
ರೇಶನ್ ಕಾರ್ಡ್ ಇಂದು ಬಹಳ ಮುಖ್ಯವಾದ ದಾಖಲೆಯಾಗಿದ್ದು ಪ್ರತಿಯೊಬ್ಬ ವ್ಯಕ್ತಿಗೂ ಇದು ಬಹಳ ಮುಖ್ಯವಾಗಿದೆ.ಈ ಕಾರ್ಡ್ ಅನ್ನು ಬಡವರ್ಗದ ಜನತೆಗಾಗಿ ಪರಿಚಯಿಸಲಾಯಿತು. ಹೌದು ಇದನ್ನು ಅಂತ್ಯೊದಯ, ಬಿಪಿಎಲ್, ಎಪಿಎಲ್ ಆಗಿ ವಿಂಗಡಣೆ ಮಾಡಿದ್ದು, ಈಗಾಗಲೇ ತಿದ್ದುಪಡಿ ಮಾಡೋದಕ್ಕಾಗಿ ಆಹಾರ ಇಲಾಖೆಯು ಅವಕಾಶ ನೀಡಿದೆ.ಹೊಸ ಕಾರ್ಡ್ ಗೂ ಅರ್ಜಿ ಸಲ್ಲಿಕೆ ಮಾಡಲು ಒಂದು ದಿನ ಅವಕಾಶ ನೀಡಿದ್ದು, ಮುಂದೆಯು ಶೀಘ್ರವಾಗಿ ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಲಾಗುತ್ತದೆ. ಇಂದು ಹೊಸ ಪಡಿತರ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಲು ಹಲವು ಜನರು ಕಾಯುತ್ತಿದ್ದು, ಈ ಕಾರ್ಡ್ ಮೂಲ ದಾಖಲೆಗಳಲ್ಲಿ ಒಂದಾಗಿದ್ದು ಇದನ್ನು ಪಡೆಯುವ ಸಲುವಾಗಿ ಅನೇಕರು ಅರ್ಜಿ ಹಾಕಿದ್ದರೂ ಕೆಲವರ ಅರ್ಜಿ ಇನ್ನು ಸ್ವೀಕೃತಿ ಆಗಿರಲಿಲ್ಲ ಈ ಬಗ್ಗೆ ಉತ್ತರ ಇಲ್ಲಿದೆ.
ಆಕ್ರಮ ವ್ಯವಹಾರ
ಇಂದು ಪಡಿತರ ಕಾರ್ಡ್ ನಿಂದ ಹಲವಷ್ಟು ಸರಕಾರಿ ಸೌಲಭ್ಯ ಸಿಗುತ್ತಿದ್ದು ಇಂದು ಗ್ಯಾರಂಟಿ ಯೋಜನೆಗಳಿಗೂ ಈ ರೇಷನ್ ಕಾರ್ಡ್ ಬಹಳಷ್ಟು ಅಗತ್ಯವಾಗಿದೆ. ಆದರೆ ಇಂದು ಅಕ್ರಮ ವ್ಯವಹಾರ ಸಹ ಬಹಳಷ್ಟು ಏರುತ್ತಿದ್ದು ಈ ಅಕ್ರಮ ತಡೆಗಟ್ಟಲು ಇಕೆವೈಸಿ ಮಾಡಿಸುವುದು ಕಡ್ಡಾಯ ಎಂದು ಆಹಾರ ಇಲಾಖೆಯ ನಿಗಮವು ಮಾಹಿತಿ ನೀಡಿದೆ.
ಹೊಸ ಕಾರ್ಡ್ ಅರ್ಜಿ ಸಲ್ಲಿಕೆ
ಇಂದು ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕೆಲ ಅಗತ್ಯ ಪ್ರಕ್ರಿಯೆ ಕಡ್ಡಾಯ ಮಾಡಲಾಗುತ್ತಿದ್ದು ಈಗಾಗಲೇ 2.95 ಲಕ್ಷ ಹೊಸ ಪಡಿತರ ಅರ್ಜಿ ಬಂದಿದ್ದು ಶೀಘ್ರ ಈ ಬಗ್ಗೆ ಕಾರ್ಯ ಕೈಗೊಳ್ಳುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಅನರ್ಹ ಕಾರ್ಡು ರದ್ದು
ಇಂದು ಅನರ್ಹ ಕಾರ್ಡು ಗಳ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ. ಕಾಂಗ್ರೆಸ್ ಸರಕಾರ ಚುನಾವಣೆಗೆ ಮುನ್ನ ನೀಡಿದ್ದ ಘೋಷಣೆ ಚಾಚು ತಪ್ಪದೇ ಪಾಲಿಸುತ್ತಿದ್ದು, ಹಸಿವು ಮುಕ್ತ ಕನಸ್ಸಿಗೆ ನಮ್ಮ ಸರಕಾರ ಬಹಳಷ್ಟು ಸಿದ್ಧವಾಗಿದ್ದು ಅನರ್ಹ ಫಲಾನುಭವಿಗಳ ಕಾರ್ಡ್ ಅನ್ನು ರದ್ದು ಮಾಡಲಾಗುವುದು ಎಂದಿದ್ದಾರೆ. ಪಡಿತರ ಕಾರ್ಡ್ ಅನ್ನು ಆಹಾರ ಧಾನ್ಯ ಪಡೆಯಲು ಬಳಸದೇ ಕೇವಲ ರೇಶನ್ ಕಾರ್ಡ್ ಮಾತ್ರ ಬಳಸಿ ಶೈಕ್ಷಣಿಕ , ವೈದ್ಯಕೀಯ, ಆರೋಗ್ಯ ಸೌಲಭ್ಯ ಪಡೆಯುತ್ತಿದ್ದಾರೆ. ಇಂತವರ ಕಾರ್ಡ್ ರದ್ದಾಗಲಿದೆ ಎಂದಿದ್ದಾರೆ.
ಈಗಾಗಲೇ ಕಾರ್ಡು ದಾರರು ಡಿಸೆಂಬರ್ 3ರಂದು ಹೊಸ ರೇಶನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಕೇವಲ ಒಂದು ದಿನ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಭಾನುವಾರ ಡಿಸೆಂಬರ್ 3 ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು ಮುಂದೆ ಅವಕಾಶ ನೀಡಬಹುದು.
