Home ರಾಜ್ಯ ಸರಕಾರ ಆರೋಗ್ಯ ವ್ಯವಸ್ಥೆಗೆ ಕರ್ನಾಟಕದಲ್ಲಿ ಹೊಸ ವ್ಯವಸ್ಥೆ ಶೀಘ್ರ ಜಾರಿ

ಆರೋಗ್ಯ ವ್ಯವಸ್ಥೆಗೆ ಕರ್ನಾಟಕದಲ್ಲಿ ಹೊಸ ವ್ಯವಸ್ಥೆ ಶೀಘ್ರ ಜಾರಿ

ಇಂದು ಆರೋಗ್ಯವೇ ಭಾಗ್ಯ ಅನ್ನೊ ಕಾಲ ಬಂದಿದೆ. ಹೀಗಾಗಿ ಆರೋಗ್ಯ ಅಭಿವೃದ್ಧಿಗಾಗಿ ಜನರಿಗೆ ಸಾಕಷ್ಟು ಸೌಲಭ್ಯ ಸರಕಾರ ನೀಡುತ್ತಲೇ ಬಂದಿದೆ. ಸರಕಾರ ಜನತೆಗೆ ಆರೋಗ್ಯ ಸೌಲಭ್ಯ ನೀಡುವ ಸಲುವಾಗಿ ಈಗಾಗಲೇ ಅನೇಕ ಸೌಲಭ್ಯ ನೀಡುತ್ತಲೇ ಬಂದಿದೆ. ರಾಜ್ಯ ಸರಕಾರವು ಆಯುಷ್ಮಾನ್ ಭಾರತ್ ನಲ್ಲಿ ಮಹತ್ವದ ಬದಲಾವಣೆ ನೀಡಲು ರಾಜ್ಯದಲ್ಲಿ ಸರಕಾರ ಮುಂದಾಗಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ನೂತನ ಸ್ಪರ್ಶ
ಸಿಎಂ ಸಿದ್ದರಾಮಯ್ಯ ಅವರು ಆಯುಷ್ಮಾನ್ ಭಾರತ್ ಯೋಜನೆಗೆ ಮರು ಚಾಲನೆ ನೀಡುತ್ತಿದ್ದಾರೆ. ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಪರಿಷ್ಕೃತ ಕಾರ್ಡ್ ವಿತರಣೆಗೆ ಶೀಘ್ರದಲ್ಲಿ ಚಾಲನೆ ನೀಡಲಿದ್ದಾರೆ. ಪ್ರಧಾನ ಮಂತ್ರಿ ಜನಾರೋಗ್ಯಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ಸ್ಪರ್ಷ ನೀಡುತ್ತಿದ್ದಾರೆ. ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಪರಿಷ್ಕೃತ ಕಾರ್ಡ್ ವಿತರಣೆಗೆ ಚಾಲನೆ ನೀಡಲಿದ್ದಾರೆ.

ಮುಖ್ಯಮಂತ್ರಿ ಆರೋಗ್ಯ ಕಾರ್ಡ್
ಈ ಮೂಲಕ ಜನರ ಆರೋಗ್ಯ ಹಿತದೃಷ್ಟಿಯಿಂದ ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ ಗಳಿಗೆ ಹೊಸ ರೂಪ ನೀಡಲಾಗುತ್ತಿದೆ. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯವನ್ನು ಬಹುಪಾಲು ಬದಲಾಯಿಸಲಾಗುತ್ತಿದೆ. ಮುಖ್ಯಮಂತ್ರಿ ಆರೋಗ್ಯ ಕಾರ್ಡ್ ಎಂಬ ನಾಮದ್ಯೇಯದ ಮೂಲಕ ರಾಜ್ಯದ ಜನರಿಗೆ ಹೆಲ್ತ್ ಕಾರ್ಡ್ ಸಿಗಲಿದೆ. ಇದು ರಾಜ್ಯದ ಜನರಿಗೆ ತಲುಪಲಿದೆ.

ರಾಜ್ಯ, ಕೇಂದ್ರದ ಸಹಯೋಗ
BPLಕಾರ್ಡ್ ದಾರರಿಗೆ 5ಲಕ್ಷ ರೂಪಾಯಿ, APL ಕಾರ್ಡ್ ದಾರರಿಗೆ ಗರಿಷ್ಠ 1.50ಲಕ್ಷ ರೂಪಾಯಿ ವೆಚ್ಚವನ್ನು ಸರಕಾರ ಬರಿಸಲಿದೆ. ಈ ಒಂದು ಯೋಜನೆಗೆ 34% ಕೇಂದ್ರದ ಅನುದಾನ ಸಿಗಲಿದೆ. ಅದೇ ರೀತಿ 66% ಅನುದಾನವನ್ನು ರಾಜ್ಯಸರಕಾರ ಬರಿಸಲಿದೆ. ರಾಜ್ಯದ ಜನತೆಗೆ ಈ ಆರೋಗ್ಯ ಸೌಲಭ್ಯ ಸಾಕಷ್ಟು ನೆರವಾಗಲಿದ್ದು ರಾಜ್ಯ ಮತ್ತು ದೇಶಿಯ ವಿವಿಧ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಲು ಇಲ್ಲಿ ಅವಕಾಶ ಸಿಗಲಿದೆ.

ಒಟ್ಟಾರೆಯಾಗಿ ಈ ಒಂದು ಸೌಲಭ್ಯದಿಂದ ಸಾಮಾನ್ಯ ಜನರಿಗೆ ಅದರಲ್ಲೂ ಬಡವರ್ಗದವರಿಗೆ ಆರೋಗ್ಯ ಸೌಲಭ್ಯ ಸಿಕ್ಕಂತೆ ಆಗುತ್ತದೆ. ಇದರ ಜೊತೆಗೆ ಸರಕಾರಿ ಆಸ್ಪತ್ರೆಯಲ್ಲಿಯೂ ಹೈ ಟೆಕ್ ಸೌಲಭ್ಯ ನೀಡಲು ಆಧುನಿಕ ಸ್ಪರ್ಷನೀಡಲು ಸಹ ಸರಕಾರ ಚಿಂತಿಸುತ್ತಿದೆ. ಹಾಗಾಗಿ ಆರೋಗ್ಯ ಭಾಗ್ಯಕ್ಕೆ ಹೊಸ ಸ್ಪರ್ಷ ನೀಡಲಾಗುತ್ತಿದೆ. ಹಾಗಾಗಿ ಸಾಕಷ್ಟು ಸಾಮಾನ್ಯ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯವು ಸರಕಾರದ ಸೌಲಭ್ಯದಿಂದ ಸಿಗಲಿದೆ. ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ.

 
Previous articleಎಟಿಎಮ್ ಬಳಕೆ ಈಗ ಮತ್ತಷ್ಟು ದುಬಾರಿ, ಹಣ ವಿತ್ ಡ್ರಾ ಮಾಡುವ ಮುನ್ನ‌ ಈ ವಿಚಾರ ಅರಿಯಿರಿ
Next articleಚಿನ್ನ ಅಡವಿಟ್ಟು ಸಾಲ ಪಡೆಯುವವರಿಗೆ ಕೇಂದ್ರ ಸರಕಾರದಿಂದ ಗುಡ್ ನ್ಯೂಸ್