
ಇಂದು ಪಡಿತರ ಕಾರ್ಡ್ ಅನ್ನೊದು ಎಷ್ಟು ಉಪಯೋಗ ಎಂಬುದು ಬಹು ಜನರಿಗೆ ತಿಳಿದೆ ಇದೆ. ಪಡಿತರ ಕಾರ್ಡ್ ಹೊಂದಿದ್ದರೆ ಮಾತ್ರ ನೀವು ಆಹಾರ ಧಾನ್ಯ ಗಳನ್ನು ಪಡೆಯಲು ಸಹ ಸಾಧ್ಯ. ಇಂದು ರಾಜ್ಯ ಸರಕಾರ ವಿತರಣಾ ವ್ಯವಸ್ಥೆಗೆ ತಮ್ಮದೇ ಆದ ಯೋಜನೆಗಳನ್ನು ಜಾರಿಗೆ ತಂದಿದೆ. ಉಚಿತ ಯೋಜನೆಗಳ ಮೂಲಕ ಗ್ಯಾರೆಂಟಿ ಭರವಸೆ ನೀಡಿತ್ತು ಬಳಿಕ ಅನ್ನಭಾಗ್ಯ ಯೋಜನೆಯ ಮೂಲಕ ಹತ್ತು ಕೆ.ಜಿ. ಅಕ್ಕಿಯನ್ನು ಗ್ರಾಹಕರಿಗೆ ನೀಡುವ ಬಗ್ಗೆ ಮಾಹಿತಿ ನೀಡಿದ್ದು ಅದರೆ ಹೆಚ್ಚುವರಿ ಅಕ್ಕಿ ಸಿಗದ ಕಾರಣ ಹಣ ಮಂಜೂರು ಮಾಡುವುದಾಗಿ ಮಾಹಿತಿ ನೀಡಿದೆ.
ಹಣ ಸಂದಾಯ
ಅನ್ನಭಾಗ್ಯ ಯೋಜನೆ ಮೂಲಕ 5kg ಅಕ್ಕಿ ಹಾಗೂ ಉಳಿದ 5kg ಅಕ್ಕಿ ಗೆ ಹಣ ನಿಡ್ತಾ ಇದ್ದು ಗ್ರಾಹಕರ ಖಾತೆಗೆ ಹಣ ಜಮೆ ಮಾಡುತ್ತಿದೆ. ಈಗಾಗಲೇ ನವೆಂಬರ್ ತಿಂಗಳ ಹಣ ಜಮೆಯಾಗಿದ್ದು ಕೆಲವರಿಗೆ ಇನ್ನಷ್ಟೆ ಈ ತಿಂಗಳ ಹಣ ಜಮೆ ಯಾಗಬೇಕಿದೆ
ಇತರ ಆಹಾರ ಧಾನ್ಯ ವಿತರಣೆ
ಪಡಿತರ ಕಾರ್ಡ್ ಮೂಲಕ APL, BPL, ಅಂತ್ಯೋದಯ ಕಾರ್ಡ್ ಅನ್ನು ವಿಭಾಗ ಮಾಡಿದ್ದು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿದ್ದರೆ ಮಾತ್ರ ಪಡಿತರ ವಿತರಣೆ ಮಾಡಲಾಗುತ್ತದೆ. ಅದೇ ರೀತಿ ಕೆಲವು ಗ್ರಾಹಕರಿಗೆ ಈ ಬಾರಿ ರಾಗಿಯು ವಿತರಣೆ ಮಾಡಲಾಗುತ್ತದೆ ಎನ್ನಲಾಗಿದೆ. ಅಂತ್ಯೋದಯ ಕಾರ್ಡ್ ಹೊಂದಿದ್ದ ಗ್ರಾಹಕರಿಗೆ 21 kg ಅಕ್ಕಿ, ರಾಗಿ 14kg ನೀಡಲಾಗಿದೆ. ಈ ಮೂಲಕ ಇತರ ಆಹಾರ ಧಾನ್ಯಗಳು ಸಹ ದೊರೆತಿವೆ. ಈ ಮೊದಲು ಕೆಲವರಿಗೆ ಗೋಧಿ ವಿತರಣೆಯಾಗಿತ್ತು.
ಡಿಸೆಂಬರ್ 30 ಕೊನೆಯ ದಿನ
ರೇಷನ್ ಕಾರ್ಡ್ ಬಹಳಷ್ಟು ಅವಶ್ಯಕ ಇದ್ದರೂ ಇನ್ನು ಕೆಲವು ಪಡಿತರ ಇಕೆವೈಸಿ ಮಾಡಿಸಿಲ್ಲ. ಈಗಾಗಲೇ ಈ ಬಗ್ಗೆ ಸರಕಾರ ಕೊನೆಯ ದಿನಾಂಕ ಘೋಷಿಸಿದೆ. ಈಗಾಗಲೇ ತಿಳಿಸಿರುವಂತೆ ಅಕ್ಟೋಬರ್ 30 ನೇ ತಾರೀಖಿನ ಒಳಗೆ ಯಾರು ರೇಷನ್ ಕಾರ್ಡ್ ಇಕೆವೈಸಿ ಮಾಡಿಸಿಕೊಳ್ಳುವುದಿಲ್ಲವೋ ಅಂತವರ ಕಾರ್ಡ್ ನಿಷ್ಕ್ರಿಯ ಆಗುತ್ತೆ ಅನ್ನಲಾಗಿತ್ತು. ಅದರೆ ಇದೀಗ ಡಿಸೆಂಬರ್ 30 ರವರೆಗೆ ಕಲಾವಕಾಶ ನೀಡಿದ್ದು ಡಿ.30ಕೊನೆಯ ದಿನಾಂಕವಾಗಿದ್ದು ಅಷ್ಟರಲ್ಲಿ ನೀವು ಇಕೆವೈಸಿ ಮಾಡಿಸುವುದು ಮುಖ್ಯ.
