
ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದ್ದು ಈ ಯೋಜನೆಯಡಿ ನೋಂದಾಯಿಸಿಕೊಂಡ ಮನೆ ಯಜಮಾನಿಗೆ 2 ಸಾವಿರ ರೂಪಾಯಿ ನೀಡಲಾಗುತ್ತದೆ. ಇನ್ನೂ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಕೇಂದ್ರ ಹಣ ನೀಡಲು ಮುಂದಾಗಿದೆ. ಈ ಯೋಜನೆಯ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಬರದೇ ಇದ್ದರೆ, ಅದಕ್ಕೆ ಕಾರಣ ಇರುವ ಸಮಸ್ಯೆಗಳನ್ನು ಸ್ಥಳದಲ್ಲಿ ಪರಿಹಾರ ಮಾಡಲಾಗುವ ಮೂಲಕ ಈಗ ಹೊಸ ಯೋಜನೆ ರೂಪಿಸಿದೆ.
ವಿಶೇಷ ಶಿಬಿರ
ಆರು ತಿಂಗಳ ಹಿಂದೆಯೇ ಅರ್ಜಿ ಸಲ್ಲಿಸಿದ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಒಂದು ಕಂತಿನ ಹಣ ಈವರೆಗೂ ಬಂದಿಲ್ಲವೇ, ಹಾಗಿದ್ದರೆ ಚಿಂತಿಸ ಬೇಡಿ, ಇದರಿಂದ ಉಂಟಾದ ತಾಂತ್ರಿಕ ಹಾಗೂ ವೈಯಕ್ತಿಕ ಸಮಸ್ಯೆಯನ್ನು ಈವರೆಗೂ ಸರಿಪಡಿಸಲು ಆಗದಿದ್ದರೆ ಕರ್ನಾಟಕ ಸರ್ಕಾರವು ಡಿ.27 ರಿಂದ ಸತತ ಮೂರು ದಿನಗಳ ಕಾಲ ವಿಶೇಷ ಶಿಬಿರವನ್ನು ಹಮ್ಮಿಕೊಂಡಿದೆ.
ಸಮಸ್ಯೆ ಬಗೆಹರಿಸಿಕೊಳ್ಳಿ
ಪ್ರತಿಯೊಂದು ಗ್ರಾಮದ ಗ್ರಾಮಪಂಚಾಯಿತಿಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಸಿಬ್ಬಂದಿಗಳು ಭಾಗಿಯಾಗಲಿದ್ದು ಇಲ್ಲಿ ಸಮಸ್ಯೆಯಾಗಿರುವುದು ಏನು? ಸರಿಪಡಿಸಿಕೊಳ್ಳಲು ಸೂಕ್ತ ಸಲಹೆ ನೀಡಲಿದ್ದಾರೆ. ಈ ಶಿಬಿರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ನಡೆಯಲಿದ್ದು ಈ ಶಿಬಿರದಲ್ಲಿ ಬಾಪೂಜಿ ಸೇವಾ ಕೇಂದ್ರದ ಗಣಕಯಂತ್ರ ನಿರ್ವಾಹಣೆ ಮಾಡುವವರು, ಅಂಗನವಾಡಿ ಕಾರ್ಯಕರ್ತರು ಇತ್ಯಾದಿ ತಂಡಗಳು ಭಾಗವಹಿಸಲಿವೆ.
ಇತ್ಯಾದಿ ಪರಿಶೀಲನೆ
ಶಿಬಿರದಲ್ಲಿ ಆಧಾರ್ ಜೋಡಣೆ ಮಾಡುವ ಬಗ್ಗೆ ಸಲಹೆ, ಬ್ಯಾಂಕ್ ಖಾತೆಗಳನ್ನು ತೆರೆಯುವುದು, ಇ-ಕೆ.ವೈ.ಸಿ ಅಪ್ಡೇಟ್, ಯಾವ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದೆ ಇತ್ಯಾದಿ ಮಾಹಿತಿ ನೀಡಲಾಗುತ್ತದೆ. ಹಣ ಬಾರದೇ ಸಮಸ್ಯೆ ಎದುರಿಸುತ್ತಿರುವ ಫಲಾನುಭವಿಗಳು ತಮ್ಮ ಹಾಗೂ ಪತಿಯ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್, ರೇಷನ್ ಕಾರ್ಡ್ ದಾಖಲೆಗಳೊಂದಿಗೆ ಶಿಬಿರಕ್ಕೆ ಬರಲು ತಿಳಿಸಲಾಗಿದೆ.
ಡಿಸೆಂಬರ್ ತಿಂಗಳ ಹಣ ಯಾವಾಗ ಜಮೆ?
ಇನ್ನು ಡಿಸೆಂಬರ್ ತಿಂಗಳ ಗೃಹಲಕ್ಷ್ಮಿ ಹಣ ಜನವರಿ 5ರಿಂದ ಖಾತೆಗಳಿಗೆ ಜಮೆಯಾಗಲಿದೆ. ಈಗಾಗಲೇ ನವೆಂಬರ್ ತಿಂಗಳ ಹಣ ಬಿಡುಗಡೆಯಾಗಿದ್ದು ಹಣ ಬಾರದೇ ಇದ್ದ ಮಹಿಳೆಯರ ಖಾತೆಗೂ ಶೀಘ್ರದಲ್ಲಿ ಹಣ ಜಮೆಯಾಗಲಿದೆ.
