Home ಸರಕಾರಿ ಯೋಜನೆಗಳು ರಾಜ್ಯ ಸರಕಾರ ಗೃಹಲಕ್ಷ್ಮೀ ಪಿಂಕ್ ಕಾರ್ಡ್ ಅಗತ್ಯವೇ? ಯಾರ ಬಳಿ ಈ ಕಾರ್ಡ್ ಇರಬೇಕು?

ಗೃಹಲಕ್ಷ್ಮೀ ಪಿಂಕ್ ಕಾರ್ಡ್ ಅಗತ್ಯವೇ? ಯಾರ ಬಳಿ ಈ ಕಾರ್ಡ್ ಇರಬೇಕು?

0
ಗೃಹಲಕ್ಷ್ಮೀ ಪಿಂಕ್ ಕಾರ್ಡ್ ಅಗತ್ಯವೇ? ಯಾರ ಬಳಿ ಈ ಕಾರ್ಡ್ ಇರಬೇಕು?

ಗೃಹಲಕ್ಷ್ಮೀ ಯೋಜನೆ ಮೂಲಕ ಮಹಿಳೆಯರಿಗೆ ಎರಡು ಸಾವಿರ ಆರ್ಥಿಕ ಸಹಾಯಧನವನ್ನು ರಾಜ್ಯ ಸರಕಾರವು ನೀಡುತ್ತಿದ್ದು ಯುವನಿಧಿ ಯೋಜನೆಯ ಮೊತ್ತವು ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಈ ತಿಂಗಳ ಕೊನೆಯಲ್ಲಿ ಖಾತೆಗೆ ಜಮೆಯಾಗಲಿದೆ. ಈಗಾಗಲೇ ಗೃಹಲಕ್ಷ್ಮಿ ‌ಯೋಜನೆಗೆ ನೊಂದಣಿ ಮಾಡಿದ್ದರೂ ಅನೇಕ ಮಹೀಳೆಯರಿಗೆ ಈ ಮೊತ್ತ ಬರಲು ಇನ್ನೂ ಕೂಡ ಬಾಕಿ ಇದೆ. ಜಿಲ್ಲಾವಾರು ಹಂತ ಹಂತವಾಗಿ ಹಣ ಬಿಡುಗಡೆ ಮಾಡುವ ಕಾರಣ ಹಣ ಜಮೆಯಾಗುತ್ತಿರುವುದು ವಿಳಂಬ ಆಗಿದೆ. ಆದೇ ರೀತಿ ಈ ಗೃಹಲಕ್ಷ್ಮೀ ಹಣ ಬಾರದಿರಲು ಈ ಪಿಂಕ್ ಕಾರ್ಡ್ ಕೂಡ ಕಾರಣ ಎನ್ನಲಾಗುತ್ತಿದೆ. ಹಾಗಿದ್ರೆ ಈ ಪಿಂಕ್ ಅಂದ್ರೆ ಎನು? ಎಂಬ ಮಾಹಿತಿ ಇಲ್ಲಿದೆ.

ಪಿಂಕ್ ಕಾರ್ಡ್ ಯಾವರೀತಿ ಇರಲಿದೆ?
ಗೃಹಲಕ್ಷ್ಮೀ ಯೋಜನೆಗೆ ನೊಂದಣಿ ಮಾಡಿದವರು ಈ ಪಿಂಕ್ ಬಣ್ಣದ ಸ್ಮಾರ್ಟ್ ಕಾರ್ಡ್ ಅನ್ನು ಕೂಡ ಪಡೆಯಬೇಕಾಗುತ್ತದೆ. ಆದರೆ ಸದ್ಯಕ್ಕೆ ಈ ಕಾರ್ಡ್ ಹಲವಷ್ಟು ಮಹಿಳೆಯರ ಬಳಿ ಇಲ್ಲ. ಇದರಲ್ಲಿ ಸಿಎಂ ಸಿದ್ದರಾಮಯ್ಯ , ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪೋಟೋ ಇರಲಿದ್ದು ಗೃಹ ಲಕ್ಷ್ಮಿ ಮೊತ್ತ ಎರಡು ಸಾವಿರ ಎಂದು ಈ ಕಾರ್ಡ್ ನಲ್ಲಿ ಬರೆಯಲಾಗಿದೆ.

ಮುಂದಿನ ದಿನದಲ್ಲಿ ಅಗತ್ಯ
ಈ ಒಂದು ಪಿಂಕ್ ಕಾರ್ಡ್ ಮುಂದಿನ ದಿನದಲ್ಲಿ ನಿಮಗೆ ಉಪಯೋಗಕ್ಕೆ ಬರಲಿದೆ. ಇದರಲ್ಲಿ ಕ್ಯೂ ಆರ್ ಕೋಡ್ ಇರಲಿದ್ದು ನಿಮಗೆ ಎಷ್ಟು ಗೃಹಲಕ್ಷ್ಮೀ ಹಣ ಬಂದಿದೆ ಎಂಬ ಮಾಹಿತಿ ನೀವು ತಿಳಿಯಬಹುದಾಗಿದೆ. ಆದರೆ ಈಗ ಹಣ ಬಾರದಿರಲು ಈ ಕಾರ್ಡ್ ಕಾರಣ ಅಲ್ಲ. ಮುಂದಿನ ದಿನದಲ್ಲಿ ಅಗತ್ಯ ವಾಗಿ ಬೇಕಾಗಬಹುದು. 2024ರ ಜನವರಿಲ್ಲಿ ಅಂದರೆ ಈ ತಿಂಗಳಲಿನಲ್ಲಿ ನಿಮಗೆ ಈ ಕಾರ್ಡ್ ದೊರೆಯಬಹುದು.

ಈ ತಿಂಗಳ ಹಣ ಜಮೆ ಯಾವಾಗ?
ಈಗಾಗಲೇ ಡಿಸೆಂಬರ್ ತಿಂಗಳ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ. ಹಾಗಾಗಿ ಈ ಹಣ ಜನವರಿ 5 ರ ನಂತರ ನಿಮ್ಮ ಖಾತೆಗೆ ಜಮೆಯಾಗಬಹುದು. ಈಗಾಗಲೇ ಯಾರೆಗೆಲ್ಲ ಈ ಹಣ ಬಂದಿಲ್ಲವೋ ಅವರು ಗ್ರಾಮ ಪಂಚಾಯತ್ ಶಿಬಿರದ ಮೂಲಕ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಇದೆ. ಹಾಗಾಗಿ ನೊಂದಣಿ ಮಾಡಿದ ಮಹೀಳೆಯರಿಗೆ ಹಣ ಜಮೆಯಾಗದೇ ಇದ್ದಲ್ಲಿ ತಪ್ಪು ಮಾಹಿತಿ ಯನ್ನು ಸರಿಪಡಿಸಿಕೊಳ್ಳಿ.

ಇನ್ನೂ ಬಾಕಿ ಇರುವ ಹಣವನ್ನು ಕೂಡ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದ್ದು ಮಹಿಳೆಯರ ಪ್ರತಿ ತಿಂಗಳಿನ ಹಣವನ್ನು ಒಟ್ಟಿಗೆ ಪಡೆದುಕೊಳ್ಳಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.

 

LEAVE A REPLY

Please enter your comment!
Please enter your name here