Home ಸರಕಾರಿ ಯೋಜನೆಗಳು ರಾಜ್ಯ ಸರಕಾರ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಸರಕಾರದಿಂದ ಸಿಗುತ್ತೆ ಆರ್ಥಿಕ ನೆರವು

ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಸರಕಾರದಿಂದ ಸಿಗುತ್ತೆ ಆರ್ಥಿಕ ನೆರವು

0
ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಸರಕಾರದಿಂದ ಸಿಗುತ್ತೆ ಆರ್ಥಿಕ ನೆರವು

ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಏಳಿಗೆಗಾಗಿ ಸರಕಾರ ಹಲವಾರು ರೀತಿಯ ಯೋಜನೆಗಳನ್ನು ರೂಪಿಸುತ್ತಿದೆ. ಈಗಾಗಲೇ ರಾಜ್ಯ ಸರಕಾರ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಖಾತೆಗೆ ಜಮೆ ಮಾಡುತ್ತಿದೆ. ಮಹಿಳೆಯರು ಈ ದೇಶದ ಮುಖ್ಯ ಭಾಗವಾಗಿದ್ದು ಅವರು ಆರ್ಥಿಕ ವಾಗಿ ಸಾಮಾಜಿಕವಾಗಿ ಸಬಲರಾಗಬೇಕು. ತಾವು ದುಡಿಯುವ ಮೂಲಕ ಸಂಪಾದನೆ ಮಾಡಬೇಕು ಎಂಬ ನೆಲೆಯಲ್ಲಿ ಸ್ವ ಉದ್ಯೋಗ ಚಟುವಟಿಕೆ, ತರಭೇತಿ ಕಾರ್ಯಕ್ರಮ ಇತ್ಯಾದಿಗಳನ್ನು ಸರಕಾರ ರೂಪಿಸುತ್ತಿದೆ. ಮಹಿಳೆಯರು ಸ್ವಾವಲಂಬಿ ಬದುಕು ನಡೆಸುವ ಮೂಲಕ ಆರ್ಥಿಕ ಸಹಾಯಧನ ಕೂಡ ನೀಡುತ್ತಿದೆ.

ಸ್ವ ಉದ್ಯೋಗ ಬೆಂಬಲ
ಮಹಿಳೆಯರಿಗೆ ಸರಕಾರವು ಟೈಲರಿಂಗ್ ಬ್ಯೂಟಿ ಪಾರ್ಲರ್, ಕರಕುಶಲ ವಸ್ತುವಿನ ತಯಾರಿಕೆ, ನೇಕಾರಿಕೆ, ಇತ್ಯಾದಿ ‌ ಸ್ವ ಉದ್ಯೋಗ ಕಲ್ಪಿಸಿಕೊಳ್ಳಲು ಸಹಾಯಧನ ಮತ್ತು ಕಡಿಮೆ ಬಡ್ಡಿದರದ ಸಾಲ ಒದಗಿಸುತ್ತಿದ್ದು ಮಹಿಳೆಯರು ಈ ಯೋಜನೆಯ ಸೌಲಭ್ಯ ವನ್ನು ಪಡೆದು ಕೊಳ್ಳಬಹುದಾಗಿದೆ.

3 ಲಕ್ಷ ಬ್ಯಾಂಕ್ ಸಾಲ

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ 18 ವರ್ಷದಿಂದ 55 ವರ್ಷದೊಳಗೆ ಇರುವ ನಿರುದ್ಯೋಗಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕಾಗಿ ಸಹಾಯಧನ ಪಡೆಯಲು ಅವಕಾಶ ಇದೆ.ಹೌದು ಮಹಿಳೆಯರು ಉದ್ಯೋಗ ಪಡೆಯಲು 3 ಲಕ್ಷಗಳ ವರೆಗೆ ಬ್ಯಾಂಕ್ ಸಾಲ ನೀಡಲಾಗುತ್ತದೆ.

ಚೇತನ ಯೋಜನೆ

ಅದೇ ರೀತಿ ಚೇತನ ಯೋಜನೆ ಮೂಲಕ ದಮನಿತ ಮಹಿಳೆಯರಿಗೆ ಉದ್ಯೋಗ ಕೈಗೊಳ್ಳುವ ಮೂಲಕ ನಿಗಮದಿಂದ 30,000 ರೂ ಸಹಾಯಧನ ನೀಡಲಾಗುತ್ತದೆ. ಉದ್ಯೋಗಿನಿ ಯೋಜನೆಯ ಮೂಲಕವು ಮಹಿಳೆಯರು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಸ್ವಯಂ ಉದ್ಯೋಗ ಪಡೆದು ಕೊಳ್ಳಲು ಬ್ಯಾಂಕ್ ಮೂಲಕ ಸಾಲಮತ್ತು ನಿಗಮದ ಮೂಲಕ ಸಹಾಯಧನ ಪಡೆಯಬಹುದು.

ಧನಶ್ರೀ ಯೋಜನೆ

ಸ್ವಂತ ಉದ್ಯೋಗ ಪಡೆದು ಕೊಳ್ಳಲು ಮಹಿಳೆಯರಿಗೆ ಧನಶ್ರಿ ಯೋಜನೆ ಆರಂಭ ಮಾಡಲಾಗಿದ್ದು ಇದರ ವತಿಯಿಂದ 30,000 ರೂ. ಸಹಾಯಧನವನ್ನು ನೀಡಲಾಗುತ್ತದೆ. 18 ವರ್ಷದ ಮೀರಿದ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.ಮಹಿಳೆಯರು ಈ ಎಲ್ಲಾ ಯೋಜನೆಯ ಸವಲತ್ತು ಪಡೆದುಕೊಳ್ಳ ಬೇಕಾದರೆ https://sevasindhu.karnataka.gov.in/ ಈ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ

 

LEAVE A REPLY

Please enter your comment!
Please enter your name here