
ಶಿಕ್ಷಣ ಪಡೆದವರು ಉತ್ತಮ ನೌಕರಿಗಾಗಿ ಕಾದು ಕಾದು ನಿರುದ್ಯೋಗ ಪ್ರಮಾಣ ಏರುತ್ತಿದೆ. ಸ್ವ ಕ್ಷೇತ್ರದಲ್ಲಿ ಗುರುತಿಸುವ ಸಲುವಾಗಿ ಕೃಷಿ ಒಂದು ಲಾಭದಾಯಕ ವಿಚಾರವಾಗಿದ್ದು ಈ ಬಗ್ಗೆ ಹೆಚ್ಚಿನ ಯುವ ಸಮೂಹ ಗಮನಹರಿಸಿಲ್ಲ. ಕೃಷಿ ಕ್ಷೇತ್ರದಲ್ಲಿ ತೊಡಗಿಕೊಳ್ಳುವವರ ಪ್ರಮಾಣ ಅಧಿಕ ಮಾಡಲು ಇಂದು ಅನೇಕ ವಿಧವಾಗಿ ಅರಿವು ಮೂಡಿಸುವ ಪ್ರಯತ್ನ ನಿರಂತರವಾಗಿ ಸಾಗುತ್ತಲೇ ಇದೆ. ಹಾಗಾಗಿ ಇತ್ತೀಚಿನ ದಿನದಲ್ಲಿ ಕೃಷಿಗೆ ಆಧುನಿಕ ಸ್ಪರ್ಷ ನೀಡಿ ಕೃಷಿ ಉತ್ತೇಜಿಸುವ ಕಾರ್ಯಕ್ರಮ ಜಾರಿ ಮಾಡಲಾಗುತ್ತಿದೆ.
ಕೃಷಿ ಅನಾಸಕ್ತಿಗೆ ಕಾರಣ
ಕೃಷಿ ಮಾಡಲು ಹಿಂದೇಟು ಹಾಕಲು ಅನೇಕ ಕಾರಣ ಇದೆ ಅದರಲ್ಲಿ ಮೈ ಶ್ರಮ ಪಡಬೇಕು, ಊರಲ್ಲಿ ಮರ್ಯಾದೆ ಕೊಡಲಾರರು, ಮದುವೆಗೆ ಸಮಸ್ಯೆ ಆಗಬಹುದು, ನಷ್ಟದ ಭಯಹೀಗೆ ಅನೇಕ ಕಾರಣಕ್ಕೆ ಇತ್ತೀಚಿನ ಯುವ ಸಮುದಾಯ ಕೃಷಿ ಕಾರ್ಯಚಟುವಟಿಕೆಯಿಂದ ಹೊರ ಸರಿಯುತ್ತಿದ್ದಾರೆ. ಹಾಗಾಗಿ ಕೃಷಿಯನ್ನು ಲಾಭದಾಯಕ ಮತ್ತು ಸುಲಭ ಕೃಷಿ ವಿಧಾನ ಅನುಸರಿಸಲು ಪ್ರಾಮುಖ್ಯತೆಯನ್ನು ಸರಕಾರ ನೀಡಲಾಗುತ್ತಿದೆ. ಹಾಗಾಗಿ ಸುಲಭ ಕೃಷಿ ಪರಿಕಲ್ಪನೆ ಅಡಿಯಲ್ಲಿ ಕೃಷಿಗೆ ಹೈಟೆಕ್ ಸ್ಪರ್ಷ ನೀಡಲಾಗುತ್ತಿದೆ.
ಹೊಸ ನಿರ್ಣಯ
ಪ್ರಸ್ತುತ ಆಡಳಿತದಲ್ಲಿ ಇರುವ ಕಾಂಗ್ರೆಸ್ ಸರಕಾರವು ಅನೇಕ ಜನಪರ ಕಾರ್ಯಕ್ರಮ ಹಾಗೂ ಪಂಚ ಯೋಜನೆ ಮೂಲಕಜನ ಮನ ಗೆಲ್ಲುತ್ತಿದೆ. ಈ ಯೋಜನೆಯ ಜೊತೆ ಜೊತೆಗೆ ಉಪ ಯೋಜನೆ ಕೂಡ ಅಧಿಕ ಮಾನ್ಯತೆ ನೀಡುತ್ತಿದ್ದಾರೆ. ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿ ಬದಲಾಯಿಸುವ ಸಲುವಾಗಿ ಕೃಷಿಗೆ ಆಧುನಿಕ ಸ್ಪರ್ಷ ನೀಡುತ್ತಿದ್ದಾರೆ. ಸರಕಾರವು 100ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪಿಸಲು ಮುಂದಾಗಿದೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಮಾತನಾಡಿದ್ದು ಸದ್ಯ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದೆ.
ಅಧಿಕ ಇಳುವರಿ ಜೊತೆ ಲಾಭ
ಡಿಸೆಂಬರ್ 23ರಂದು ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ. ಕೃಷಿಯನ್ನು ಲಾಭದಾಯಕವಾಗಿ ಪರಿವರ್ತಿಸುವ ನೆಲೆಯಲ್ಲಿ ಬಂಡವಾಳ ವೆಚ್ಚ ಮೊದಲು ತಗ್ಗಿಸಬೇಕು. ಅಧಿಕ ಲಾಭ ರೈತರ ಕೈ ಸೇರುವಂತೆ ಮಾಡಲು ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಹೈಟೆಕ್ ಹಾರ್ವೆಸ್ಟರ್ ಸ್ಥಾಪನೆ ಮಾಡಲಾಗುವುದು. ಸುಮಾರು ನೂರು ಕೋಟಿ ರೂಪಾಯಿ ವೆಚ್ಚದಲ್ಲಿ 100 ಹೈಟೆಕ್ ಹಬ್ ಶೀಘ್ರ ಸ್ಥಾಪನೆಯಾಗಲಿದೆ ಎಂದು ಅವರು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರು ಇವಿಷ್ಟು ಸಂಗತಿಯ ಜೊತೆಗೆ ಬರಗಾಲ ಪರಿಹಾರ ಮೊದಲ ಕಂತಿನ 2000ರೂಪಾಯಿ ಯನ್ನು ಬಿಡುಗಡೆ ಮಾಡಿದರು. ಈ ಮೂಲಕ ಜಿಲ್ಲಾವರು ಗುರುತಿಸಲ್ಪಟ್ಟ ಪ್ರದೇಶಗಳಿಗೆ ಅರ್ಹ ರೈತರಿಗೆ ಈ ಮೊತ್ತ ಲಭ್ಯವಾಗಿದ್ದು ಬರಗಾಲ ಪರಿಹಾರಕ್ಕೆ ನೀರಾವರಿ ಉತ್ತೇಜಿಸುವ ಕ್ರಮ ಕೂಡ ಶೀಘ್ರ ಜಾರಿಯಾಗುವುದಾಗಿ ಕೂಡ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
