
ಇತ್ತೀಚಿನ ದಿನದಲ್ಲಿ ಚಿಕ್ಕ ಮಕ್ಕಳನ್ನು ಸುರಕ್ಷತೆ ಕ್ರಮ ತೆಗೆದುಕೊಳ್ಳದೇ ವಾಹನದಲ್ಲಿ ಕೊಂಡೊಯ್ದು ಬಳಿಕ ಅಪಘಾತ ಇನ್ನಿತರ ಪ್ರಕರಣ ಆಗುವ ಸಾಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಹಾಗಾಗಿ 9ತಿಂಗಳ ಮಗುವಿನಿಂದ ಹಿಡಿದು ಹತ್ತು ವರ್ಷದ ವರೆಗೆ ಕೂಡ ಮಕ್ಕಳನ್ನು ಸುರಕ್ಷಿತವಾಗಿ ಕೊಂಡೊಯ್ಯಬೇಕಾದದ್ದು ಪೋಷಕರ ಜವಾಬ್ದಾರಿ. ಈ ನೆಲೆಯಲ್ಲಿ ಮಕ್ಕಳಿಗೆ ಸುರಕ್ಷಿತ ಕವಚ ಇತ್ಯಾದಿ ಅಗತ್ಯಗಳ ಬಗ್ಗೆ ತುರ್ತು ಕ್ರಮ ಕೋರಿ ಸಾರ್ವಜನಿಕ ಹಿತಾಸಕ್ತಿಯಲ್ಲಿ ತೆಗೆದುಕೊಂಡ ಕೆಲ ಅಗತ್ಯ ಕ್ರಮದ ಬಗ್ಗೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಮಾರ್ಗದರ್ಶನ ನೀಡಿದೆ.
ಡಾ. ಅರ್ಚನಾ ಭಟ್ ಅವರು ಒಂದು ಅರ್ಜಿಯನ್ನು ಸಲ್ಲಿಸಿದ್ದು ಅದರ ಪ್ರಕಾರ ರಾಜ್ಯ ಸರಕಾರಕ್ಕೆ ಈ ಒಂದು ನೋಟಿಸ್ ಅನ್ನು ಮುಖ್ಯ ನ್ಯಾಯ ಮೂರ್ತಿ ಪ್ರಸನ್ನ ಬಿ ವರಾಳೆ ಹಾಗೂ ಮುಖ್ಯ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ವಿಭಾಗೀಯ ಪೀಠವು ನೋಟಿಸ್ ಜಾರಿ ಮಾಡಿದೆ. ಈ ಮೂಲಕ ಮಾರ್ಗ ಸೂಚಿ ಸಹ ಅನೇಕ ನಿಯಮ ಮರು ಪರಿಶೀಲನೆಗೆ ಸಹ ಕಾರಣ ಆಗಿದೆ ಎಂದು ಹೇಳಬಹುದು.
ಅರ್ಜಿಯಲ್ಲಿ ಇರೋದೇನು?
ಡಾ. ಅರ್ಚನಾ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ಕೇಂದ್ರ ಮೋಟಾರು ವಾಹನ ಕಾಯ್ದೆ ನಿಯಮ 138 (7), ಮೋಟಾರು ವಾಹನ ಕಾಯ್ದೆ ಸೆಕ್ಷನ್ 129, ಮೋಟಾರ್ ಕಾಯ್ದೆ ನಿಯಮ ಎರಡನೇ ತಿದ್ದುಪಡಿ ನಿಯಮ 2022, 137, 194ಅನ್ನು ಸಮಗ್ರವಾಗಿ ಅನುಷ್ಠಾನಗೊಳಿಸಲು ಪ್ರಾಧಿಕಾರಕ್ಕೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ಈ ಮಾಹಿತಿ ತಿಳಿದಿರಿ
ಕೇಂದ್ರ ಮೋಟಾರ್ ವಾಹನ ಕಾಯ್ದೆಗೆ 2022ರಲ್ಲಿ ಸೇರಿಸಲಾದ ನಿಯಮ 138(7)ರ ಅಡಿಯಲ್ಲಿ 9ತಿಂಗಳಿನಿಂದ 4ವರ್ಷದ ಒಳಗಿನ ಮಕ್ಕಳಿಗೆ ಸುರಕ್ಷತಾ ಕ್ರಮ ಅನುಸರಿಸುವುದು ತುಂಬಾ ಅಗತ್ಯ ಎಂಬ ಮಾಹಿತಿಯನ್ನು ಎತ್ತಿಹಿಡಿಯಲಾಗಿದೆ. ಮಗುವನ್ನು ಮೋಟಾರ್ ಬೈಕ್ ಅಥವಾ ಸ್ಕೂಟಿ ಮೇಲೆ ಕರೆದುಕೊಂಡು ಹೋಗುವಾಗ ಸುರಕ್ಷತಾ ಕವಚ ಧರಿಸುವುದು ಕಡ್ಡಾಯವಾಗಿದೆ. ಇದು ಚಾಲಕರು ಭುಜದ ಮೇಲೆ ಧರಿಸಿ ಬಳಸಿ ಮಗುವನ್ನು ಸುರಕ್ಷಿತವಾಗಿ ಕೊಂಡೊಂಯ್ಯುವ ಒಂದು ಸಾಧನವಾಗಿದೆ.
ಸುರಕ್ಷಿತ ಕವಚದ ವ್ಯವಸ್ಥೆಗೆ ಕೂಡ ನಿರ್ದಿಷ್ಟ ಮಾನದಂಡಗಳಿವೆ. 30 ಕೆ.ಜಿ ತೂಕ ಹಿಡಿದಿಡುವ ಸಾಮರ್ಥ್ಯ ಹೊಂದುವಂತೆ ಇರಬೇಕು. ಜಲನಿರೋಧಕ, ಗಟ್ಟಿಮುಟ್ಟಾದ ಬಾಳಿಕೆ ಬರುವಂತಹ ವ್ಯವಸ್ಥೆ ಹೊಂದಿರಬೇಕು ಎಂಬ ಸಾಮಾನ್ಯ ನಿಯಮ ಕೂಡ ಇದೆ.ಇದು ಮಕ್ಕಳಿಗೆ ಆಸನದ ವ್ಯವಸ್ಥೆ ಸುರಕ್ಷತಾ ಕವಚ ನೀಡಿದಂತಾಗುವುದು. ಇದರಿಂದಾಗಿ ಮಗು ವಾಲುವುದನ್ನು, ಆಯತಪ್ಪುವುದನ್ನು ತಡೆಯ ಬಹುದಾಗಿದೆ. ಸುರಕ್ಷತಾ ಕವಚ ಬ್ಯುರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಆ್ಯಕ್ಟ್ 2016ರ ಮಾನದಂಡಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕಿದೆ.
