ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಸುದ್ದಿ ಬಹಳಷ್ಟು ಜೊರಾಗುತ್ತಿದೆ. ಐದು ಗ್ಯಾರಂಟಿ ಗಳಲ್ಲಿ ಹೆಚ್ಚು ಸುದ್ದಿ ಮಾಡ್ತಾ ಇರುವ ಯೋಜನೆಯೇ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳು. ಒಬ್ಬರು ತಮ್ಮ ಖಾತೆಗೆ ಹಣ ಬಂದಿರುವ ಬಗ್ಗೆ ಖುಷಿ ವ್ಯಕ್ತ ಪಡಿಸಿದ್ರೆ ಇನ್ನು ಕೆಲವರೂ ಹಣ ಜಮೆ ಯಾಗಿಲ್ಲ ಎಂದು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಹಣ ಬಾರದೇ ಇದ್ದವರ ಬಗ್ಗೆ ಸರಕಾರ ಸೂಕ್ತವಾದ ಕ್ರಮ ಕೈಗೊಂಡರು ಹೆಚ್ಚಿನ ಜನತೆಗೆ ಹಣ ಜಮೆ ಯಾಗಿಲ್ಲ. ಈ ಬಗ್ಗೆ ಸರಕಾರ ಗುಡ್ ನ್ಯೂಸ್ ಒಂದನ್ನು ನೀಡಿದೆ.
ಹಣ ಬಾರದೇ ಇದ್ದಲ್ಲಿ ಈ ಕ್ರಮ ಅನುಸರಿಸಿ
ನೀವು ಈ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಮಾಡಿದ್ರು ಹಣ ಜಮೆಯಾಗಿಲ್ಲ ಎಂದಾದರೆ ನೀವು ಮತ್ತೆ ಹೊಸದಾಗಿ ಈ ಯೋಜನೆಗೆ ಅರ್ಜಿ ಹಾಕಲು ಸರಕಾರ ಅವಕಾಶ ನೀಡಿದೆ. ಹೌದು ನಿಮ್ಮ ದಾಖಲೆಗಳೆಲ್ಲವನ್ನೂ ಸರಿಯಾಗಿ ಆಪ್ ಡೇಟ್ ಮಾಡಿ ಮತ್ತೆ ಅರ್ಜಿ ಹಾಕಬಹುದಾಗಿದೆ. ಹೀಗೆ ಮಾಡಿದ್ದಲ್ಲಿ ಗೃಹಲಕ್ಷ್ಮಿ ಹಣ ನಿಮಗೆ ಜಮೆ ಯಾಗಬಹುದು.
ಈ ಬಗ್ಗೆಯು ಗಮನ ಹರಿಸಿ
ನಿಮಗೆ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ ಎಂದಾದರೆ ನಿಮ್ಮ ಬ್ಯಾಂಕ್ ನ ಪಾಸ್ ಬುಕ್ಕ್ ನ್ನು ಎನ್ ಪಿಸಿ ಮ್ಯಾಪಿಂಗ್ ಯು ಆಗಿದ್ಯಾ , ಆಧಾರ್ ಲಿಂಕ್ ಆಗಿದೆ ಇಲ್ವಾ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಆಧಾರ್ ಲಿಂಕ್ ಆದ ಬ್ಯಾಂಕ್ ಪುಸ್ತಕ ನಿಷ್ಕ್ರಿಯ ಆದಲ್ಲಿ ಅಂಚೆ ಕಚೇರಿಯಲ್ಲಿ ಹೊಸದಾಗಿ ಖಾತೆಯನ್ನು ತೆರೆದು ಅರ್ಜಿ ಸಲ್ಲಿಸಿ.
ಅನ್ನಭಾಗ್ಯದ ಹಣವೂ ಈ ತಿಂಗಳು ಜಮೆ
ಅನ್ನಭಾಗ್ಯ ಯೋಜನೆಯ ಮೂಲಕ ಆಹಾರ ಇಲಾಖೆಯ ಅಡಿಯಲ್ಲಿ 10ಕೆಜಿ ಅಕ್ಕಿಯನ್ನು ವಿತರಣೆ ಮಾಡುವುದಾಗಿ ರಾಜ್ಯ ಸರಕಾರ ತಿಳಿಸಿತ್ತು. ಆದರೆ ಅಕ್ಕಿ ಕೊರತೆಯಿಂದ ಹೆಚ್ಚುವರಿ ಅಕ್ಕಿ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ 5kg ಅಕ್ಕಿ ಬದಲಿಗೆ 34 ರೂಪಾಯಿ ಯಂತೆ 170 ರೂಪಾಯಿಯನ್ನು ಮನೆಯ ಯಜಮಾನನ ಖಾತೆಗೆ ಜಮೆ ಮಾಡುತ್ತಿದೆ. ಇದೀಗ ಜನವರಿ ಮತ್ತು ಪೆಬ್ರವರಿ ತಿಂಗಳ ಅಕ್ಕಿ ಹಣ ವೂ ಕೆಲವರಿಗೆ ಜಮೆಯಾಗಿಲ್ಲ.ಈ ಬಗ್ಗೆ ಆಹಾರ ಇಲಾಖೆಯು ಮಾಹಿತಿ ನೀಡಿದ್ದು ಈ ತಿಂಗಳ 20 ರ ಒಳಗೆ ಅನ್ನಭಾಗ್ಯ ಯೋಜನೆಯ ಹಣ ಜಮೆ ಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
