
ರೈತ ದೇಶದ ಬೆನ್ನೆಲುಬು ಎಂಬ ಮಾತಿದೆ. ಹಾಗಾಗಿ ರೈತರಿಗೆ ಸಂಕಷ್ಟ ಬಂದರೇ ಅದನ್ನು ದೇಶದ ದೊಡ್ಡ ಸಮಸ್ಯೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ರೈತರ ಸಂಕಷ್ಟಕ್ಕೆ ಮರುಗದ ಸರಕಾರ ಎಂದಿಗೂ ಜನ ಮಾನ್ಯತೆ ಪಡೆಯದು ಅದಕ್ಕಾಗಿಯೇ ಪ್ರತೀ ಸರಕಾರ ಕೂಡ ರೈತ ಪರ ಕಾಳಜಿ, ಯೋಜನೆ ಜಾರಿಗೆ ತರುತ್ತಲಿದ್ದು ಈಗ ಬರಗಾಲದಿಂದ ಸಂಕಷ್ಟಕ್ಕೆ ಒಳಗಾದ ರೈತರಿಗೊಂದು ಶುಭ ಸುದ್ದಿ ಸಿಗುತ್ತಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ.
ರೈತಪರ ಯೋಜನೆ
ರೈತರ ಕೃಷಿ ಚಟುವಟಿಕೆ ಬೆಂಬಲಿಸುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕ ವಿಧವಾದ ಯೋಜನೆ ಜಾರಿಗೆ ತಂದಿದೆ. ಕೃಷಿ ಚಟುವಟಿಕೆ ಲಾಭದಾಯಕ ಮಾರ್ಗದತ್ತ ಜಾರಿಗೆ ತರಲು ಅನೇಕ ಪ್ರಯತ್ನ ಈ ಹಿಂದಿನಿಂದಲೂ ನಡೆಯುತ್ತಿದೆ. ರೈತರಿಗಾಗಿ ಕಡಿಮೆ ಬಡ್ಡಿದರದಲ್ಲಿ ನೀಡುವ ಸಾಲ ಸೌಲಭ್ಯದಿಂದ ಸಹಾಯಧನ ಇತರ ಯೋಜನೆ ಕೂಡ ಪರಿಚಿತವೇ ಆಗಿದೆ. ಇದೀಗ ಕರ್ನಾಟಕ ಸರಕಾರ ಬರಗಾಲ ಪರಿಹಾರ ಮೊತ್ತ ನೀಡುತ್ತಿದ್ದು ರೈತರಿಗೆ ಇದು ಶುಭ ಸಮಾಚಾರ ಆಗಿದೆ.
ಹಣ ಮಂಜೂರು
ಇತ್ತೀಚೆಗೆ ಪ್ರಾಕೃತಿಕ ವಿಕೋಪದ ಪರಿಣಾಮ ಮತ್ತು ಮಳೆಯ ಅಭಾವದಿಂದಾಗಿ ಬರಗಾಲ ಪರಿಸ್ಥಿತಿ ನಿರ್ಮಾಣ ಆಗಿದ್ದು ಅದಕ್ಕೆ ಪರಿಹಾರ ಮೊತ್ತ ನೀಡಲು ಸರಕಾರ ಮುಂದಾಗಿದೆ. ಈ ಮೂಲಕ ಬರಗಾಲ ಪರಿಹಾರದ ಮೊದಲ ಕಂತಿನ 2000 ಮೊತ್ತ ಬಿಡುಗಡೆ ಮಾಡಲು ಸರಕಾರ ಮುಂದಾಗಿದ್ದು ಈಗಾಗಲೇ ರಾಜ್ಯದ ಅನೇಕ ಭಾಗದಲ್ಲಿ ಘೋಷಿತ ದಾಖಲಿತ ಇರುವ ಬರಗಾಲ ಸ್ಥಳಗಳನ್ನು ಗುರುತಿಸಿ ಹಣ ಮಂಜೂರು ಮಾಡಲಾಗಿದೆ.
ಸಿಎಂ ಬೆಂಬಲ
ಬರಗಾಲ ಉಳ್ಳ ಪ್ರದೇಶಗಳಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಈ ವಿನೂತನ ಯೋಜನೆಗೆ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ. ರಾಷ್ಟ್ರೀಯ ರೈತ ದಿನದ ಸಂಭ್ರಮದಲ್ಲಿ ಪಾಲ್ಗೊಂಡಾಗಲೂ ಕೂಡ ಕೃಷಿಯನ್ನು ಲಾಭದಾಯಕ ಕ್ಷೇತ್ರವಾಗಿ ಮಾಡುವ ಭರವಸೆಯನ್ನು ಅವರು ನೀಡಿದರು. ಈ ಮೂಲಕ ಒಂದುವರೆ ದಶಕಕ್ಕಿಂತ ಅಧಿಕ ಕಾಲ ಸಾಗುವಳಿ ಮಾಡಿದರೆ ಅಂತಹ ಪ್ರದೇಶವನ್ನು ಬಗರ್ ಹುಕ್ಕುಂ ಭೂಮಿಯನ್ನು ಸಕ್ರಮಗೊಳಿಸಲು ಭೂ ಒಡೆತನದ ಹಕ್ಕು ರೈತರಿಗೆ ನೀಡುವ ಬಗ್ಗೆ ಅವರು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಬರಗಾಲದಿಂದ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಈ ಒಂದು ಮೊತ್ತ ದೊಡ್ಡ ಮಟ್ಟದಲ್ಲಿ ಹಣವಲ್ಲದಿದ್ದರೂ ಅಗತ್ಯ ಆಹಾರ ಸಾಮಾಗ್ರಿ ಕೊಳ್ಳುವುದಕ್ಕಾದರೂ ಈ ಹಣ ತುಂಬಾ ಸಹಕಾರಿ ಆಗಲಿದೆ ಎಂದು ಹೇಳಬಹುದು. ಸದ್ಯ ಕಾಂಗ್ರೆಸ್ ಸರಕಾರವು ನೀಡಿದ್ದ ಭರವಸೆಯಂತೆ ಬರಗಾಲ ಪರಿಹಾರದ ಮೊದಲ ಕಂತಿನ ಹಣ ಬಿಡುಗಡೆ ಮಾಡಿದ್ದು ಮುಂದಿನ ದಿನದಲ್ಲಿ ಇನ್ನಷ್ಟು ಹಣ ಬಿಡುಗಡೆ ಆಗಲಿದೆ.
