
ಇಂದು ರೈತರ ಒಳಿತಿಗಾಗಿ ಸರಕಾರವು ಹಲವು ರೀತಿಯ ಯೋಜನೆಗಳನ್ನು ರೂಪಿಸುತ್ತಲೆ ಬಂದಿದೆ. ಈಗಾಗಲೇ ಬೆಳೆ ಪರಿಹಾರ ದ ಹಣ ಅರ್ಹ ರೈತರ ಖಾತೆಗೆ ಜಮೆ ಮಾಡಿದೆ. ಅದೇ ರೀತಿ ಕೃಷಿಕರಿಗೆ ಉತ್ತೇಜನ ನೀಡಲು ಕೃಷಿ ಉತ್ಪಾದಕತೆಯನ್ನು ಹೆಚ್ಚು ಮಾಡಲು ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಹಾಗೂ ಇಂಧನದ ವೆಚ್ಚದ ಬೆಲೆ ಕಡಿಮೆ ಮಾಡಲು ರೈತ ಶಕ್ತಿ ಯೋಜನೆ ಜಾರಿಮಾಡಿದೆ. ಈ ಸೌಲಭ್ಯ ನೀಡಲು ಕೃಷಿ ಇಲಾಖೆ ಈಗಾಗಲೇ ಮುಂದಾಗಿದ್ದು ಅರ್ಹ ರೈತರು ಅರ್ಜಿ ಸಲ್ಲಿಸಬಹುದಾಗಿದೆ.
ಸಹಾಯಧನ ದೊರಕಲಿದೆ
ಈ ಯೋಜನೆ ಮೂಲಕ ಪ್ರತಿಯೊಬ್ಬ ರೈತರಿಗೆ ಪ್ರತಿ ಎಕರೆಗೆ 250 ರೂ. ಗಳಂತೆ ಗರಿಷ್ಠ ಐದು ಎಕರೆಗೆ 1250 ರೂ. ವರೆಗೆ ಡೀಸೆಲ್ ಸಹಾಯ ಧನವನ್ನು ನೀಡಲಾಗುತ್ತದೆ. ಹೌದು ಅರ್ಹ ರೈತರು ಈ ಡೀಸಲ್ ಸಹಾಯಧನದ ಮೊತ್ತವನ್ನು ಡಿಬಿಟಿ ವೋರ್ಟಲ್ ಮೂಲಕ ಸೀಡೆಡ್ ಬ್ಯಾಂಕ್ / ಪೋಸ್ಟ್ ಆಫೀಸ್ ಖಾತೆ ಮೂಲಕ ಪಡೆಯಬಹುದಾಗಿದೆ.
ಪ್ರೂಟ್ಸ್ ನಲ್ಲಿ ನೊಂದಣಿ ಮಾಡಿ
ರೈತರು ಈ ಸೌಲಭ್ಯ ಪಡೆಯಬೇಕಾದರೆ ಫ್ರೂಟ್ಸ್ ನಲ್ಲಿ ನೋಂದಣಿ ಮಾಡಿರಬೇಕು. ರಾಜ್ಯದ ರೈತರಿಗೆ ಕೃಷಿ ಇಲಾಖೆಯ ಎಲ್ಲಾ ಯೋಜನೆಯ ಸೌಲಭ್ಯ ವನ್ನು FRUITS ಫೋರ್ಟಲ್ ಮೂಲಕ ನೋಂದಣಿ ಗುರುತಿನ ಸಂಖ್ಯೆ ಬಳಸಿ ಹಣ ಜಮೆ ಮಾಡಲಾಗುತ್ತಿದೆ. ಒಂದು ವೇಳೆ ನೋಂದಣಿಯಾಗದೇ ಇದ್ದಲ್ಲಿ ಬ್ಯಾಂಕ್ ಪಾಸ್ ಪುಸ್ತಕ, ಪಹಣಿ ವಿವರ, ಆಧಾರ್ ಕಾರ್ಡ್ ಇತ್ಯಾದಿ ದಾಖಲೆಯೊಂದಿಗೆ ತೋಟಗಾರಿಕೆ ಇಲಾಖೆಯಲ್ಲಿ ತಮ್ಮ ಎಲ್ಲಾ ಸರ್ವೆ ನಂಬರ್ ಭೂ ಹಿಡುವಳಿಗಳನ್ನು ನೋಂದಾಯಿಸಿಕೊಳ್ಳಿ.
ಪ್ರತಿ ಎಕರೆಗೆ 250 ರೂ
ನೇರ ನಗದು ವರ್ಗಾವಣೆ (DBT) ಮೂಲಕ ಡೀಸೆಲ್ ಸಹಾಯಧನವನ್ನು ನೀಡಲಾಗುತ್ತದೆ.ಪ್ರತಿ ಎಕರೆಗೆ ರೂ 2 50 ಮೊತ್ತ ನೀಡಲಾಗುತ್ತಿದ್ದು ಸುಮಾರು 45 ಲಕ್ಷಕ್ಕೂ ಹೆಚ್ಚಿನ ರೈತರಿಗೆ ಸಬ್ಸಿಡಿಯನ್ನು ನೀಡಲಾಗುತ್ತದೆ. ಗರಿಷ್ಠ ಐದು ಎಕರೆಗೆ ರೈತರು 1250 ರೂ. ವರೆಗೆ ಡೀಸೆಲ್ ಸಹಾಯಧನವನ್ನು ಪಡೆಯಲು ಅವಕಾಶ ಇದ್ದು ರೈತರ ಮೇಲಿನ ಆರ್ಥಿಕ ಹೊರೆಯನ್ನು ಕಡಿತಗೊಳಿಸುವ ಮೂಲಕ ಈ ಯೋಜನೆ ಜಾರಿಗೆ ತರಲಾಗಿದೆ.
