ಗ್ರಾಮೀಣ ಪ್ರದೇಶದಲ್ಲಿ ನೀರಾವರಿ ವ್ಯವಸ್ಥೆ ಇಲ್ಲದಿದ್ದಲ್ಲಿ, ಕೃಷಿ ಮಾಡಿಕೊಂಡ ರೈತರಿಗೆ ನೀರಿನ ಸಮಸ್ಯೆ ಉಂಟಾದಲ್ಲಿ ಸ್ಥಳದಲ್ಲಿ ಕೊಳವೆ ಬಾವಿ ನೀರಾವರಿ ವ್ಯವಸ್ಥೆ ಕಲ್ಪಿಸುವ ಉದ್ದೇಶದೊಂದಿಗೆ ಸರಕಾರವು ಗಂಗಾ ಕಲ್ಯಾಣ ಯೋಜನೆ ಜಾರಿ ಮಾಡಿದೆ.
ರೈತರಿಗಾಗಿ ಗಂಗಾ ಕಲ್ಯಾಣ ಯೋಜನೆ ಜಾರಿ ಮಾಡಿದ್ದು ಈ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ಜಮೀನಿನಲ್ಲಿ ಬೋರ್‌ವೆಲ್ ಕೊರೆಸುವುದರ ಜತೆಗೆ ಪಂಪ್‌ಸೆಟ್ ಅಳವಡಿಸಿಕೊಳ್ಳಲು ಸರ್ಕಾರ ಸಹಾಯಧನವನ್ನು ನೀಡಲಿದೆ.
ಒಟ್ಟು 1.5 ಲಕ್ಷ ರೂಪಾಯಿಯಿಂದ 3.50 ಲಕ್ಷ ರೂಪಾಯಿಗಳವರೆಗೆ ರೈತರು ಸರ್ಕಾರದಿಂದ ಆರ್ಥಿಕ ಸಹಾಯಧನ ಪಡೆಯಬಹುದಾಗಿದೆ. ಗಂಗಾ ಕಲ್ಯಾಣ ಯೋಜನೆಯ ಅರ್ಜಿ ಆರಂಭವಾಗಿದ್ದು, ಈ ಯೋಜನೆಗೆ ಅರ್ಜಿ ಹಾಕಲು ಸೆಪ್ಟೆಂಬರ್ 18 ಕೊನೆಯ ದಿನಾಂಕವಾಗಿದೆ.
ಅರ್ಹತೆ ಏನು?
*ಅರ್ಜಿದಾರರು 21 ವರ್ಷ ಮೇಲ್ಪಟ್ಟು 50 ವರ್ಷ ಒಳಗಿನವರು ಆಗಿದ್ದರೆ ಅರ್ಜಿ ಹಾಕಬಹುದು.
*ಅರ್ಜಿದಾರರು ಕನಿಷ್ಠ 2 ಮತ್ತು ಗರಿಷ್ಠ 5 ಕರೆ ಜಮೀನು ಹೊಂದಿರಬೇಕು.
*ಕರ್ನಾಟಕ ರಾಜ್ಯದವರಾಗಿರಬೇಕು ಹಾಗೂ ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು.
*ಗ್ರಾಮೀಣ ಪ್ರದೇಶದಲ್ಲಿ ರೂ 90,000 ಹಾಗೂ ನಗರ ಪ್ರದೇಶದಲ್ಲಿ 1.03 ಲಕ್ಷ ಆದಾಯ ಮೀರಿರಬಾರದು
*ಪರಿಶಿಷ್ಟ ಜಾತಿ/ ಪಂಗಡ ಅಥವಾ ಅಲ್ಪ ಸಂಖ್ಯಾತ ವರ್ಗದವರು ಅರ್ಜಿ ಹಾಕಬಹುದು.
ದಾಖಲೆಗಳು
*ಜಾತಿ ಪ್ರಮಾಣ ಪತ್ರ
*ಆದಾಯ ಪ್ರಮಾಣ ಪತ್ರ
*ಆಧಾರ್ ಕಾರ್ಡ್
*ರೇಷನ್ ಕಾರ್ಡ್
*ಬ್ಯಾಂಕ್ ಪಾಸ್ ಬುಕ್
*ಭೂ ಕಂದಾಯ ರಸಿದಿ ಪಾವತಿ
ಅರ್ಜಿ ಹಾಕಲು ರೈತರು https://kmdc.karnataka.gov ಈ ಲಿಂಕ್‌ನಲ್ಲಿ ಅರ್ಜಿ ಹಾಕಬಹುದು.
