
ಮೊದಲಿಂದಲೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತ ಪರ ಯೋಜನೆಗಳಿಗೆ ಅಧಿಕ ಮಾನ್ಯತೆ ನೀಡುತ್ತಲೇ ಬಂದಿದೆ. ಕಡಿಮೆ ಬಡ್ಡಿದರಕ್ಕೆ ಸಾಲ ಸೌಲಭ್ಯ ನೀಡುವ ಜೊತೆಗೆ ಮನೆ ನಿರ್ಮಾಣ, ಪಂಪ್ ಸೆಟ್ ಅಳವಡಿಕೆ, ಬೀಜ ರಸಗೊಬ್ಬರ ವಿತರಣೆ ಇನ್ನೂ ಅನೇಕ ವಿಧವಾದ ಸಮಾಜಮುಖಿ ಕಾರ್ಯ ಚಟುವಟಿಕೆ ಮಾಡುತ್ತಲೇ ಬಂದಿದೆ. ಅದೇ ರೀತಿ ಈ ಬಾರಿ ಮಳೆ ಬಾರದೇ ರೈತರು ಇದರಿಂದಾಗಿ ಸಾಕಷ್ಟು ಸಂಕಷ್ಟ ಅನುಭವಿಸಿದ್ದು ಈಗ ರೈತರ ಸಂಕಷ್ಟಕ್ಕೆ ರಾಜ್ಯ ಸರಕಾರ ಸ್ಪಂದನೆ ನೀಡಲು ಹೊರಟಿದೆ.
ರಾಜ್ಯದ ಕೆಲವೆಡೆ ಅಧಿಕ ಮಳೆ ಬಂದು ಬೆಳೆ ನಾಶ ಸಮಸ್ಯೆ ಆಗುತ್ತಿದ್ದರೆ ಇನ್ನು ಕೆಲವೆಡೆ ಕಡಿಮೆ ಮಳೆ ಬಂದು ಬೆಳೆಯ ಫಸಲೇ ಬಾರದೇ ಸಹ ಸಮಸ್ಯೆ ಆಗಿದೆ. ಹಾಗಾಗಿ ಸಾಲ ಸೂಲ ಮಾಡಿದ್ದ ರೈತರ ಪರಿಸ್ಥಿತಿ ಸದ್ಯ ಕಂಗಾಲಾಗುವಂತೆ ಮಾಡಿದೆ. ಹಾಗಾಗಿ ಬೆಳೆ ಪರಿಹಾರ ವಿಮಾ ಮೊತ್ತ ಪಾವತಿಗೆ ಈ ಹಿಂದಿನಿಂದಲೂ ಮನವಿ ಬಂದಿದ್ದು ಈ ಬಗ್ಗೆ ಕೃಷಿ ಸಚಿವರಾದ ಚೆಲುವರಾಯ ಸ್ವಾಮಿ ಅವರು ಮಾತನಾಡಿದ್ದಾರೆ.
ಅಧಿವೇಶನದಲ್ಲಿ ಈ ಬಗ್ಗೆ ಅನೇಕ ಪ್ರಶ್ನೆಗಳ ಸುರಿಮಳೆ ಸುರಿದಿದ್ದು ಈ ಬಗ್ಗೆ ಸಚಿವರು ಉತ್ತರಿಸಿದ್ದಾರೆ. ರಾಜ್ಯದಲ್ಲಿ ರೈತರಿಗೆ ಅನೇಕ ಸಂಕಷ್ಟ ಎದುರಾಗಿದೆ ಆದರೆ ಪರಿಹಾರ್ಥವಾಗಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಸಹಾಯಧನ ಸಹ ನೀಡಲಿಲ್ಲ. ಅಧಿಕಾರಿಗಳ ನಿರ್ಲಕ್ಷ ಕೂಡ ಹಣ ಕಡಿಮೆ ಬರಲು ಕಾರಣ ಆಗಲಿದೆ ಎಂದು ಅವರನ್ನು ಪ್ರಶ್ನೆ ಮಾಡಲಾಗಿದ್ದು ಸದ್ಯ ಇವೆಲ್ಲದ್ದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಏನಂದ್ರು ಸಚಿವರು?
ಈ ಯೋಜನೆಗಾಗಿ 450ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. ಹಾಗಾಗಿ ಬೆಳೆ ನಷ್ಟ ಹೊಂದಿರುವ ವಿಮಾ ರೈತರಿಗೆ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ವಿಮೆ ಪಾವತಿ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಬೆಳೆ ಕಟಾವಿನ ಸಮೀಕ್ಷೆ ದೊರೆತಿದ್ದು ಅರ್ಹ ರೈತರಿಗೆ ಮಾಸಾಂತ್ಯಾಕ್ಕೆ ವಿಮೆ ಹಣ ತಲುಪಲಿದೆ. ಹಣ ಕಡಿಮೆ ಬರುತ್ತದೆ ಎಂಬ ದೂರಿಗೆ ಕೇಂದ್ರದ ಕೆಲ ಮಾನದಂಡಗಳು ಕಾರಣ ಹಾಗಾಗಿ ಆ ಬಗ್ಗೆ ಗಮನಿಸಬೇಕು. ಡಿಸೆಂಬರ್ ಅಂತ್ಯಕ್ಕೆ ಹಣ ಮಂಜೂರಾಗಲಿದೆ ಎಂದಿದ್ದಾರೆ.
ಒಟ್ಟಾರೆಯಾಗಿ ಬೆಳೆ ಸಮೀಕ್ಷೆ ಕಟಾವು ಮಾರ್ಗ ಸೂಚಿ ಇತ್ಯಾದಿ ಪ್ರಕಾರ ಹಣ ಮಂಜೂರು ಮಾಡಲು ಕೇಂದ್ರ ಸರಕಾರವು ಸಹ ಸಹಾಯ ಹಸ್ತ ನೀಡಬೇಕಿದೆ. ಅದೇ ರೀತಿ ಹಣವನ್ನು ಹಿಂದಿನ ಏಳು ತಿಂಗಳ ಸರಾಸರಿ ಬೆಲೆ ಲೆಕ್ಕಾಚಾರದ ಪ್ರಕಾರ ಹಣ ಮಂಜೂರು ಮಾಡಲಾಗುವುದು. ಇದರ ಹೊರತು ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ ಕೂಡ ಹಣ ಮಂಜೂರು ಮಾಡುವ ಆಯ್ಕೆ ಕೂಡ ಇದ್ದು ಎಲ್ಲ ಅಂಶ ಪರಿಗಣಿಸಿ ರೈತರಿಗೆ ಅನುಕೂಲ ಆಗುವ ವ್ಯವಸ್ಥೆಯನ್ನು ಕೃಷಿ ಇಲಾಖೆ ಹಾಗೂ ಜಿಲ್ಲಾಧಿಕಾರಿ ಮುಖೇನ ಜಾರಿಗೆ ತರುವುದಾಗಿ ಸಚಿವರು ತಿಳಿಸಿದ್ದಾರೆ.
