Home ರಾಜ್ಯ ಸರಕಾರ ಹೊಸ ಬಿಪಿಎಲ್‌, ಎಪಿಎಲ್‌ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದಿರಾ? ನಿಮಗಿದೆ ಸಿಹಿ ಸುದ್ದಿ

ಹೊಸ ಬಿಪಿಎಲ್‌, ಎಪಿಎಲ್‌ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದಿರಾ? ನಿಮಗಿದೆ ಸಿಹಿ ಸುದ್ದಿ

ಇಂದು ಹಲವಾರು ಜನರು ಹೊಸ ಪಡಿತರ ಕಾರ್ಡು ಪಡೆಯಲು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ ಕೇವಲ ತಿದ್ದುಪಡಿ ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು. ಇದೀಗ ಹೊಸ ಎಪಿಎಲ್‌, ಬಿಪಿಎಲ್‌ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಅನ್ನು ನೀಡಿದೆ. ಪಡಿತರ ಚೀಟಿ ಇದ್ದರೆ ಮಾತ್ರ ನೀವು ಎಲ್ಲಾ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಅವಕಾಶ ಕೂಡ ಇದೆ. ಕುಟುಂಬದಲ್ಲಿ ಪಡಿತರ ಚೀಟಿ ಹೊಂದಿದ್ದರೂ ಕೆಲವು ಹೊಸ ಕುಟುಂಬಗಳು ಪಡಿತರ ಚೀಟಿ ಇಲ್ಲದ ಕಾರಣ ಸರಕಾರ ನೀಡುವ ಸೌಲಭ್ಯಗಳಿಂದ ವಂಚಿತರಾಗುವ ಸನ್ನಿವೇಶ ಒದಗಿದೆ.

ಸಚಿವರು ಹೇಳಿದ್ದೇನು?

ಈ ಮೊದಲು ಚುನಾವಣೆ ಅಂಗವಾಗಿ ಹೊಸ ಪಡಿತರ ಚೀಟಿ ವಿತರಣೆ ಸದ್ಯಕ್ಕೆ ಇಲ್ಲ ಎಂದು ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಿಲ್ಲಿಸಲಾಗಿತ್ತು. ಈ ಮೊದಲು ಕೆಲವರು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದು ಇನ್ನು 15 ದಿನದೊಳಗೆ ಪರಿಶೀಲನೆ ಮಾಡಿ ಹೊಸ ಪಡಿತರ ಚೀಟಿ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆಹಾರ ಇಲಾಖೆ ಸಚಿವರು ತಿಳಿಸಿದ್ದಾರೆ. ಇನ್ನೂ ಪಡಿತರ ಚೀಟಿದಾರರಿಗೆ ಹಣದ ಬದಲು ಅಕ್ಕಿ ನೀಡಲು ಪ್ರಯತ್ನ ನಡೆಸಲಾಗುತ್ತಿದ್ದು, ಶೀಘ್ರವೇ ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಕೆ.ಎಚ್.‌ ಮುನಿಯಪ್ಪ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಕಾರ್ಡ್ ರದ್ದು

ಈಗಾಗಲೇ ಬಿಪಿಎಲ್, ಅಂತ್ಯೊದಯ ಕಾರ್ಡ್ ಹೊಂದಿರುವ ಗ್ರಾಹಕರು ಸುಮಾರು 6 ತಿಂಗಳಿನಿಂದ ರೇಷನ್‌ ಪಡೆಯದೆ ಕೇವಲ ಸರಕಾರಿ ಸೌಲಭ್ಯ ಪಡೆಯಲು ಮಾತ್ರ ಕಾರ್ಡ್ ಬಳಸುತ್ತಿದ್ದಾರೆ.ಊಗಾಗಲೇ ಪ್ರತಿ ಗ್ರಾಮವಾರು ಪ್ರದೇಶದಲ್ಲಿ ಇದನ್ನು ಗಮನಿಸಿ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡುವ ಕುರಿತಂತೆ ಮಾಹಿತಿ ನೀಡಿದೆ. ಈಗಾಗಲೇ 3.26 ಲಕ್ಷ ಬಿಪಿಎಲ್‌ ಕಾರ್ಡುದಾರರು 6 ತಿಂಗಳಿಂದ ರೇಷನ್ ಪಡೆಯುತ್ತಿಲ್ಲ ಎಂದು ಇಲಾಖೆ ಮಾಹಿತಿ ನೀಡಿದೆ.

ಜನವರಿಯಿಂದ ಹೊಸ ನಿಯಮ

ರಾಜ್ಯ ಆಹಾರ ಇಲಾಖೆ (food department) ಈಗಾಗಲೇ ಪಡಿತರ ವಿತರಣೆ ಬಗ್ಗೆ ಸೂಕ್ತವಾಗಿ ಗಮನಿಸಿ ಯಾರು ರೇಷನ್ ಕಾರ್ಡ್ ಕೆ ವೈ ಸಿ ಮಾಡಿಸಿಕೊಳ್ಳುವುದಿಲ್ಲವೋ ಅಂತವರ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ. ಇದಕ್ಕಾಗಿ ಡಿ.30 ಕೊನೆಯ ದಿನ ನಿಗದಿ ಮಾಡಿದ್ದು ಇಕೆವೈಸಿ ಮಾಡದೇ ಇದ್ದಲ್ಲಿ ಕಾರ್ಡ್ ರದ್ದಾಗುವುದು ಪಕ್ಕವಾಗಿದೆ. ರೇಷನ್ ಕಾರ್ಡ್ ಗೆ ಈಕೆವೈಸಿ ಮಾಡಿಸದೆ ಇದ್ದರೆ ಬಯೋಮೆಟ್ರಿಕ್ ಮೂಲಕ ಆಹಾರ ಧಾನ್ಯಗಳನ್ನು ಖರೀದಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಇದರಿಂದ ವಂಚಿರಾಗುವ ಮೊದಲು ಈ‌ ಕೆಲಸವನ್ನು ಪೂರೈಸಿ.

 
Previous articleಜಮೀನು ಹೊಂದಿರುವ ರೈತರಿಗೆ ದಾರಿ ಇಲ್ಲದೆ ಸಮಸ್ಯೆಯಾಗಿದೆಯೇ? ಇನ್ಮುಂದೆ ಈ ಭಯ ಇಲ್ಲ
Next articleಅಂಚೆ ಇಲಾಖೆಯ ಮೂಲಕ ಹೂಡಿಕೆ ಮಾಡಿದ್ರೆ‌ ನಿಮಗೆ ಸಿಗುತ್ತೆ ಭರ್ಜರಿ ಲಾಭ