ಕೃಷಿ ಯೋಜನೆಗೆ ನೆರವಾಗಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕವಿಧವಾಗಿ ಪ್ರೋತ್ಸಾಹ ನೀಡುತ್ತಿದ್ದು ಇದೀಗ ನೀರಾವರಿ ಸೌಲಭ್ಯ ನೀಡುವ ಸಲುವಾಗಿ ಹೊಸತೊಂದು ಪರಿಕಲ್ಪನೆ ಜಾರಿಗೆ ಮುಂದಾಗಿದೆ. ಕೃಷಿ ಚಟುವಟಿಕೆಗೆ ಆದ್ಯತೆ ನೀಡುವ ನೆಲೆಯಲ್ಲಿ ನೀರು ನಿರ್ವಹಣೆ ಮಾಡಲು ಪೈಪ್ ವಿತರಣೆ ಮಾಡಲು ಮುಂದಾಗಲಾಗಿದೆ. ಹಾಗಾದರೆ ಯಾರು ಈ ಯೋಜನೆಗೆ ಫಲಾನುಭವಿಗಳಾಗಲು ಯಾರು ಅರ್ಹರು ಇದಕ್ಕೆ ಅವರು ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ನಾವಿಂದು ನಿಮಗೆ ನೀಡಲಿದ್ದೇವೆ.
ಯೋಜನೆಯ ಹೆಸರೇನು?
ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ರೈತರಿಗೆ ಕೃಷಿ ಹೊಂಡ ನೀರಾವರಿ ಸೌಲಭ್ಯ ನೀಡಲು ಸರಕಾರಮುಂದಾಗಿದೆ. ನೀರಾವರಿ ಯನ್ನು ಅವಲಂಬಿಸಿಯೇ ಬೆಳೆ ತೆಗೆಯಲು ಮುಂದಾದ ಅನೇಕ ರೈತರು ಈ ಕೃಷಿಯನ್ನು ಅವಲಂಬಿಸಿದ್ದಾರೆ. ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಶೇಂಗಾ, ಮೆಕ್ಕೆ ಜೋಳ, ಭತ್ತ ಇತರ ಕೃಷಿ ಅವಲಂಬಿತ ರೈತರಿಗೆ ರಾಜ್ಯ ಸರಕಾರ ನೀರಾವರಿ ಸೌಲಭ್ಯ ನೀಡುವಸಲುವಾಗಿ ಪೈಪ್ ವಿತರಣೆ ಮಾಡಲು ಮುಂದಾಗುತ್ತಿದೆ.
ಸಬ್ಸಿಡಿ ವಿತರಣೆ
ಅಧಿಕ ತೋಟಗಾರಿಕೆ ಕೃಷಿ ಮಾಡುವವರಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಅಗತ್ಯ ತುಂಬಾನೇ ಇರಲಿದೆ ಅಂತವರಿಗೆ ಅನುಕೂಲ ಆಗಲೆಂಬ ಉದ್ದೇಶಕ್ಕೆ ಸಬ್ಸಿಡ ವಿತರಣೆಯನ್ನು ಸಹ ಮಾಡಲಾಗುತ್ತಿದೆ. 90% ನಷ್ಟು ಸಬ್ಸಿಡಿ ವಿತರಣೆ ಮಾಡಲಾಗುತ್ತಿದ್ದು ಎರಡು ಇಂಚಿನ ಲಿಂಕ್ ಕ್ಲರಿಗೆ 1932ರೂಪಾಯಿ ಹಾಗೂ 2.5ಇಂಚಿನ ಪೈಪಿಗೆ 2,070 ರೂಪಾಯಿ ಆಗಲಿದೆ. ಇದನ್ನು ರೈತರು ಖರೀದಿ ಮಾಡಬಹುದು. ಇದರ ಜೊತೆಗೆ ಸ್ಪ್ರಿಂಕ್ಲರ್ ಕೂಡ ಕೊಡುಗೆಯಾಗಿ ನೀಡಲಾಗುತ್ತದೆ. ಹಾಗಾಗಿ ಇದಕ್ಕೆ ಅರ್ಜಿ ಸಲ್ಲಿಕೆಗೆ ಆಹ್ವಾನಿಸಲಾಗಿದೆ.
ಈ ದಾಖಲೆಗಳು ಅಗತ್ಯ
ಸರಕಾರ ಸ್ಪಿಂಕ್ಲರ್ ಖರೀದಿ ಮಾಡಲು 90% ನಷ್ಟು ಸಬ್ಸಿಡಿ ದರ ಸಿಗಲಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಅರ್ಜಿ ನಮೂನೆ, ಫೋಟೊ, ಪಾನ್ ಕಾರ್ಡ್ , ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಪಂಚಾಯತ್ ಠರಾವ್, 20 ರೂಪಾಯಿ ರೈತರ ಬಾಂಡ್ ಇರಬೇಕು, RC ಬುಕ್ ಇತರ ಮಾಹಿತಿ ಅಗತ್ಯವಾಗಿದೆ. ಈ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಬಹುದು.
ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಿ
ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಸರಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಹಾಕಬಹುದು. ಅದಕ್ಕಾಗಿ https://kkisan.karnataka.gov.in/Citizen ಬಳಿಕ ನಿಮ್ಮ ಮೊಬೈಲ್ ನಂಬರ್ ಗೆ OTP ಬರಲಿದೆ. ಬಳಿಕ ಅದರಲ್ಲಿ ಆರ್ಥಿಕ ವರ್ಷ ಸೆಲೆಕ್ಟ್ ಆಗಲಿದೆ. ಅದರಲ್ಲಿ ಸ್ಪ್ರಿಂಕ್ಲರ್ ಮತ್ತು ಡೀಪ್ ಇರಿಗೇಶನ್ ಕೂಡ ಇರಲಿದೆ. ಹೀಗೆ ಎಲ್ಲ ಮಾಹಿತಿ ಭರ್ತಿ ಮಾಡಿದರೆ ನೀವು ಯೋಜನೆಗೆ ಅರ್ಹ ರಾಗಲಿದ್ದಾರೆ.
