Home ರಾಜ್ಯ ಸರಕಾರ ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆ

ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆ

ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಜಾರಿಗೆ ಬಂದಾಗ ಪಂಚ ಗ್ಯಾರೆಂಟಿ ನೀಡುವ ಭರವಸೆ ನೀಡಿತ್ತು. ಅದೇ ರೀತಿ ಪಂಚ ಗ್ಯಾರೆಂಟಿ ನಲ್ಲಿ ನಾಲ್ಕು ಗ್ಯಾರೆಂಟಿಗಳು ಸನ್ನಹಿತವಾಗಿದೆ. ಆದರೆ ಐದನೇ ಗ್ಯಾರೆಂಟಿಯಾದ ಯುವನಿಧಿ ಇನ್ನೇನು ಕೆಲವೇ ದಿನದಲ್ಲಿ ಜಾರಿಯಾಗಬೇಕಿದೆ. ಅದರ ನಡುವೆಯೇ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹಣಕಾಸಿನ ಸೌಲಭ್ಯ ಸಿಗುತ್ತಿದ್ದು ಇದೀಗ ಈ ಯೋಜನೆ ವಿಚಾರಕ್ಕೆ ಹೊಸತೊಂದು ಸೇರ್ಪಡೆಯಾಗುತ್ತಿದೆ.

10KG ಅಕ್ಕಿ ಉಚಿತ ಯೋಜನೆ
ರಾಜ್ಯ ಸರಕಾರದ ಮಹತ್ವದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಕೇಂದ್ರ ಸರಕಾರದ ಸಹಯೋಗದ ಮೂಲಕ ಉಚಿತ ಅಕ್ಕಿ ನೀಡಲಾಗುತ್ತಿತ್ತು. ಆದರೆ ಸರಕಾರ ಗ್ಯಾರೆಂಟಿ ಭರವಸೆಯಲ್ಲಿ ಐದು ಕೆಜಿ ಬದಲಿಗೆ ಹತ್ತು ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿತ್ತು ಆದರೆ ಕೇಂದ್ರ ಸರಕಾರದ ಸರಿಯಾದ ಸಹಕಾರ ಇಲ್ಲದೆ ಈ ಯೋಜನೆ ಯಶಸ್ವಿ ಆಗಲಿಲ್ಲ ಎಂದು ಹೇಳಬಹುದು. ಹಾಗಿದ್ದರೂ ನುಡಿದಂತೆ ನಡೆಯುವ ಸಲುವಾಗಿ ರಾಜ್ಯ ಕಾಂಗ್ರೆಸ್ ಸರಕಾರವು ಅಕ್ಕಿ ಬದಲು ಹಣ ನೀಡಲು ಮುಂದಾಗಿತ್ತು.

ಅಕ್ಕಿ ಬದಲು ಹಣ
ಈ ಹಣವನ್ನು ಪಡಿತರ ಸಂಖ್ಯೆಗೆ ಅನುಗುಣವಾಗಿ ಒಬ್ಬೊಬ್ಬರಿಗೆ 174ರೂಪಾಯಿ ಯಂತೆ ನೀಡಲು ಚಿಂತಿಸಲಾಗಿತ್ತು. ಬಳಿಕ ಹಣವನ್ನು ಮನೆಯ ಯಜಮಾನಿ ಖಾತೆಗೆ ಜಮಾ ಮಾಡಲಾಗುವುದು ಎಂದು ಸಹ ಸರಕಾರ ಭರವಸೆ ನೀಡಿದ್ದು ಇದುವರೆಗೆ ಮನೆಯ ಹಿರಿಯ ಸದಸ್ಯೆ ಮಹಿಳೆ ಯಜಮಾನಿಯ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಆದರೆ ಈ ನಡುವೆ ಸಾರ್ವಜನಿಕರಿಂದ ದೂರೊಂದು ಕೇಳಿ ಬರುತ್ತಿದ್ದು ಹಣ ಬಂದಿಲ್ಲ ಎಂಬ ದೂರೇ ಅಧಿಕವಾಗುತ್ತಿದೆ. ಹಾಗಾಗಿ ಸರಕಾರ ನೂತನ ತೀರ್ಮಾನ ತೆಗೆದುಕೊಳ್ಳಲು ಚಿಂತನೆ ನಡೆಸಿದೆ.

ಅನೇಕ ದೂರು
ತಿಂಗಳಲ್ಲಿ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಹಣ ಬಂದಿಲ್ಲ ಅನ್ನೊ ದೂರು ಈಗ ಅಧಿಕವಾಗುತ್ತಿದೆ. 10 ಸಾವಿರಕ್ಕೂ ಅಧಿಕ ದೂರು ಸರಿಯಾಗಿ ಹಣ ಬಂದಿಲ್ಲ ಎಂದು ಬಂದಿದ್ದರೆ ಅದರಲ್ಲಿ ಕೂಡ ಭಾಗಶಃ ಜನರು ಹಣವೇ ಒಂದು ಬಾರಿ ಕೂಡ ಬಂದಿಲ್ಲ ಎಂದು ದೂರುತ್ತಿದ್ದಾರೆ. ಇದುವರೆಗೆ ಸರಕಾರ ಕಾರ್ಡಿನಲ್ಲಿ ಯಜಮಾನಿ ಸ್ಥಾನದಲ್ಲಿರುವ ಮಹಿಳೆ ಖಾತೆಗೆ ಮಾತ್ರ ಹಣ ಹಾಕುದಾಗಿ ತಿಳಿಸಿತ್ತು ಆದರೆ ಈಗ ದೂರು ಬಂದ ಹಿನ್ನೆಲೆ ನಿಯಮ ಸ್ವಲ್ಪ ಸಡಿಲಿಸಲಾಗಿದೆ.

ಇನ್ನು ಮುಂದೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹಣ ಬಂದಿಲ್ಲ ಎಂಬ ದೂರು ಇದ್ದರೆ ಆಗ ಮನೆಯ ಎರಡನೇ ಯಜ‌ಮಾನಿ ಸ್ಥಾನದಲ್ಲಿ ಇದ್ದವರಿಗೆ ಹಣ ಹಾಕಲು ಸರಕಾರ ಮುಂದಾಗಿತ್ತು. ಈ ಬಗ್ಗೆ ಕ್ಯಾಬಿನೆಟ್ ನಿಂದ ಕೂಡ ಒಪ್ಪಿಗೆ ಪಡೆಯಲಾಗುತ್ತಿದ್ದು 9ಲಕ್ಷಕ್ಕಿಂತ ಅಧಿಕ ಬಿಪಿಎಲ್ ಕಾರ್ಡ್ ದಾರರಿಗೆ ಇದರ ಒಂದು ಲಾಭ ಸಿಗಲಿದೆ ಎಂದು ಹೇಳಬಹುದು. ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ತಿಳಿಸಿ.

 
Previous articleನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೋಗಿದ್ಯಾ? ಹಾಗಿದ್ರೆ ಈ ಸರಳ ಮಾರ್ಗ ಅನುಸರಿಸಿ
Next articleಎಟಿಎಮ್ ಬಳಕೆ ಈಗ ಮತ್ತಷ್ಟು ದುಬಾರಿ, ಹಣ ವಿತ್ ಡ್ರಾ ಮಾಡುವ ಮುನ್ನ‌ ಈ ವಿಚಾರ ಅರಿಯಿರಿ