನರು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಬಹಳ ಸುಲಭವಾಗಿ ಬಳಸಬಹುದಾಗಿದೆ. ಈ ಬಗ್ಗೆ ಕರ್ನಾಟಕ ಸರಕಾರ ಕೂಡ ಇಲಾಖೆ ಮುಖೇನ ಅಧಿಕೃತ ಮಾಹಿತಿಯನ್ನು ಸಹ ನೀಡಿದೆ.
ಯಾವಾಗಿಂದ ಬಂದಿದೆ?
ತಿರಸ್ಕೃತ ಆಗುವ ಅರ್ಜಿದಾರರಿಗೆ ಮೆಸೇಜ್ ಬರುವ ವ್ಯವಸ್ಥೆ ಸೆಪ್ಟೆಂಬರ್ ನಿಂದ ಜಾರಿಯಾಗಿದ್ದು ಇದು ಸಾಕಷ್ಟು ಜನರಿಗೆ ಅನುಕೂಲ ಆಗುವುದು. ಸಾರಿಗೆ ಇಲಾಖೆಯಲ್ಲಿ ಅರ್ಜಿ ಮಾಹಿತಿಯನ್ನು ಮ್ಯಾನುವಲ್ ನಿಂದ ಆಟೋ ಪುಶ್ ಆಗಿ ಬದಲಾಯಿಸಲಾಗುತ್ತಿದೆ. ಮೇಲ್ಮನವಿ ಸಲ್ಲಿಸಲು ವೆಬ್ಸೈಟ್ ಲಿಂಕ್ ಅನ್ನು ಸಕಾಲದಿಂದ ತಿರಸ್ಕೃತ ಆದ ಅರ್ಜಿದಾರರಿಗೆ ಕಳುಹಿಸಲಾಗುತ್ತಿದ್ದು 3ಲಕ್ಷಕ್ಕೂ ಅಧಿಕ ಮೆಸೇಜ್ ಅನ್ನು ಅರ್ಜಿದಾರರಿಗೆ ಪ್ರತ್ಯೇಕವಾಗಿ ಒಂದೊಂದರಂತೆ ಕಳುಹಿಸಿದ್ದಾರೆ.
ಬಾಕಿ ಇದ್ದ ಅರ್ಜಿ ಪ್ರಮಾಣ ಇಳಿಕೆ
ಸಕಾಲದಲ್ಲಿ ಜಾರಿಗೆ ತರಲಾದ ಈ ವಿಧಾನದ ಬಗ್ಗೆ ಸಕಾಲ ಮಿಶನ್ ನ ಹೆಚ್ಚುವರಿ ಯೋಜನಾ ನಿರ್ದೇಶಕಿ ಪಲ್ಲವಿ ಆಕುರಾತಿ ಅವರು ಮಾಧ್ಯಮದ ಮುಂದೆ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಬಾಕಿ ಇದ್ದ ಅರ್ಜಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು 9691 ಅರ್ಜಿ ಬಾಕಿ ಇತ್ತು ಅದರಲ್ಲಿ 2,628 ಅರ್ಜಿ ಮಾತ್ರ ಈಗ ಪ್ರಸ್ತುತ ಬಾಕಿ ಉಳಿದಿದೆ. ಕಳೆದ ಮೂರು ತಿಂಗಳಿನಿಂದ ಗ್ರಾಮೀಣ ಇಲಾಖೆ, ಪಂಚಾಯತ್ ರಾಜ್ ಇತರೆಡೆಯಿಂದ ಆನ್ಲೈನ್ ಅರ್ಜಿ ಬರುವ ಪ್ರಮಾಣ ಅಧಿಕ ಆಗುತ್ತಿದೆ ಹಾಗಾಗಿ ಇಂತಹ ವ್ಯವಸ್ಥೆ ಸಾಕಷ್ಟು ಅನುಕೂಲ ಆಗಲಿದೆ ಎಂದು ಅವರು ತಿಳಿಸಿದ್ದಾರೆ.
ಸಕಾಲದ ವ್ಯಾಪ್ತಿ ವಿಸ್ತಾರ
ಸಕಾಲದ ವ್ಯಾಪ್ತಿಯನ್ನು ಈಗ ಮತ್ತಷ್ಟು ವಿಸ್ತರಿಸುವತ್ತ ಸರಕಾರ ಹೆಜ್ಜೆ ಇರಿಸುತ್ತಿದೆ. ಗೃಹ ಇಲಾಖೆಯ ಬಾಡಿಗೆದಾರರ ಪೂರ್ವ ಪರಿಶೀಲನೆ, ಮಾಹಿತಿ ತಂತ್ರಜ್ಞಾನದ ಸ್ಟಾರ್ಟ್ ಅಪ್ ನೋಂದಣಿ, ಉದ್ಯೋಗಾಕಾಂಕ್ಷಿಗಳ ನೋಂದಣಿ, ಮರುನೋಂದಣಿ, ನೋಂದಣಿ ಪತ್ರ ನವೀಕರಣ ಇನ್ನೂ ಅನೇಕ ವಿಧವಾದ ಸೇವೆಯನ್ನು ಸಕಾಲದ ಅಡಿಯಲ್ಲಿ ನೀಡಲು ಸರಕಾರ ತೀರ್ಮಾನಿಸಿದೆ.
