
ರಾಜ್ಯದಲ್ಲಿ ರೈತರಿಗೆ ಮಳೆ ಅಭಾವ ದಿಂದಾಗಿ ಹಲವಾರು ರೀತಿಯ ತೊಂದರೆಗಳನ್ನು ಈಗಾಗಲೇ ಅನುಭವಿಸಿದ್ದಾರೆ. ಈಗಾಗಲೇ ಬೆಳೆ ಹಾನಿ ಉಂಟಾಗಿದ್ದು ರೈತರಿಗೆ ಈ ವಾರದ ಅಂತ್ಯದಿಂದ 2,000 ರೂ. ಪರಿಹಾರವನ್ನು ಒದಗಿಸಲಿದೆ ಎಂದು ಕಂದಾಯ ಸಚಿವರು ಮಾಹಿತಿ ನೀಡಿದ್ದಾರೆ. ಈಗಾಗಲೇ ಸರಕಾರವು 46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೖಷಿ ಬೆಳೆ ಹಾಗೂ 1 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಹೀಗಾಗಿ ರೈತರ ಕಷ್ಟ ಅರಿತು ಬೆಳೆ ಪರಿಹಾರ ನಿಗದಿ ಪಡಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ 236 ತಾಲೂಕುಗಳಲ್ಲಿ ಈಗಾಗಲೇ ಹಂತಗಳಲ್ಲಿ 223 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ.
ಯಾವಾಗ ಸಿಗಲಿದೆ ಹಣ?
ಮೊದಲ ಕಂತಲ್ಲಿ ಸರಕಾರವು ಪ್ರತಿ ರೈತರಿಗೆ 2 ಸಾವಿರ ರೂಪಾಯಿಯನ್ನು ನೀಡಲಿದ್ದು ಉಳಿದ ಹಣವನ್ನು ಕೇಂದ್ರದಿಂದ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ. ಬರಗಾಲದಿಂದಾಗಿ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಎರಡು ಸಾವಿರ ರೂ.ವರೆಗಿನ ಬರ ಪರಿಹಾರ ಮೊತ್ತ ಇದೇ ವಾರದಲ್ಲಿ ರೈತರ ಖಾತೆಗೆ ಹಣ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಚೆಕ್ ಮಾಡಬಹುದು
ಹಣ ಜಮೆಯಾಗಿದೆಯೇ ಎಂದು ತಿಳಿದು ಕೊಳ್ಳಲು ಮೊದಲಿಗೆ ನೀವು https://parihara.karnataka.gov.in/service87/?utm ಇಲ್ಲಿ ಭೇಟಿ ನೀಡಿ. ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ವರ್ಷ, ಸೀಸನ್, calamity type ಎಂದು ಇದ್ದು ಸೀಸನ್‌ನಲ್ಲಿ ಖಾರಿಫ್ ಮತ್ತು calamity type ನಲ್ಲಿ Flood ಆಯ್ಕೆ ಮಾಡಿ. ನಂತರ Get report ಮೇಲೆ ಕ್ಲಿಕ್ ಮಾಡಿ ಇಲ್ಲಿ ನಿಮ್ಮ ಹೆಸರಿದ್ದು ಯಾವ ರೈತರಿಗೆ ಬರ ಪರಿಹಾರದ ಮೊತ್ತ ಲಭ್ಯವಾಗಿದೆ ಎಂಬ ಮಾಹಿತಿ ದೊರೆಯುತ್ತದೆ.
ಈ ಕೆಲಸ ಕಡ್ಡಾಯ ಮಾಡಿ
ಬರ ಪರಿಹಾರದ ಹಣವನ್ನು ರೈತರು ಪಡೇಯಬೇಕಾದರೆ ಕಡ್ಡಾಯವಾಗಿ ಎಫ್‌ಐಡಿ(FID) ಮಾಡಿಸಲೇಬೇಕು. ಇಲ್ಲದಿದ್ದಲ್ಲಿ ರೈತರು ಸರಕಾರದ ಯಾವುದೇ ಸೌಲಭ್ಯ ವನ್ನು ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಈ ಎಫ್‌ಐಡಿಯು ಕಡ್ಡಾಯವಾಗಿದೆ.ಎಫ್‌ಐಡಿಯನ್ನು ಮಾಡಿಸಿಕೊಂಡಿಲ್ಲದಿದ್ದರೆ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ, ರೇಷ್ಮೆ ಇಲಾಖೆ ಅಥವಾ ನಾಗರಿಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ಈ ಸೌಲಭ್ಯ ಜಾರಿ
ರಾಜ್ಯದಲ್ಲಿ ಈಗಾಗಲೇ ಮಳೆಯಾಗದೆ ಬರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಟ್ಟು 216 ತಾಲೂಕಿನಲ್ಲಿ ಬರ ಘೋಷಣೆ ಮಾಡಿದೆ. ಅಷ್ಟೆ ಅಲ್ಲದೆ ಕುಡಿಯುವ ನೀರಿಗೆ ಸಮಸ್ಯೆ ಇಲ್ಲದಂತೆ ಹಲವು ತಾಲ್ಲೂಕುಗಳಲ್ಲಿ 60 ಹಳ್ಳಿಗಳಲ್ಲಿ ಟ್ಯಾಂಕರ್ ನೀರಿನ ವ್ಯವಸ್ಥೆ, ಹೊರ ರಾಜ್ಯಕ್ಕೆ ಮೇವು ಹೋಗದಂತೆ ತಡೆದಿದ್ದು ಮೇವಿನ ಬೀಜ ವಿತರಣೆ ಇತ್ಯಾದಿ ಜಾರಿಗೆ ತರಲಾಗಿದೆ.
